ಮಹಿಳಾ ಮೀಸಲಾತಿ ಮಸೂದೆಗೆ ಸಿಗದ ಬಹುಮತ; ಲೋಕಸಭೆಯಲ್ಲಿ ವಿಧೇಯಕಕ್ಕೆ ಹಿನ್ನಡೆ!

0
2

ನವದೆಹಲಿ, ಏ.17: ಮಹಿಳಾ ಮೀಸಲಾತಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ ಪಡೆಯಲು ವಿಫಲವಾಗಿದೆ. ಮಸೂದೆ ಪರವಾಗಿ 298 ಮಂದಿ ಸದಸ್ಯರು ಮತ ಚಲಾಯಿಸಿದರೆ, ವಿರುದ್ಧವಾಗಿ 230 ಮಂದಿ ಮತ ಚಲಾಯಿಸಿದ್ದಾರೆ. ಒಟ್ಟು 528 ಮಂದಿ ಸದಸ್ಯರು ಮತದಾನದಲ್ಲಿ ಪಾಲ್ಗೊಂಡಿದ್ದರು. ಮಸೂದೆ ಅಂಗೀಕಾರಗೊಳ್ಳಲು ಅಗತ್ಯವಿದ್ದ 352 ಮತಗಳ ಗುರಿಯನ್ನು ಸಾಧಿಸಲು ಸಾಧ್ಯವಾಗಲಿಲ್ಲ.

ಮಹಿಳಾ ಮೀಸಲಾತಿ ಹಾಗೂ ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಸೇರಿದಂತೆ ಸಂಸತ್ತಿನಲ್ಲಿ ಗುರುವಾರ ಪರಿಚಯಿಸಲಾದ ಮೂರು ಪ್ರಮುಖ ಮಸೂದೆಗಳ ಮೇಲೆ ಇಂದು ಲೋಕಸಭೆಯಲ್ಲಿ ಚರ್ಚೆ ಮತ್ತು ಮತದಾನ ನಡೆಯಿತು. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ವಿಧೇಯಕಕ್ಕೆ ವಿರೋಧ ಪಕ್ಷಗಳ ‘ಇಂಡಿಯಾ ಕೂಟ’ ತೀವ್ರ ಪ್ರತಿರೋಧ ವ್ಯಕ್ತಪಡಿಸಿ ಮಸೂದೆಯನ್ನು ಸೋಲಿಸಿದೆ.

ಇನ್ನು 2026ರ ಸಂವಿಧಾನ (131ನೇ ತಿದ್ದುಪಡಿ) ಮಸೂದೆ ಅಂಗೀಕಾರಕ್ಕೆ ಮೂರನೇ ಎರಡರಷ್ಟು ಬಹುಮತ ಅಗತ್ಯವಿತ್ತು. ಆದರೆ 489 ಮತಗಳಲ್ಲಿ 278 ಮತಗಳು ಪರವಾಗಿ, 211 ಮತಗಳು ವಿರುದ್ಧವಾಗಿ ಚಲಾವಣೆಯಾದವು. ಇದರಿಂದ ಸಾಂವಿಧಾನಿಕ ತಿದ್ದುಪಡಿಗೆ ಅಗತ್ಯವಿರುವ 2/3 ಬಹುಮತವನ್ನು ಪಡೆಯುವಲ್ಲಿ ಎನ್‌ಡಿಎ ಸರ್ಕಾರ ವಿಫಲವಾಯಿತು.

ಮಹಿಳಾ ಮೀಸಲಾತಿ ಮಸೂದೆ ಸೋಲು ಕಂಡ ಹಿನ್ನೆಲೆ ಲೋಕಸಭಾ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.

LEAVE A REPLY

Please enter your comment!
Please enter your name here