ಕಲ್ಪನೆಯಲ್ಲಿ ಹಾರಾಡಬೇಡಿ; ಪ್ರಸ್ತುತತೆಯನ್ನು ಆಸ್ವಾದಿಸಿ ನೋಡಿ!

    0
    45
    Advertisement

    ಲೇಖನ: ಶಿವಪ್ರಸಾದ್ ಮಣಿಯೂರು

    ಒಂದು ಚೆಂದದ ಬದುಕು ಅಂದಾಗ ಹೆಚ್ಚಿನವರಿಗೆ ವ್ಯಾಮೋಹದ ಕಲ್ಪನಾತೀತ ಜೀವನವೇ ಖುಷಿಕೊಡುತ್ತವೆ. ಅಂತಹವರು ಮನಸ್ಸಿನ ಚಂಚಲತೆಯ ಜಾಡು ಹಿಡಿದು, ಸಮಾಜದ ಮುಂದೆ ನಾನೇನೊ ಅನಿಸಿಕೊಳ್ಳಬೇಕು ಎಂಬ ಕ್ಷುಲ್ಲಕ ಹಂಬಲಕ್ಕೆ ತಮ್ಮನ್ನು ತೆರೆದುಕೊಳ್ಳುತ್ತಾರೆ. ಅಲ್ಲದೆ ಒಂದಿಷ್ಟು ಪ್ರಯತ್ನ ಕೂಡ ಮಾಡ್ತಾರೆ ಬಿಡಿ, ಇಲ್ಲಿ ಸ್ವಪ್ರತಿಷ್ಠೆ ಕೂಡ ಮುಖ್ಯವಾಗುತ್ತವೆ..! ಆದ್ರೆ ಫೈನಲೀ, ಪ್ರಾಕ್ಟಿಕಲ್ ಅಂದಾಗ ಇದೆಲ್ಲವನ್ನೂ ಸಾಧಿಸಲಾಗದೇ ಇಕ್ಕಟ್ಟಿಗೆ ಸಿಲುಕಿದಾಗ ಮನುಷ್ಯ ಕುಗ್ಗಿಬಿಡುತ್ತಾನಲ್ಲ? That stage wiil be unpredictable..! ಹಾಗಾದರೆ ಬದುಕುವುದು ಅಂದರೇನು?!

