ಸಂಡೂರು, ಏ.19: ತಾಲೂಕಿನ ಬೊಮ್ಮಘಟ್ಟ ಗ್ರಾಮದಲ್ಲಿ ದಲಿತ ಸೇನೆ ಗ್ರಾಮ ಘಟಕದ ವತಿಯಿಂದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಭಾನುವಾರ ಅದ್ದೂರಿಯಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ದಲಿತ ಸೇನೆ ಜಿಲ್ಲಾಧ್ಯಕ್ಷ ಮುರಳಿ ಕೃಷ್ಣ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಎನ್.ಕೆ.ಎಸ್. ಮಂಜು, ರಾಜ್ಯ ವಿಭಾಗೀಯ ಅಧ್ಯಕ್ಷ ಆನಂದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಪಿ. ಪ್ರವೀಣ್ ಕುಮಾರ್, ಜಿಲ್ಲಾ ಉಪಾಧ್ಯಕ್ಷರಾದ ಕುಮಾರಸ್ವಾಮಿ, ಅಂಜಿನಪ್ಪ, ತಿಮ್ಮಣ್ಣ ಸೇರಿದಂತೆ ಹಲವರು ಭಾಗವಹಿಸಿದರು.

ತಾಲೂಕು ಅಧ್ಯಕ್ಷ ರಾಜೇಶ್ ಹೆಗಡೆ, ಪ್ರಧಾನ ಕಾರ್ಯದರ್ಶಿ ಜೆ.ಎಚ್. ಹೊನ್ನೂರು ಸ್ವಾಮಿ, ಖಜಾಂಚಿ ಗಂಗಣ್ಣ, ಯುವ ಮುಖಂಡರಾದ ಕುಮಾರಸ್ವಾಮಿ ದೇವಗಿರಿ, ಭೋಮ್ಮಲಗುಂಡ ಹಾಗೂ ಉಪಾಧ್ಯಕ್ಷರಾದ ಮಲ್ಲೇಶ್ (ಯಶವಂತನಗರ), ಅಂಜಿನಪ್ಪ (ಗೆಣತಿಗಟ್ಟೆ), ಪರಶುರಾಮ್ (ಸ್ವಾಮಿ ಹಳ್ಳಿ) ಉಪಸ್ಥಿತರಿದ್ದರು.

ಸಂಘಟನಾ ಕಾರ್ಯದರ್ಶಿ ಪರಶುರಾಮ್ ಎಲ್‌ಎಲ್‌ಬಿ, ಉಮೇಶ್ (ಹುಲಕುಂಟೆ), ಯುವ ಘಟಕ ಉಪಾಧ್ಯಕ್ಷ ಪರಶುರಾಮ್ (ಮುರಾರಿಪುರ), ಗ್ರಾಮ ಘಟಕ ಅಧ್ಯಕ್ಷರು ದುರುಗೇಶ್ ಹಾಗೂ ಯು. ರವಿಚಂದ್ರನ್ ಸೇರಿದಂತೆ ದಲಿತ ಸೇನೆ ಮುಖಂಡರಾದ ಚೌಡೇಶ್, ಅಂಜನಿ, ಮಂಜು, ಹುಲಿರಾಜ್ ಮತ್ತು ಹಿರಿಯರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಅವರ ಆದರ್ಶಗಳನ್ನು ಸ್ಮರಿಸಲಾಯಿತು.




