ಬಿಜೆಪಿ ವಿರುದ್ಧ ಬಂಡಾಯ ಟಿ.ಯರ್ರಿಸ್ವಾಮಿ ಪಕ್ಷೇತರ ಹಾದಿ

0
148
Advertisement

ಬಿಜೆಪಿ ಪಕ್ಷದಲ್ಲಿ ಕಳೆದ 20 ವರ್ಷಗಳಿಂದ ಕಾರ್ಯನಿರ್ವಹಿಸಿದ್ದೇನೆ, ಈ ಹಿಂದೆ ಕಾರ್ತಿಕ್ ಘೋರ್ಪಡೆಯವರು ನನಗಾಗಲಿ, ಸ್ಥಳೀಯರಿಗೆ ಟಿಕೇಟ್ ಕೊಡುತ್ತೇವೆ ಎಂದು ಈಗ ಬೇರೆಯವರಿಗೆ ಟಿಕೇಟ್ ನೀಡಿದ್ದಾರೆ ಇದರಿಂದ ಕ್ಷೇತ್ರದ ಜನತೆಗೆ ಮಾಡಿದ ಅನ್ಯಾವಾಗಿದೆ ಅದ್ದರಿಂದ ಬಿಜೆಪಿ ರೆಬೆಲ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇನೆ ಎಂದು ಸಂಡೂರು ತಾಲೂಕು ಸೋಮಲಾಪುರ ಗ್ರಾಮದ ಟಿ.ಯರ್ರಿಸ್ವಾಮಿಯವರು ತಿಳಿಸಿದರು.

ಅವರು ಪಟ್ಟಣದ ವಿಜಯವೃತ್ತದಿಂದ ಬೃಹತ್ ಮೆರವಣಿಗೆಯೊಂದಿಗೆ ನೂರಾರು ಕಾರ್ಯಕರ್ತರೊಂದಿಗೆ ಮೆರವಣಿಗೆ ಮಾಡಿದರು ಈ ಸಂದರ್ಭದಲ್ಲಿ ಅವರು ಮಾತನಾಡಿ ಸ್ಥಳೀಯರಾದಲ್ಲಿ ಸ್ಥಳೀಯರ ಸಮಸ್ಯೆಗಳು ಪೂರ್ಣವಾಗಿ ತಿಳಿದಿವೆ, ಅಲ್ಲದೆ ಸಂಡೂರು ಕ್ಷೇತ್ರವನ್ನು ಸುಂದರ ಕ್ಷೇತ್ರವನ್ನಾಗಿಸುವ, ಮೂಲಭೂತ ಸೌಲಭ್ಯ, ಅಭಿವೃದ್ದಿ ಪರ ಕಾರ್ಯಗಳನ್ನು ಮಾಡಲು ನಾನು ಪಕ್ಷೇತರವಾಗಿ ಸ್ಪರ್ಧಿಸುತ್ತಿದ್ದೇನೆ, ಪ್ರತಿ ಮನೆಯಿಂದ ರೈತರು ಬುತ್ತಿಕಟ್ಟಿಕೊಂಡು ಬಂದು ಪ್ರಚಾರ ಮಾಡುತ್ತೇವೆ ಎಂದು ತಿಳಿಸಿದ್ದಾರೆ, ಅದ್ದರಿಂದ ಇಂದು ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ವಿಜಯಶಾಲಿಯಾಗುತ್ತೇನೆ, ಕಾರಣ ಕಾಂಗ್ರೇಸ್ ಪಕ್ಷಕ್ಕೆ ವಿರೋಧಿ ಅಲೆ, ಬಿಜೆಪಿ ಅಭ್ಯರ್ಥಿ ಸ್ಥಳೀಯರಲ್ಲ ಎನ್ನುವುದು, ಅಭಿವೃದ್ದಿ ಶೂನ್ಯವಾದ ಕಾರಣ ಕಡ್ಡಾಯವಾಗಿ ಜಯಶೀಲನಾಗುತ್ತೇನೆ ಎಂದರು.

Advertisement

LEAVE A REPLY

Please enter your comment!
Please enter your name here