    ಈ ಜಗತ್ತಿನಲ್ಲಿ ದಿನದ ಮಿತಿಯಲ್ಲಿ ಅದೆಷ್ಟೋ ಮಂದಿ ಸಾಯ್ತಾರೆ, ಅದೇ ಕ್ಷಣದಲ್ಲಿ ಸಾವಿರಾರು ಮನುಷ್ಯ ಜೀವಿಗಳ ಜನನವಾಗುತ್ತದೆ. ಹುಟ್ಟು- ಸಾವಿನ ನಡುವೆ ಬದುಕು ಅದೆಷ್ಟೋ ಸಲ ನಮಗೆ ಪ್ರಶ್ನಾರ್ಥಕವಾಗಿ ಕಾಡದೇ ಇರದು; Of course ಮನುಷ್ಯನ ಹುಟ್ಟಿನಲ್ಲಿ ಬದುಕು ಕಟ್ಟಿಕೊಳ್ಳುವವರು ಹಲವರು, ಹಾಗೆಯೇ ಸಾವಿನ ಅಂತ್ಯದಲ್ಲೂ! ಶವಗಾರದಲ್ಲಿರೊ ಕಟ್ಟಕಡೆಯ ವ್ಯಕ್ತಿಗೆ ಭವಿಷ್ಯದ ಬದುಕಿನ ಭರವಸೆ ಹುಟ್ಟೊದು ಒಂದು ದೇಹ ಮಣ್ಣಾದಾಗ‌..! ಯೆಸ್, ಮಾನವನ ಜೀವನದ ಪ್ರತಿ ಹಂತದಲ್ಲೂ ನಮಗೆ ತಿಳಿದೊ ತಿಳಿಯದೆಯೋ, ಸಂಕೋಲೆ ಕೊಂಡಿಯೊಂದು ಬೆಸೆದಿರುತ್ತವೆ. ತನಗೆ ಬೇಡವಾದ ತಲೆಕೂದಲು ಕ್ಷೌರಿಕನಿಗೆ ಆದಾಯ. ಹೊಟ್ಟೆ ತಣ್ಣಗಾಗಲು ಹೋಟೆಲಿಗೆ ಕಾಲಿಟ್ಟರೆ ಮಾಲೀಕನ ಜೇಬು ತುಂಬುತ್ತವೆ. ಕಳೆದ ಹಲವಾರು ವರ್ಷಗಳಿಂದ ನನಗೆ ಕಾಡುವ ಪ್ರಶ್ನೆಯೆಂದರೆ ಬದುಕುವುದು ಅಂದರೇನು? ಬದುಕುವುದು ಯಾತಾಕ್ಕಾಗಿ? ಮತ್ತು ಬದುಕುವುದು ಹೇಗೆ?! ಬಹಳ ಕ್ಲಿಷ್ಟಕರ ಪ್ರಶ್ನೆ ಅಂತ ಕೆಲವರಿಗೆ ಅನಿಸಿದರೆ ಹಲವರಿಗೆ ಬಾಲಿಶ ಹಾಗೂ ಸಿಲ್ಲಿ ಅನಿಸಿಬಿಡಬಹುದು. ಸೂರ್ಯ ಚಂದ್ರರ ನಡುವಿನ ದಿನದಲ್ಲಿ ಒಬ್ಬೊಬ್ಬರೂ, ಒಂದೊಂದು ರೀತಿಯಲ್ಲಿ ಬದುಕುತ್ತೇವೆ. ವಿವೇಕಾನಂದರು ಒಮ್ಮೆ ಹಡಗಿನಲ್ಲಿ ಯಾತ್ರೆ ಮಾಡುವಾಗ ವಿದೇಶಕ್ಕೆ ಕೆಲಸಕ್ಕಾಗಿ ಹೊರಟ ಒಬ್ಬನನ್ನು ಕಂಡರಂತೆ. ಹೀಗೆ ಮಾತಾಡುವಾಗ ನೀನು ಯಾಕೆ ವಿದೇಶಕ್ಕೆ ಹೋಗುವೆ ಎಂದು ಪ್ರಶ್ನಿಸಿದರು. ಕೆಲಸ ಮಾಡಿ ಹಣ ಮಾಡಲು ಅಂತ ಅವನ ಉತ್ತರ. ಅಮೇಲೆ‌? ಮತ್ತೆ ಪ್ರಶ್ನೆ ಹಾಕಿದರು. ಮನೆಯವರನ್ನೆಲ್ಲ‌ ಚೆನ್ನಾಗಿ ನೋಡ್ಕೊಳ್ತೀನಿ. ಪುನಃ ಅದೇ ಪ್ರಶ್ನೆ- ಮದ್ವೆ ಯಾಗ್ತೀನಿ, ಅಮೇಲೆ ಮಕ್ಕಳನ್ನು ಚೆನ್ನಾಗಿ ಓದಿಸ್ತೀನಿ… ಹೀಗೆ ಹೇಳುತ್ತಾ ಕೊನೆಗೆ ಅಸಹನೆಯಿಂದ ಸಾಯ್ತೀನಿ ಅಂದನಂತೆ! ಅದಕ್ಕೆ ವಿವೇಕಾನಂದರು ಶಾಂತವಾಗಿ ಅದನ್ನು ಇಲ್ಲೆ ಭಾರತದಲ್ಲಿ ಮಾಡಬಹುದಲ್ಲವೇ??! ಅಂತ ಹೇಳಿಬಿಟ್ಟರು!

