ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ‘ನಾನೇ ಕೃಷ್ಣ–ನಾನೇ ರಾಧೆ’ ಸ್ಪರ್ಧೆ

0
3

ಮಕ್ಕಳಿಗಾಗಿ ಸ್ವಗ್ರಾಮ್ ಫೌಂಡೇಶನ್‌ ನಿಂದ ಫ್ಯಾನ್ಸಿ ಡ್ರೆಸ್ ಸ್ಪರ್ಧೆ

ಬೆಂಗಳೂರು ಸೆ.02 : ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಸ್ವಗ್ರಾಮ್ ಫೌಂಡೇಶನ್ ವತಿಯಿಂದ ಮಕ್ಕಳಿಗಾಗಿ ‘ನಾನೇ ಕೃಷ್ಣ–ನಾನೇ ರಾಧೆ’ ಎಂಬ ಫ್ಯಾನ್ಸಿ ಡ್ರೆಸ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

೧ರಿಂದ ೧೦ ವರ್ಷದೊಳಗಿನ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಮಕ್ಕಳು ಕೃಷ್ಣ ಅಥವಾ ರಾಧೆಯ ಪೌರಾಣಿಕ ವೇಷಭೂಷಣ ಧರಿಸಿ ತಮ್ಮ ಸೃಜನಶೀಲತೆ ಹಾಗೂ ಕಲ್ಪನಾಶಕ್ತಿಯನ್ನು ಪ್ರದರ್ಶಿಸಬೇಕು. ಮನೆಯಲ್ಲಿ ತೆಗೆದಿರುವ ಸ್ಪಷ್ಟವಾದ ಒಂದೇ ಒಂದು ಛಾಯಾಚಿತ್ರವನ್ನು ಸ್ಪರ್ಧೆಗೆ ಸಲ್ಲಿಸಬೇಕಾಗಿದೆ.

ಸ್ಪರ್ಧಾರ್ಥಿಗಳು ಸ್ವಗ್ರಾಮ್ ಆ್ಯಪ್ ಡೌನ್ಲೋಡ್ ಮಾಡಿಕೊಂಡು, ಮಗುವನ್ನು ಕೃಷ್ಣ ಅಥವಾ ರಾಧೆಯ ವೇಷದಲ್ಲಿ ಸಿದ್ಧಪಡಿಸಿ, ಛಾಯಾಚಿತ್ರದೊಂದಿಗೆ ಜನ್ಮಾಷ್ಟಮಿಯನ್ನು ಮನೆಯಲ್ಲಿ ಹೇಗೆ ಆಚರಿಸುತ್ತೀರಿ ಹಾಗೂ ಸಾಂಪ್ರದಾಯಿಕ ತಿಂಡಿ ಅಥವಾ ಪ್ರಸಾದ (ನೈವೇದ್ಯ)ವನ್ನು ಮನೆಯಲ್ಲಿ ಹೇಗೆ ತಯಾರಿಸುತ್ತೀರಿ ಎಂಬುದರ ಕುರಿತು ಸಂಕ್ಷಿಪ್ತ ವಿವರಣೆಯನ್ನು ಅಪ್ಲೋಡ್ ಮಾಡಬೇಕು.

ಐವರು ವಿಜೇತರಿಗೆ ಆಕರ್ಷಕ ಬಹುಮಾನ

ಸ್ಪರ್ಧೆಯಲ್ಲಿ ಐವರು ವಿಜೇತರನ್ನು ಆಯ್ಕೆ ಮಾಡಿ ಆಕರ್ಷಕ ಬಹುಮಾನ ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಸ್ವಗ್ರಾಮ್ ಫೌಂಡೇಶನ್ ಪ್ರಮಾಣಪತ್ರ ನೀಡಲಾಗುತ್ತದೆ.

ಸ್ಪರ್ಧೆಯ ಮೌಲ್ಯಮಾಪನದಲ್ಲಿ ಮೌಲಿಕತೆ ಮತ್ತು ನೈಜತೆ, ಮನೆಯಲ್ಲಿ ತೆಗೆದಿರುವ ಛಾಯಾಚಿತ್ರ, ವೇಷಭೂಷಣದ ಸೃಜನಶೀಲತೆ, ಬರಹದ ಗುಣಮಟ್ಟ ಹಾಗೂ ಆಚರಣೆಯ ಸಾಂಸ್ಕೃತಿಕ ಸಂಬಂಧವನ್ನು ಪರಿಗಣಿಸಲಾಗುತ್ತದೆ. ಸ್ಟುಡಿಯೋ ಸೆಟಪ್ ಅಥವಾ ಅತಿಯಾದ ಫೋಟೋ ಎಡಿಟಿಂಗ್ ಮಾಡಿರುವ ಚಿತ್ರಗಳನ್ನು ಪರಿಗಣಿಸಲಾಗುವುದಿಲ್ಲ.

ಸಾಮಾಜಿಕ ಜಾಲತಾಣದಲ್ಲೂ ವಿಶೇಷ ಬಹುಮಾನ
ಫೇಸ್ಬುಕ್ನಲ್ಲಿ ಪ್ರಕಟಿಸಲಾದ ಸ್ಪರ್ಧಾ ಪೋಸ್ಟ್ಗೆ ಅತಿ ಹೆಚ್ಚು ನೈಜ ಲೈಕ್ಸ್ ಮತ್ತು ಕಾಮೆಂಟ್ಸ್ ದೊರಕಿದ ಸ್ಪರ್ಧಾರ್ಥಿಗೆ ಪ್ರತ್ಯೇಕ ವಿಶೇಷ ಬಹುಮಾನ ನೀಡಲಾಗುವುದು.

ಸ್ಪರ್ಧೆಯಲ್ಲಿ ಭಾಗವಹಿಸಲು ₹100 ಶುಲ್ಕ ನಿಗದಿಪಡಿಸಲಾಗಿದೆ. ಶುಲ್ಕ ಪಾವತಿಸಿದ ಬಳಿಕ ಅದರ ಸ್ಕ್ರೀನ್ಶಾಟ್ ಅನ್ನು 83106 52068 ಸಂಖ್ಯೆಗೆ ಕಳುಹಿಸಬೇಕು. ಸ್ಪರ್ಧೆಗೆ ಪ್ರವೇಶ ಸಲ್ಲಿಸಲು ಸೆಪ್ಟೆಂಬರ್ 25, 2026 ಕೊನೆಯ ದಿನವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸ್ವಗ್ರಾಮ್ ಫೌಂಡೇಶನ್ನ ಆ್ಯಪ್ ಅಥವಾ ವೆಬ್ಸೈಟ್ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.

LEAVE A REPLY

Please enter your comment!
Please enter your name here