ಬಿ.ಪಿ. ನ್ಯೂಸ್ ಕರ್ನಾಟಕದ ವಾರ್ಷಿಕೋತ್ಸವ ಸಂಭ್ರಮ; ಶಂಕರನಾಗ್ ಪ್ರಶಸ್ತಿ–2026 ಪ್ರದಾನ

0
2

ನಾಳೆ ಬೆಂಗಳೂರಿನಲ್ಲಿ ಅದ್ಧೂರಿ ಸಮಾರಂಭ; ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವ ಪುರಸ್ಕಾರ

ಬೆಂಗಳೂರು, ನ.14: ಕನ್ನಡ ಚಿತ್ರರಂಗದ ಮೇರು ಪ್ರತಿಭೆ, ನಟ, ನಿರ್ದೇಶಕ ಹಾಗೂ ಬಹುಮುಖ ಕಲಾವಿದ ದಿವಂಗತ ಶಂಕರನಾಗ್ ಅವರ ಹೆಸರಿನಲ್ಲಿ ನೀಡಲಾಗುವ ‘ಶಂಕರನಾಗ್ ಪ್ರಶಸ್ತಿ–2026’ ಪ್ರದಾನ ಸಮಾರಂಭವನ್ನು ಬಿ.ಪಿ. ನ್ಯೂಸ್ ಕರ್ನಾಟಕದ ವಾರ್ಷಿಕೋತ್ಸವದ ಅಂಗವಾಗಿ ನವೆಂಬರ್ 15ರಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಆಯೋಜಿಸಲಾಗಿದೆ.

ಪರಿಜ್ಞಾನ ಸಂಘ (ರಿ), ಬಳ್ಳಾರಿ ಸಹಯೋಗದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸಿನಿಮಾ, ಕಲೆ, ಸಾಹಿತ್ಯ, ಪತ್ರಿಕೋದ್ಯಮ, ಸಾಂಸ್ಕೃತಿಕ, ಸಾಮಾಜಿಕ ಸೇವೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ಗಣ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮ

ಕಾರ್ಯಕ್ರಮವನ್ನು ಜಿ.ಕೆ. ಗ್ರೂಪ್ ಆಫ್ ಕಂಪನೀಸ್‌ನ ಎಂಡಿ ಮತ್ತು ಸಿಇಒ ಶ್ರೀ ಜಿ.ಕೆ. ಸ್ವಾಮಿ ಉದ್ಘಾಟಿಸಲಿದ್ದಾರೆ. ಬಿ.ಪಿ. ನ್ಯೂಸ್ ಕರ್ನಾಟಕದ ಸಂಪಾದಕರಾದ ಶ್ರೀ ಅರುಣ್ ಭೂಪಾಲ್ ಅಧ್ಯಕ್ಷತೆ ವಹಿಸಲಿದ್ದಾರೆ.

ಖ್ಯಾತ ಚಲನಚಿತ್ರ ನಿರ್ದೇಶಕ ಶ್ರೀ ಓಂ ಪ್ರಕಾಶ್ ರಾವ್ ಹಾಗೂ ಖ್ಯಾತ ಹಿರಿಯ ನಟಿ ಶ್ರೀಮತಿ ಭವ್ಯ ಪಾಟೀಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ

ಈ ಬಾರಿಯ ಪ್ರಶಸ್ತಿಗೆ ಕಲಾವಿದರು, ನಿರ್ದೇಶಕರು, ಬರಹಗಾರರು, ಪತ್ರಕರ್ತರು, ಸಮಾಜಸೇವಕರು, ಉದ್ಯಮಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರು ಆಯ್ಕೆಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಮರಣೋತ್ತರ ಗೌರವ ಪ್ರಶಸ್ತಿಯನ್ನೂ ಪ್ರದಾನ ಮಾಡಲಾಗುತ್ತದೆ.

ಶಂಕರನಾಗ್ ಅವರ ಕಲಾತ್ಮಕ ಕೊಡುಗೆ, ಕನ್ನಡ ಚಿತ್ರರಂಗಕ್ಕೆ ಅವರು ನೀಡಿದ ಅಮೂಲ್ಯ ಸೇವೆ ಹಾಗೂ ಅವರ ಆದರ್ಶಗಳನ್ನು ಸ್ಮರಿಸುವುದರ ಜೊತೆಗೆ, ವಿವಿಧ ಕ್ಷೇತ್ರಗಳ ಪ್ರತಿಭೆ ಮತ್ತು ಸಾಧನೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಪ್ರಶಸ್ತಿ ಪ್ರದಾನ ಸಮಾರಂಭದ ಪ್ರಮುಖ ಉದ್ದೇಶವಾಗಿದೆ.

ಕಾರ್ಯಕ್ರಮದ ವಿವರ:

ದಿನಾಂಕ: ನವೆಂಬರ್ 15, 2026 (ಭಾನುವಾರ)

ಸಮಯ: ಬೆಳಿಗ್ಗೆ 9.30ರಿಂದ

ಸ್ಥಳ: ರೇಣುಕಾಂಬ ಡಿಜಿಟಲ್ ಸ್ಟುಡಿಯೋ, ಲಾವಣ್ಯ ಟವರ್ಸ್, 4ನೇ ಮೇನ್, 18ನೇ ಕ್ರಾಸ್ ರಸ್ತೆ, ಮಲ್ಲೇಶ್ವರಂ, ಬೆಂಗಳೂರು–560055.

LEAVE A REPLY

Please enter your comment!
Please enter your name here