ಸಂವಿಧಾನ ದಿನಾಚರಣೆ: ಜಾಥಾ ಕಾರ್ಯಕ್ರಮಕ್ಕೆ ಮೇಯರ್ ಪಿ.ಗಾದೆಪ್ಪ ಚಾಲನೆ

0
46
Advertisement

ಬಳ್ಳಾರಿ. ನ, 26: ಸಂವಿಧಾನ ದಿನಾಚರಣೆಯ ಅಂಗವಾಗಿ ಜಾಥಾ ಕಾರ್ಯಕ್ರಮವನ್ನು ಮೇಯರ್ ಪಿ. ಗಾದೆಪ್ಪ ಅವರು ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ಉದ್ಘಾಟಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿದ ಪಿ. ಗಾದೆಪ್ಪ ಅವರು,
1949ರ ನವೆಂಬರ್ 26ರಂದು ಅಂಗೀಕರಿಸಲ್ಪಟ್ಟ ಭಾರತೀಯ ಸಂವಿಧಾನ ನಮ್ಮ ಪ್ರಜಾಪ್ರಭುತ್ವದ ಬಲವಾದ ಆಧಾರ. ಇದು ನಮ್ಮ ಹಕ್ಕುಗಳ ರಕ್ಷಣೆಯ ಜೊತೆಗೆ ಕರ್ತವ್ಯಗಳತ್ತ ನಮ್ಮನ್ನು ನಡೆಸುವ ಮಾರ್ಗದರ್ಶಕ ಈ ಪವಿತ್ರ ಸಂವಿಧಾನ ಎಂದು ಹೇಳಿದರು.

ಸಂವಿಧಾನವು ಏಕತೆ, ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ್ಯದ ಮೌಲ್ಯಗಳನ್ನು ಸಾರುತ್ತದೆ. ಡಾ. ಬಿ.ಆರ್. ಅಂಬೇಡ್ಕರ್ ರೂಪಿಸಿದ ಈ ಸಂವಿಧಾನವು ವಿಶ್ವದ ಅತ್ಯುತ್ತಮ ಸಂವಿಧಾನಗಳಲ್ಲಿ ಒಂದಾಗಿದೆ. ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಪಾರದರ್ಶಕ ಆಡಳಿತ ಮತ್ತು ಜನಕೇಂದ್ರೀತ ಸೇವೆಗೆ ಸಂವಿಧಾನವೇ ನಮ್ಮ ಶಕ್ತಿ. ಪ್ರತಿಯೊಬ್ಬ ನಾಗರಿಕರೂ ಸಂವಿಧಾನದ ಮೌಲ್ಯಗಳನ್ನು ಪಾಲಿಸಿ ಸಮಾಜ ನಿರ್ಮಾಣದಲ್ಲಿ ಸಕ್ರಿಯ ಭಾಗವಹಿಸಲು ಕರೆ ನೀಡುತ್ತೇವೆ ಎಂದು ಬಳ್ಳಾರಿ ಮಹಾನಗರ ಪಾಲಿಕೆಯ ಮಹಾ ಪೌರರಾದ ಪಿ. ಗಾದೆಪ್ಪ ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ., ಜಿಲ್ಲಾ ಪಂಚಾಯತ್ ಮುಖ್ಯಾ ಕಾರ್ಯ ನಿರ್ವಾಹಕ ಅಧಿಕಾರಿ ಅಹಮ್ಮದ್ ಹಾರಿಸ್ ಸುಮೇರ್, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Advertisement

LEAVE A REPLY

Please enter your comment!
Please enter your name here