ಸ್ನಾನದ ಕೈ ಬದಲಾದಾಗ..!

0
16
Advertisement

ಲೇಖಕರು: ಗಣೇಶ್ ರಾಮಚಂದ್ರ ಮಾಂಡ್ರೆ
ಅರಿವು ಬೋಧಿ ಪ್ರಕಾಶನ

ಒಂದು ಹಳ್ಳಿಯಲ್ಲಿ ರಾಮಣ್ಣ ಎನ್ನುವ ತಂದೆ ಮತ್ತು ಅವನ ಚಿಕ್ಕ ಮಗ ಚಿನ್ನು ಇದ್ದ. ಚಿನ್ನು ಇನ್ನೂ ಮುದ್ದಾದ ಮಗು. ಮಾತಾಡೋದಕ್ಕಿಂತ ಅಪ್ಪನ ಕೈ ಹಿಡಿದು ನಡೆಯೋದೇ ಅವನಿಗೆ ಜಾಸ್ತಿ ಇಷ್ಟ. ಪ್ರತಿ ಬೆಳಿಗ್ಗೆ ರಾಮಣ್ಣ ಚಿನ್ನುವಿಗೆ ಸ್ನಾನ ಮಾಡಿಸುತ್ತಿದ್ದ. ತಣ್ಣೀರಲ್ಲಿ ಆಟ, ಚಪ್ಪಾಳೆ, ನಗು… ಚಿನ್ನು ಖುಷಿಯಿಂದ ನಗುತ್ತಿದ್ದ, ರಾಮಣ್ಣನ ಮನಸ್ಸು ಆ ನಗುವಲ್ಲಿ ಕರಗುತ್ತಿತ್ತು.

“ನನ್ನ ಮಗ ನನ್ನ ಕೈಯಲ್ಲಿ ಸುರಕ್ಷಿತನಾಗಿದ್ದಾನೆ” ಅನ್ನೋ ಸಂತೋಷ ರಾಮಣ್ಣನ ಕಣ್ಣಲ್ಲಿ ಕಾಣಿಸುತ್ತಿತ್ತು. ತಂದೆ ಸ್ನಾನ ಮಾಡಿಸಿದಾಗ, ತಂದೆಗೂ ಮಗುಗೂ ಇಬ್ಬರಿಗೂ ಸಂತೋಷವೇ.

ಕಾಲ ಕಳೆಯಿತು. ಚಿನ್ನು ದೊಡ್ಡವನಾದ. ರಾಮಣ್ಣ ವಯಸ್ಸಾದ ಕೈಗಳು ನಡುಗುತ್ತಾ ಬಂದವು, ಕಣ್ಣು ಮಂಕಾದವು. ಒಂದು ದಿನ ರಾಮಣ್ಣ ಅಸ್ವಸ್ಥನಾಗಿ ಹಾಸಿಗೆಯಲ್ಲಿದ್ದ. ಚಿನ್ನು ಅವನಿಗೆ ಸ್ನಾನ ಮಾಡಿಸಬೇಕಾಯಿತು.

ಚಿನ್ನು ಸ್ನಾನ ಮಾಡಿಸುತ್ತಿದ್ದರೂ ಅವನ ಮನಸ್ಸು ಭಾರವಾಗಿತ್ತು.
“ನನ್ನ ಅಪ್ಪ ಇಷ್ಟು ದುರ್ಬಲನಾಗಿಬಿಟ್ಟಾನಲ್ಲ” ಅನ್ನೋ ನೋವು ಅವನೊಳಗೆ. ರಾಮಣ್ಣನಿಗೂ ಮನಸ್ಸು ತುಂಬಾ ಭಾರ. “ನಾನು ಮಗನ ಮೇಲೆ ಭಾರವಾಗಿಬಿಟ್ಟೇನೇ?” ಅನ್ನೋ ದುಃಖ.
ಆ ದಿನ ಸ್ನಾನ ಇದ್ದರೂ, ಅಲ್ಲಿ ನಗು ಇರಲಿಲ್ಲ.

ತಂದೆಗೂ ಮಗನಿಗೂ ಇಬ್ಬರಿಗೂ ಕಣ್ಣಲ್ಲಿ ನೋವಿತ್ತು.
ಅದಾಗಲೇ ಚಿನ್ನು ಅರ್ಥ ಮಾಡಿಕೊಂಡ. ಸ್ನಾನ ಮಾಡುವ ಕೈ ಬದಲಾಗಿದ್ರೆ, ಭಾವನೆಗಳು ಕೂಡ ಬದಲಾಗುತ್ತವೆ. ಜವಾಬ್ದಾರಿ ಬಂದಾಗ ಸಂತೋಷಕ್ಕಿಂತ ನೋವು ಜಾಸ್ತಿ ಆಗಬಹುದು. ಆದ್ರೆ ಅದೇ ಜೀವನದ ಸತ್ಯ.

ಅಪ್ಪ ಮಗುಗೆ ಸ್ನಾನ ಮಾಡಿಸಿದಾಗ — ಅದು ಪ್ರೀತಿ.
ಮಗು ಅಪ್ಪಗೆ ಸ್ನಾನ ಮಾಡಿಸಿದಾಗ — ಅದು ಕರ್ತವ್ಯ.
ಪ್ರೀತಿಯಲ್ಲೇ ಸಂತೋಷ, ಕರ್ತವ್ಯದಲ್ಲೂ ನೋವಿದ್ದರೂ ಅದೇ ನಿಜವಾದ ಮನುಷ್ಯತ್ವ.

Advertisement

LEAVE A REPLY

Please enter your comment!
Please enter your name here