ಟಿಬೆಟಿಯನ್ ಧರ್ಮಗುರು ದಲೈಲಾಮ ಉತ್ತರಕನ್ನಡ ಜಿಲ್ಲೆಗೆ ಭೇಟಿ; ಮುಂಡಗೋಡ ಟಿಬೆಟಿಯನ್ ಕಾಲೋನಿಯಲ್ಲಿ 45 ದಿನಗಳ ವಾಸ!

0
57

ಹುಬ್ಬಳ್ಳಿ. ಡಿ. 13: ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಟಿಬೆಟಿಯನ್ ಧರ್ಮಗುರು ದಲೈಲಾಮಾ ಅವರು ಡಿ. 12ರಂದು ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಟಿಬೆಟಿಯನ್ ಕಾಲೋನಿಯಲ್ಲಿ 45 ದಿನಗಳ ವಾಸ್ತವ್ಯ ಹೂಡಲಿದ್ದಾರೆ.

ರಾಜ್ಯ ಸರ್ಕಾರದ ಪರವಾಗಿ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ದಲೈಲಾಮಾ ಅವರನ್ನು ಬರಮಾಡಿಕೊಂಡರು. ದಲೈ ಲಾಮಾ ಅವರು ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರಿನಲ್ಲಿ ಮುಂಡಗೋಡ ಶಿಬಿರಕ್ಕೆ ತೆರಳಿದರು.

ದಲೈ ಲಾಮಾ ಅವರು ಮುಂಡಗೋಡಿನಲ್ಲಿರುವ ಹಿರಿಯ ಬೌದ್ಧ ಸನ್ಯಾಸಿಗಳೊಂದಿಗೆ ಸಂವಹನ ನಡೆಸಲಿದ್ದಾರೆ, ಅಲ್ಲದೆ ಬೌದ್ಧ ಉನ್ನತ ಅಧ್ಯಯನಗಳನ್ನು ಬೋಧಿಸಲಿದ್ದಾರೆ. ಮುಂಡಗೋಡು ಶಿಬಿರದಲ್ಲಿ ಸುಮಾರು 16,000 ಟಿಬೆಟಿಯನ್ ನವರಿದ್ದರೆ, ಕೊಡಗಿನ ಬೈಲಕುಪ್ಪೆಯಲ್ಲಿ 60,000 ಟಿಬೆಟಿಯನ್ ಜನರಿದ್ದಾರೆ.

LEAVE A REPLY

Please enter your comment!
Please enter your name here