Advertisement 

ಬೆಂಗಳೂರು, ನ.24: ಕೆ.ಆರ್.ಎಸ್. ಪಕ್ಷದ ವತಿಯಿಂದ ಮದ್ಯ ನಿಷೇಧ ಅಂದೋಲನ ನ. 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯಲಿದೆ. ಈ ಹೋರಾಟದಲ್ಲಿ ರಾಜ್ಯದ ನಾನಾ ಭಾಗಗಳಿಂದ ಬರಲಿರುವ ಸಾವಿರಾರು ಮಹಿಳೆಯರು ಭಾಗವಹಿಸಲಿದ್ದು, ಹಲವಾರು ಬೇಡಿಕೆಗಳನ್ನು ಸರಕಾರ ಗಮನಕ್ಕೆ ತರಳಿದೆ.
ಅಕ್ರಮ ಮದ್ಯ ಮಾರಾಟ ನಿಷೇಧ, ಸರಕಾರವು ಮದ್ಯದಂಗಡಿಗಳನ್ನು ತೆರೆಯುವ ಅಥವಾ ರದ್ದು ಮಾಡುವ ಅಧಿಕಾರವನ್ನು ಗ್ರಾಮಸಭೆಗಳಿಗೆ ನೀಡುವ ಕಾನೂನು ತರಬೇಕು, ಲೈಸೆನ್ಸ್ ಸಹಿತ ಅಂಗಡಿಗಳನ್ನು ಹೆಚ್ಚಿಸುವ ಮತ್ತು ಆನ್ ಲೈನ್ ನಲ್ಲಿ ಮದ್ಯ ಮಾರಾಟ ಮಾಡುವ ಯೋಜನೆಗಳನ್ನು ಸರಕಾರ ತಕ್ಷಣ ನಿಲ್ಲಿಸಬೇಕು, ಮೊದಲಾದ ಬೇಡಿಕೆಗಳನ್ನಿಟ್ಟುಕೊಂಡು ಕೆ.ಆರ್.ಎಸ್. ಪಕ್ಷ ಮದ್ಯ ನಿಷೇಧ ಆಂದೋಲನವನ್ನು ನಡೆಸುತ್ತಿದೆ.
ಸಮಾಜದ ಬಗ್ಗೆ ಕಳಕಳಿ ಉಳ್ಳವರು ದಯವಿಟ್ಟು ಸಮಯ ಹೊಂದಿಸಿಕೊಂಡು ಈ ಹೋರಾಟದಲ್ಲಿ ಭಾಗವಹಿಸಬೇಕೆಂದು ಕೆ.ಆರ್.ಎಸ್. ಪಕ್ಷದ ಗೌರವಾಧ್ಯಕ್ಷರಾದ ರವಿ ಕೃಷ್ಣ ರೆಡ್ಡಿ ಅವರು ವಿನಂತಿಸಿಕೊಂಡಿದ್ದಾರೆ.
Advertisement 





