‘ಮ್ಯಾರೇಜ್ ಪಾರ್ಟಿ’ ಫಸ್ಟ್ ಲುಕ್‌ ಬಿಡುಗಡೆ

0
6

ಕನ್ನಡ–ಮಲಯಾಳಂ ಭಾಷೆಗಳಲ್ಲಿ ತೆರೆಗೆ ಬರಲಿರುವ ಚಿತ್ರ; ಪೋಸ್ಟರ್‌ಗೆ ಸಿನಿಪ್ರಿಯರಿಂದ ಮೆಚ್ಚುಗೆ

ಬೆಂಗಳೂರು, ಜು. 13: ಶ್ರೀ ವರಾಹಿ ಫಿಲಂಸ್ ಅರ್ಪಿಸುವ, ಸಂತೋಷ್. ವಿ ನಿರ್ಮಾಣದ ‘ಮ್ಯಾರೇಜ್ ಪಾರ್ಟಿ’ ಚಿತ್ರದ ಫಸ್ಟ್ ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾದ ಪೋಸ್ಟರ್‌ಗೆ ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಚಯನ್ ಶೆಟ್ಟಿ ಅವರ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರ ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.

ಚಿತ್ರದ ಫಸ್ಟ್ ಲುಕ್‌ನಲ್ಲಿ ನಾಯಕ–ನಾಯಕಿ ಆತಂಕದಿಂದ ಓಡುತ್ತಿರುವ ದೃಶ್ಯ ಹಾಗೂ ಅವರ ಹಿಂದೆ ಗ್ರಾಮಸ್ಥರು ಬೆನ್ನಟ್ಟುತ್ತಿರುವ ಚಿತ್ರಣ ಗಮನ ಸೆಳೆಯುತ್ತಿದೆ. ಪೋಸ್ಟರ್‌ನ ವಿನ್ಯಾಸವೇ ಚಿತ್ರದ ಕಥೆಯ ಬಗ್ಗೆ ಕುತೂಹಲ ಮೂಡಿಸಿದ್ದು, ವಿಭಿನ್ನ ಕಥಾಹಂದರದ ಚಿತ್ರ ಎಂಬ ನಿರೀಕ್ಷೆಯನ್ನು ಹೆಚ್ಚಿಸಿದೆ.

ಫಸ್ಟ್ ಲುಕ್‌ ಪೋಸ್ಟರ್‌ ಹಂಚಿಕೊಂಡಿರುವ ನಿರ್ದೇಶಕ ಚಯನ್ ಶೆಟ್ಟಿ, “ಮ್ಯಾರೇಜ್ ಪಾರ್ಟಿ ಸಿನೆಮಾ ಸದ್ಯದಲ್ಲೇ ಬಿಡುಗಡೆಯಾಗಲಿದೆ. ನಿಮ್ಮೆಲ್ಲರ ಹಾರೈಕೆ ಚಿತ್ರತಂಡದ ಮೇಲಿರಲಿ” ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಚಿತ್ರದ ತಾರಾಗಣ, ಸಂಗೀತ, ತಾಂತ್ರಿಕ ವರ್ಗ ಹಾಗೂ ಬಿಡುಗಡೆ ದಿನಾಂಕ ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಶೀಘ್ರದಲ್ಲೇ ಪ್ರಕಟಿಸುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here