ಮಕ್ಕಳ ಆಧಾರ್ ಕಾರ್ಡ್ ಅಪ್‌ ಡೇಟ್ ಇನ್ನು ಮುಂದೆ ಉಚಿತ; 5 ರಿಂದ 17 ವರ್ಷದೊಳಗಿನವರಿಗೆ ಯಾವುದೇ ಶುಲ್ಕವಿಲ್ಲ!

0
29
Advertisement

ದೆಹಲಿ, ನ.19: ಮಕ್ಕಳ ಆಧಾರ್‌ ಕಾರ್ಡ್‌ ಅಪ್ಡೇಟ್‌ ಗಳಿಗೆ ಶುಲ್ಕ ವಿಧಿಸುವುದನ್ನು ರದ್ದುಪಡಿಸಿ ಯುಐಡಿಎಐ ಅಧಿಕೃತ ಆದೇಶ ಹೊರಡಿಸಿದೆ. 5 ರಿಂದ 17 ವರ್ಷದೊಳಗಿನ ಮಕ್ಕಳಿಗೆ ನೀಡಲಾಗುವ ‘ಬಾಲ’ ಅಥವಾ ನೀಲಿ ಆಧಾರ್ ಕಾರ್ಡ್‌ ಗಳ ಬಯೋಮೆಟ್ರಿಕ್ ಅನ್ನು ಕಡ್ಡಾಯವಾಗಿ ಅಪ್‌ ಡೇಟ್ (ಎಂಬಿಯು)ಮಾಡುವುದಕ್ಕೆ ವಿಧಿಸಲಾಗುವ ಎಲ್ಲಾ ಶುಲ್ಕಗಳನ್ನು ವಿಶಿಷ್ಟ ಗುರುತುಚೀಟಿ ಪ್ರಾಧಿಕಾರ (ಯುಐಡಿಎಐ) ಶುಕ್ರವಾರ ರದ್ದುಪಡಿಸಿದೆ.

ಕ್ರಮವಾಗಿ 5ರಿಂದ 7 ಹಾಗೂ 15-17 ವರ್ಷದೊಳಗಿನ ಮಕ್ಕಳ ಆಧಾರ್ ಕಾರ್ಡ್‌ ಗಳಿಗೆ ನಡೆಸಲಾಗುವ ಮೊದಲ ಹಾಗೂ ಎರಡನೇ ಎಂಬಿಯುಗಳು ಇನ್ನು ಮುಂದೆ ಸಂಪೂರ್ಣವಾಗಿ ಉಚಿತವಾಗಿರುತ್ತವೆ ಎಂದು ವಿಶಿಷ್ಟ ಗುರುತುಚೀಟಿ ಪ್ರಾಧಿಕಾರ ಅಧಿಕೃತ ಹೇಳಿಕೆಯೊಂದರಲ್ಲಿ ತಿಳಿಸಿದೆ. ಇದರಿಂದ ದೇಶದಾದ್ಯಂತ 6 ಕೋಟಿಗೂ ಅಧಿಕ ಮಕ್ಕಳಿಗೆ ಪ್ರಯೋಜನವಾಗಲಿದೆ.

Advertisement

LEAVE A REPLY

Please enter your comment!
Please enter your name here