    ಅಂದರೆ ಆಸೆಯ ಬೆನ್ನುಹತ್ತಿ ಹುಡುಕುತ್ತಾ ಹೊರಟರೆ ಕೊನೆಯಿಲ್ಲ, ಅಂತ್ಯದಲ್ಲೊಂದು ಸಾವು ಇದ್ದಿದ್ದೆ. ಸಮಾಜದಲ್ಲಿ ಹುಟ್ಟಿದ್ದರಿಂದ ಒಂದು‌ ಕೆಲಸ, ಒಂದು ಮನೆ, ಮದುವೆ-ಸಂಸಾರ ಎಂಬ ಕೂಪದಲ್ಲಿ ಬಹುತೇಕರು ಕಳೆದು ಬಿಡುತ್ತಾರೆ. ಮನೆಯಿಂದ ಆಫೀಸು, ಆಫೀಸಿಂದ ಮನೆ ಬಹುತೇಕ ಮಧ್ಯಮ ವರ್ಗದ ಜನರ ದಿನಚರಿ ಹೀಗೆಯೇ ಕಳೆದು ಬಿಡುತ್ತದೆ. ಅಲ್ಪ ಸ್ವಲ್ಪ ಮಾರ್ಪಾಡು ಇರಬಹದು. ಆದ್ರೆ ಇಲ್ಲಿ ಜವಬ್ದಾರಿಯಿಂದ ನುಣುಚಿಕೊಳ್ಳುವುದರ ಬಗ್ಗೆ ನಾನು ಹೇಳ್ತಾ ಇಲ್ಲ! In fact ಹೀಗೆಯೇ ಒಂದು ದಿಶೆಯಲ್ಲಿ ಬದುಕು ಮುಂದುವರಿದಾಗ ಸಪ್ಪೆಯಾಗಿ ಗೋಚರಿಸಿಬಿಟ್ಟರೆ ಅದು ಸಹಜ. ತೀರ‌ ಬಡಕಾರ್ಮಿಕರ, ನಿರ್ಗತಿಕರ ಬದುಕು ‌ಇಂತಹ ಕೆಲಸದ ಓಟದಲ್ಲೆ ಕಳೆದುಹೋಗತ್ತವೆ – ಅದು ಅನಿವಾರ್ಯ ಕೂಡ. ಹೀಗಾದಾಗ ಮನೋರಂಜನೆ ಎಂಬ ಕಾನ್ಸೆಪ್ಟ್ ಮೌಲ್ಯ ಪಡೆಯೋದು. ಅವರ ಅವರ ತಾಕತ್ತಿಗೆ ತಕ್ಕಂತೆ ಚಿಕ್ಕ – ಚಿಕ್ಕ ಖುಷಿ- ಸಂತೋಷದಲ್ಲಿ ಪಾಲ್ಗೊಂಡಾಗ ಒಂದು ಉತ್ಸಾಹ – ಭರವಸೆ ಮೂಡುತ್ತವೆ.

