ಒಳ ಮೀಸಲಾತಿ ಜಾರಿಯಾಗುವವರೆಗೂ ಹಬ್ಬ ಸಂಭ್ರಮಗಳನ್ನು ಮಾಡುವುದಿಲ್ಲ : ಹೆಚ್.ಆಂಜನೇಯ
ಬಿಸಿಲೂರ್ ಪೋಸ್ಟ್
ಬಳ್ಳಾರಿ, ಮೇ.25: ಒಳಮೀಸಲಾತಿ ಸಮೀಕ್ಷೆಯ ಜಾಗೃತಿ ಮೂಡಿಸಲು ಸುದ್ದಿಗೋಷ್ಠಿಯನ್ನು ಹಮ್ಮಿಕೊಳ್ಳಲು ಇಂದು ಬಳ್ಳಾರಿ ನಗರಕ್ಕೆ ಕೆಪಿಸಿಸಿ ರಾಜ್ಯ ಉಪಾಧ್ಯಕ್ಷರು ಹಾಗೂ ಮಾಜಿ ಸಚಿವರಾದ ಹೆಚ್.ಆಂಜನೇಯ ಅವರು ಆಗಮಿಸಿದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಯೂತ್ ಇಂಟೆಕ್ ಜಿಲ್ಲಾಧ್ಯಕ್ಷರಾದ ರಾಮಾಂಜಿನಿ ಮತ್ತು ಕಾಂಗ್ರೆಸ್ ಯುವ ಮುಖಂಡರು ಸೇರಿ ಸನ್ಮಾನಿಸಿ ಗೌರವಿಸುವ ಮೂಲಕ ಬರಮಾಡಿಕೊಳ್ಳಲಾಯಿತು.
ಇದೇ ವೇಳೆ ಹೆಚ್.ಆಂಜನೇಯ ಅವರು ಮಾತನಾಡಿ ಒಳ ಮೀಸಲಾತಿಗಾಗಿ ಮಾದಿಗ ಸಮಾಜದ ಜನತೆಯ ಒಳತಿಗಾಗಿ ಇಡೀ ರಾಜ್ಯಾದ್ಯಂತ ಪ್ರತಿ ಜಿಲ್ಲೆಯಲ್ಲಿ ಮಾದಿಗ ಸಮುದಾಯ ಮುಖಂಡರನ್ನು ಬೇಟಿಮಾಡಿ ಒಳ ಮೀಸಲಾತಿ ಸಮೀಕ್ಷೆಯ ಜಾಗೃತಿ ಮೂಡಿಸುವ ಸಲುವಾಗಿ ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಳ್ಳು ಬಂದಿದ್ದೇವೆ ಎಂದರು.
ಸುಮಾರು 30ವರ್ಷಗಳಿಂದ ಮಾದಿಗ ಸಮುದಾಯ ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ವರ್ಗೀಕರಣ ಮಾಡಿಕೊಡಬೇಕೆಂದು ಆಗ್ರಹಿಸಿ ಹೋರಾಟ ಮಾಡುತ್ತಾ ಬಂದಿದ್ದೇವೆ. ಇವತ್ತಿಗೂ ಒಳ ಮೀಸಲಾತಿ ಜಾರಿಯನ್ನು ಮಾಡುವ ಸಲುವಾಗಿ ಹೋರಾಟ ಮಾಡುತ್ತಿದ್ದೇವೆ ಎಂದರು. ಒಳ ಮೀಸಲಾತಿ ಜಾರಿಯಾಗುವವರೆಗೂ ನಾವು ಯುಗಾದಿ ಹಬ್ಬ ಮಾಡಿಲ್ಲ, ಹುಟ್ಟು ಹಬ್ಬದ ಸಂಭ್ರಮವು ಮಾಡಿಲ್ಲ ಯಾಕೆಂದರೆ ಮೀಸಲಾತಿ ಜಾರಿಯಾಗುವವರೆಗೆ ನಾವು ಯಾವ ಹಬ್ಬದ ಸಂಭ್ರಮ ಮಾಡಲ್ಲ, ಮೀಸಲಾತಿ ಜಾರಿಯಾದ ತಕ್ಷಣವೇ ಸಂಭ್ರಮಾಚರಣೆ ಮಾಡೋಣ ಎಂದರು.

