Advertisement 

ಮೆಕ್ಸಿಕೊ, ಡಿ. 12: ಅಮೇರಿಕ ಭಾರತದ ಮೇಲೆ ಶೇ.50ರಷ್ಟು ಸುಂಕ ಏರಿಸಿದ ನಂತರ ಇದೀಗ ಮೆಕ್ಸಿಕೊ ಕೂಡ ಹೆಚ್ಚುವರಿ ಸುಂಕ ವಿಧಿಸುವ ಘೋಷಣೆ ಮಾಡಿದೆ. ದೇಶೀಯ ಉದ್ಯಮ ಹಾಗೂ ಉತ್ಪಾದಕರನ್ನು ಗಮನದಲ್ಲಿಟ್ಟುಕೊಂಡು ಭಾರತ ಹಾಗೂ ಚೀನಾ ಸೇರಿದಂತೆ ಏಷ್ಯಾದ ದೇಶಗಳಿಗೆ ಆಯ್ದ ಆಮದು ಉತ್ಪನ್ನಗಳ ಮೇಲೆ 2026ರ ಜನವರಿ 1 ರಿಂದ ಶೇ. 50 ರಷ್ಟು ಹೆಚ್ಚುವರಿ ಸುಂಕ ವಿಧಿಸಲು ನಿರ್ಧರಿಸಿದೆ.
ದೇಶದ ಸಂಸತ್ತಿನ ಮೇಲ್ಮನೆ ಬುಧವಾರ ಸಾಮಾನ್ಯ ಆಮದು ಮತ್ತು ರಫ್ತು ತೆರಿಗೆ ಕಾನೂನಿನ ವಿವಿಧ ಸುಂಕದ ವರ್ಗೀಕರಣಗಳನ್ನು ಮಾರ್ಪಡು ಮಾಡಿ ದೈನಂದಿನ ಗ್ರಾಹಕ ಸರಕುಗಳು, ಪೀಠೋಪಕರಣಗಳು, ಪಾದರಕ್ಷೆಗಳಂತಹ ಸರಕುಗಳ ಮೇಲೆ ಶೇಕಡಾ 5 ರಿಂದ 50 ರವರೆಗಿನ ಸುಂಕಗಳನ್ನು ವಿಧಿಸಿದೆ ಎಂದು ಮೆಕ್ಸಿಕೋದ ಸುದ್ದಿವಾಹಿನಿ ಎಲ್ ಯೂನಿವರ್ಸಲ್ ವರದಿ ಮಾಡಿದೆ.
ಈ ಸುಂಕವು ವ್ಯಾಪಾರ ಒಪ್ಪಂದವಿಲ್ಲದ ಏಷ್ಯಾದ ದೇಶಗಳಿಂದ ಬರುವ ಉತ್ಪನ್ನಗಳಿಗೆ ಅನ್ವಯಿಸುತ್ತದೆ ಮತ್ತು ಭಾರತದ ಆಟೋಮೊಬೈಲ್, ಸಾಫ್ಟ್‌ವೇರ್ ಮತ್ತು ಔಷಧಗಳ ರಫ್ತಿನ ಮೇಲೆ ಪರಿಣಾಮ ಬೀರಲಿದೆ.
Advertisement 