    ಶ್ರೀಮಂತ ವರ್ಗ, ಅಧಿಕಾರ ದಾಹಿಗಳು, ಸೆಲೆಬ್ರಿಟಿಗಳು, ಕಲಾವಿದರು, ಬರಹಗಾರರು ಹಾಗೂ ಸಮಾಜದಲ್ಲಿ ಗುರುತಿಸಿಕೊಂಡವರು- ಇಂತವರ ‌ಬದುಕು ಸಪ್ಪೆಯಾಗುವುದು ಬಹಳ‌ ಕಡಿಮೆ. ಇವರಿಗೆ ಇತರರ Eye Sight ಇರೊಂದ್ರಿದ ಬೇಡಿಕೆಯ ಮೋಹದಲಿ ಜೀವಿಸಿಬಿಡುತ್ತಾರೆ. ಮಾರುಕಟ್ಟೆ ಕುಸಿದುಬಿಟ್ಟಾಗ ಆ ಲೆಕ್ಕ ಬೇರೆ. ಮೋಜು ಅನ್ನುವ ಪದವೇ‌ ಕೆಲವರನ್ನು ವಾರಾಂತ್ಯದ ವರೆಗೆ ದುಡಿಸಿಬಿಡುತ್ತವೆ. ಸಂಡೇ ಪಾರ್ಟಿ‌‌ ಇದೆ ಮಚ್ಚಾ ಅನ್ನೊ‌ ಹುರುಪು ಬದುಕಿಗೆ ಪ್ರೇರಣೆ ನೀಡುತ್ತದೆ.‌ ಮದ್ಯದಂಗಡಿಯ ಬಗ್ಗೆ ಹೆಚ್ಚಿನವರದ್ದು ಅಪವಾದವೇ. ಅಂತವರಲ್ಲಿ ಒಮ್ಮೆ ಕೇಳಿಬಿಡಿ ನಿಮ್ಮ ಮೋಜು, ನಿಮ್ಮ ಖುಷಿ ಯಾವುದರಲ್ಲಿದೆ? ಅಂತ. ಅಂತವರಿಗೂ ಯಾವುದಾದರೊಂದು ವೀಕ್ ನೆಸ್ ಇದ್ದೆ ಇರುತ್ತದೆ. ಧಾರಾವಾಹಿ, ಓದುವಿಕೆ, ಬರಹ, ಪ್ರವಾಸ, ಅಡುಗೆ, ಚಪಲ, ರುಚಿಯಾದ ತಿಂಡಿ ತಿನಸು ಹೀಗೆ ಹಲವು. ಸೊ ಅವರವರ ಬದುಕಿನ ಸಂತೋಷ – ಭರವಸೆ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿ ಮುಂದುವರಿಯುತ್ತದೆ. ಬದುಕಲ್ಲಿ ಹಲವರು ಹಲವು ವಿಧಗಳಲ್ಲಿ ಸಂತೋಷ- ಮೋಜುಗಳನ್ನು ಅನುಭವಿಸುತ್ತಾರೆ ಆನ್ನೊದು ವಾಸ್ತವ. ಸಮಾಜದ ಕಟ್ಟಕಡೆಯ ವ್ಯಕ್ತಿ ಅದನ್ನು ಕುಡಿತದಲ್ಲೂ‌ ಕಾಣಬಹುದು. ‌ಆದರೆ ಯಾವುದು ಕೂಡ ಅತಿಯಾಗ ಬಾರದು. ಕುಡಿತದಿಂದ ಸಂಸಾರದ ನೆಮ್ಮದಿ ಹಾಳಾಗುವ ಕೂಗು ಬಹಳ ಹಿಂದಿನದು. ಹೀಗಾಗಿ ಖುಷಿಯ ಪರ್ಯಾಯ ವ್ಯವಸ್ಥೆಯನ್ನು ನೋಡಿಕೊಳ್ಳಬಹುದು. ಬದುಕಿಗೆ ಅರ್ಥವಿಲ್ಲ ಅನಿಸಿದಾಗ ಒಂದು ಯೂ ಟರ್ನ್ ಖಂಡಿತಾ ಅವಶ್ಯವಿದೆ‌. ಬದುಕಿಗೊಂದು ಗುರಿ, ಕನಸು, ಅಚಲ ನಂಬಿಕೆ, ಕದ್ದು ಮುಚ್ಚಿ ಪಿಸುಗುಟ್ಟುವಿಕೆ, ಆಪ್ತ ಮಾತು, ಭಾವನೆಗಳ ಹಂಚಿಕೊಳ್ಳುವಿಕೆ… ಹೀಗೆಲ್ಲದರ ಮೂಲಕ ಸಪ್ಪೆ ಬದುಕನ್ನು ಕಲರ್ ಫುಲ್‌ ಮಾಡಬಹುದು. ಸಮಾಜದ ಕೆಂಗಣ್ಣಿಗೆ ಬಲಿಯಾಗಬಹುದು ಎಂಬ ಮೌಢ್ಯದಲ್ಲಿ ಜೀವಿಸುವ ಅಗತ್ಯವಿಲ್ಲ. ಹೇಳೋರು ನಾವು ಹೇಗಿದ್ದರೂ ಹೇಳಿಯೇ ತೀರುತ್ತಾರೆ. ಬದುಕಲ್ಲಿ ಮಹಲು – ಐಷಾರಾಮಿ ಇಲ್ಲದಿದ್ದರೂ ನಮ್ಮ ನೆಮ್ಮದಿ ಹಾಳಾಗದಿರಲಿ..!

    Advertisement

    LEAVE A REPLY

    Please enter your comment!
    Please enter your name here