ಮುಂದುವರೆದು, ರಾಜ್ಯದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಕ್ಕೆ ಎಸ್.ಸಿ.ಪಿ ಮತ್ತು ಟಿ.ಎಸ್.ಪಿ. ಕಾಯಿದೆಯನ್ನ
ಜಾರಿಗೆ ತರಲು ಕೆಲಸವನ್ನು, ಸುಮಾರು 40 ಸಾವಿರ ಕೋಟಿ ರೂಪಾಯಿ ಅವರ ಕಲ್ಯಾಣಕ್ಕಾಗಿ ಬಳಸಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಮತ್ತು ಗುತ್ತಿಗೆಯಲ್ಲಿ ಮೀಸಲು ಎಸ್ಸಿ ಮತ್ತು ಎಸ್ಟಿಗಳಿಗೆ ತರುವಂತ ಕೆಲಸ ಮಾಡಿದ್ದಾರೆ. ಅಲ್ಲದೆ ಪೌರ ಕಾರ್ಮಿಕರಿಗೆ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ತೆಗೆದುಕೊಳ್ಳುವ ಕಾರ್ಯವನ್ನು ರದ್ದು ಮಾಡಿ ನೇರವಾಗಿ ಕಾಯಂ ಮಾಡುವ ಅವಕಾಶ ಕಲ್ಪಿಸಿದ್ದಾರೆ. ಇಷ್ಟೆಲ್ಲ ದಲಿತರ ಪರ ಕೆಲಸ ಮಾಡುವ ನಮ್ಮ ಹೆಮ್ಮೆಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಿಕ್ಕಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯಗಳನ್ನು ತತ್ವಸಿದ್ಧಾಂತಗಳನ್ನು ಆನುಷ್ಟಾನಕ್ಕೆ ತರುವ ಮೂಲಕ ಎಲ್ಲಾ ಶಾಲೆಯಲ್ಲಿ ನಮ್ಮ ಮಕ್ಕಳು ಸಂವಿಧಾನ ಪೀಠಿಕೆಯನ್ನು ಓದಲು ಆದೇಶವನ್ನು ತಂದಿದ್ದಾರೆ. ದಲಿತರಿಗೆ ಇಂತಹ ಅವಕಾಶಗಳನ್ನು ಒದಗಿಸಿಕೊಡುತ್ತಿದ್ದಾರೆ ಹಾಗಾಗಿ ನಮ್ಮ ಸಿದ್ದರಾಮಯ್ಯನವರನ್ನು ಎರಡನೇ ಅಂಬೇಡ್ಕರ್ ಎಂದ ಕರೆಯುತ್ತಿದ್ದೆವೆ ಎಂದು ಹೇಳಿದರು.
ನಾನು, ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ತೆರಳಿ ಅಲ್ಲಿನ ಸಮುದಾಯದ ಮುಖಂಡರನ್ನು ಭೇಟಿ ಮಾಡಿ ಒಳಮೀಸಲಾತಿ ಸಮೀಕ್ಷೆ ಜಾಗೃತಿಯನ್ನು ಮೂಡಿಸಲು ಸುದ್ದಿಗೋಷ್ಠಿಯನ್ನು ಹಮ್ಮಿಕೊಳ್ಳುತ್ತಿದ್ದೇವೆ. ಇವತ್ತು ಹುಟ್ಟಿದ ಮಗು ಕೂಡ ಒಳ ಮೀಸಲಾತಿ ಸಮೀಕ್ಷೆಯಲ್ಲಿ ಸೇರಬೇಕು ಅನ್ನುವುದು ನಮ್ಮ ಉದ್ದೇಶ ಆದ್ದರಿಂದ ಪ್ರತಿಯೊಬ್ಬರೂ ಸಮೀಕ್ಷೆಯಲ್ಲಿ ನೋಂದಾಯಿಸುವAತಹ ಕೆಲಸ ನಮ್ಮ ಸಮುದಾಯದ ಯುವಕರು ಮುಖಂಡರು ಮಾಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ಯಾರೆಂಟಿ ಯೋಜನೆಗಳ ಅನುಷ್ಟಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಸಂಗನಕಲ್ ವಿಜಯ ಕುಮಾರ್, ಸಿಂದುವಾಳ ಅರುಣ್, ಅಸುಂಡಿ ಹನುಮೇಶ್, ತಿಪ್ಪೇಶ್, ನೆಟ್ಟಪ್ಪ, ಕಾಂಗ್ರೆಸ್ ಯುವ ಮುಖಂಡರು ಹಾಗೂ ದಲಿತ ಸಮುದಾಯದ ಮುಖಂಡರು ಹಾಗೂ ಕಾರ್ಯಕರ್ತರು ಮುಂತಾದವರು ಉಪಸ್ಥಿತರಿದ್ದರು.
ಮುಂದಿನ ಜೂನ್ ತಿಂಗಳಲ್ಲಿ ಒಳ ಮೀಸಲಾತಿ ಜಾರಿಯಾಗಬೇಕೆಂದು ಪ್ರತಿಯೊಂದು ಜಿಲ್ಲೆಯಲ್ಲಿ ಸಮೀಕ್ಷೆಯ ಜಾಗೃತಿಯನ್ನು ಮೂಡಿಸುವ ಸಲುವಾಗಿ ಸುದ್ದಿಗೋಷ್ಠಿ ಮಾಡುವ ಮೂಲಕ ಇಂದು ಮಾಜಿ ಸಚಿವರಾದ ಶ್ರೀ ಹೆಚ್ .ಆಂಜಿನೇಯ ಅವರು ಬಳ್ಳಾರಿಗೆ ಆಗಮಿಸಿದ್ದಾರೆ.
-ರಾಮಾಂಜನಿ, ಜಿಲ್ಲಾಧ್ಯಕ್ಷರು ಯೂಥ್ ಕಾಂಗ್ರೆಸ್ ಇಂಟೆಕ್, ಬಳ್ಳಾರಿ…