ಚೈನಾ-ಭಾರತ ಮಿಲಿಟರಿ ಬಿಕ್ಕಟ್ಟು ಸಡಿಲು; ಐದು ವರ್ಷಗಳ ನಂತರ ಚೈನಾ ಪ್ರಜೆಗಳಿಗೆ ಸಿಗಲಿದೆ ಪ್ರವಾಸಿ ವೀಸಾ!

0
52

ನವದೆಹಲಿ, ನ.22: ಭಾರತ- ಚೈನಾ ಸಂಬಂಧ ಸುಧಾರಣೆಗೆ ಮುನ್ನುಡಿ ಎಂಬಂತೆ ಸುಮಾರು ಐದು ವರ್ಷಗಳಿಂದ ಚೈನಾ ಪ್ರಜೆಗಳಿಗೆ ತಡೆಹಿಡಿಯಲಾಗಿದ್ದ ಪ್ರವಾಸಿ ವೀಸಾವನ್ನು ನೀಡಲು ಭಾರತ ಮುಂದಾಗಿದೆ. ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (LAC) ದೀರ್ಘಕಾಲದ ಮಿಲಿಟರಿ ಬಿಕ್ಕಟ್ಟಿನ ಬಳಿಕ ಭಾರತ ಹಾಗೂ ಚೀನಾ ರಾಜತಾಂತ್ರಿ ಸಂಬಂಧಗಳು ಸರಿಯಾಗುವ ಲಕ್ಷಣಗಳು ಕಾಣುತ್ತಿವೆ. ಇದರ ಭಾಗವಾಗಿ, ವಿಶ್ವದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಭಾರತೀಯ ರಾಯಭಾರ ಕಚೇರಿಗಳು ಮತ್ತು ಕಾನ್ಸುಲೇಟ್ಗಳ ಮೂಲಕ ಅರ್ಜಿ ಸಲ್ಲಿಸುವ ಚೀನೀ ಪ್ರಜೆಗಳಿಗೆ ಭಾರತದ ಪ್ರವಾಸಿ ವೀಸಾಗಳು ಲಭ್ಯವಾಗಲಿದೆ . ಜುಲೈನಲ್ಲಿ ಚೀನೀ ನಾಗರಿಕರಿಗೆ ಪ್ರವಾಸಿ ವೀಸಾ ಮರುಪ್ರಾರಂಭಿಸಿದ ನಾಲ್ಕು ತಿಂಗಳ ನಂತರ ಈ ಹೊಸ ಕ್ರಮ ಜಾರಿಗೆ ಬಂದಿದೆ. 2020ರ ಏಪ್ರಿಲ್–ಮೇ ತಿಂಗಳಲ್ಲಿ LAC ವಿವಾದ ತೀವ್ರವಾದ ಹಿನ್ನೆಲೆಯಲ್ಲಿ ಚೀನೀ ಪ್ರಜೆಗಳಿಗೆ ವೀಸಾ ನೀಡುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿತ್ತು.

ಹದಗೆಟ್ಟಿದ್ದ ದ್ವಿಪಕ್ಷೀಯ ಸಂಬಂಧಗಳು ಇದೀಗ ನಿಧಾನವಾಗಿ ಸುಧಾರಿಸುತ್ತಿರುವ ಸೂಚನೆಗಳು ಕಾಣುತ್ತಿದ್ದು, ಹಲವು ವರ್ಷಗಳಿಂದ ನಿಂತಿದ್ದ ಭಾರತ–ಚೀನಾ ನೇರ ವಿಮಾನ ಓಡಾಟವನ್ನು ಕಳೆದ ತಿಂಗಳು ಮತ್ತೆ ಪ್ರಾರಂಭಿಸಲಾಗಿತ್ತು. ಅಲ್ಲದೆ ಬೇಸಿಗೆಯಲ್ಲಿ ಟಿಬೆಟಿನ ಪವಿತ್ರ ಸ್ಥಳಗಳಾದ ಕೈಲಾಸ–ಮಾನಸ ಸರೋವರ ಯಾತ್ರೆಯನ್ನು ಪುನರಾರಂಭಿಸಲು ಎರಡೂ ರಾಷ್ಟ್ರಗಳು ಒಪ್ಪಂದಕ್ಕೆ ಬಂದಿದ್ದವು. ಭಾರತವು ಜುಲೈನಲ್ಲಿ ಚೀನಾದ ನಾಗರಿಕರಿಗೆ ಪ್ರವಾಸಿ ವೀಸಾಗಳನ್ನು ಪುನರಾರಂಭಿಸಿತ್ತು, ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಶಾಂಘೈ, ಗುವಾಂಗ್‌ಝೌ ಮತ್ತು ಹಾಂಗ್ ಕಾಂಗ್‌ನಲ್ಲಿರುವ ಕಾನ್ಸುಲೇಟ್‌ಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿತ್ತು. ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 31 ರಂದು ಟಿಯಾಂಜಿನ್‌ನಲ್ಲಿ ನಡೆದ SCO ಶೃಂಗಸಭೆಗಾಗಿ ಏಳು ವರ್ಷಗಳ ಬಳಿಕ ಚೀನಾ ಪ್ರವಾಸ ಮಾಡಿರುವುದು ರಾಜತಾಂತ್ರಿಕ ಸಂಬಂಧ ಸುಧಾರಣೆಯ ಪ್ರಮುಖ ಘಟ್ಟವಾಗಿದ್ದವು.

LEAVE A REPLY

Please enter your comment!
Please enter your name here