ಕರ್ನಾಟಕ ರಾಜ್ಯ ಮಿನರಲ್ಸ್ ವತಿಯಿಂದ ಜೇನು ಸಾಕಾಣಿಕೆ ಅರಿವು ಕಾರ್ಯಕ್ರಮ

0
303

ಸಂಡೂರು :ಡಿ: 5 : ಸಂಡೂರು ವ್ಯಾಪ್ತಿಯಲ್ಲಿರುವ ಎಂ.ಎಂ.ಎಲ್ ಗಣಿ ಕಂಪನಿಯಿಂದ ಕೃಷಿ ವಿದ್ಯಾಲಯ ಬೆಂಗಳುರು ಜೇನು ಕೃಷಿ ವಿಭಾಗ ನೇತೃತ್ವದಲ್ಲಿ ಜೇನು ಸಾಕಾಣಿಕೆ ಮಾಡುವ ವಿಧಾನದ ಬಗ್ಗೆ ಸಾರ್ವಜನಿಕ ಅರಿವು ಕಾರ್ಯಕ್ರಮ ಮಾಡಿಸಿದರು.

ಈ ಕಾರ್ಯಕ್ರಮವನ್ನು ಉದ್ದೇಶಿಸಿ ಸಂಡೂರು ಠಾಣೆಯ ಅಕರಕ್ಷಕ ನಿರೀಕ್ಷಕರಾದ ವೀರೇಶ್ ಮಾತನಾಡಿ ವೈಜ್ಞಾನಿಕ ಕೃಷಿ ಪದ್ದತಿಯಲ್ಲಿ ಜೇನು ಸಾಕಾಣಿಕೆಯಿಂದ ಹೆಚ್ಚು ಲಾಭ ಪಡೆಯಲಾಗುತ್ತಿದೆ. ಇದರಂತೆ ತುಂಬಾ ಕಡಿಮೆ ವೆಚ್ಚದಲ್ಲಿ ಜೇನು ಸಾಕಾಣಿಕೆ ಮಾಡುವುದರಿಂದ ಹೆಚ್ಚಿನ ಲಾಭವನ್ನು ಗಳಿಸಬಹುದಾಗಿದೆ ನಮ್ಮ ಆರೋಗ್ಯಕ್ಕೂ ಸಹ ಜೇನು ತುಂಬಾ ಸಹಕಾರಿಯಾಗುವುದು ಖಚಿತ ಎಂದರು.

ಸಂಡೂರಿನ ತಹಶೀಲ್ದಾರ್ ಅನಿಲ್ ಕುಮಾರ್.ಜಿ.ಮಾತನಾಡಿ ಕೃಷಿ ವಿಶ್ವವಿದ್ಯಾಲಯದಿಂದ ಎರಡು ದಿನಗಳ ಕಾಲ ಜೇನು ಸಾಕಾಣಿಕೆ ಬಗ್ಗೆ ತರಬೇತಿಯನ್ನು ನಡೆಡಲಾಗುತ್ತಿದ್ದು ತರಬೇತಿಯ ಸದುಪಯೋಗ ಪಡೆದುಕೊಳ್ಳಲು ಸೂಚಿಸಿದರು. ಅಲ್ಲದೆ ಜೇನು ಸಾಕಾಣಿಕೆ ಪದ್ದತಿಯನ್ನು ನೀವುಗಳು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ಸನ್ನು ಕಾಣಲು ಸಾಧ್ಯ ಎಂದು ತಿಳಿಸಿದರು.

ತರಬೇತುದಾರರು ಮಾತನಾಡಿ ಜೇನು ಹುಳುಗಳನ್ನು ತರುವುದರ ಜೊತೆಗೆ ಇವುಗಳು ಹೇಗೆ ಉತ್ಪತ್ತಿ ಮಾಡುತ್ತದೆ ಎನ್ನುವುದರ ಬಗ್ಗೆ ಮಾಹಿತಿ ನೀಡಿ ಇದೆ ರೀತಿ ನೀವುಗಳು ಜೇನು ಸಾಕಾಣಿಕೆಯ ಪದ್ದತಿಯ ಬಗ್ಗೆ ನೀವು ಸಂಪೂರ್ಣವಾಗಿ ತಿಳಿದು ಕೊಂಡು ನೀವೇ ಸ್ವತ: ಜೇನು ತುಪ್ಪವನ್ನು ತಯಾರಿಸಬಹುದು ಅದರಿಂದ ಸಂಡೂರಿನಲ್ಲಿ ಜೇನು ಸಾಕಾಣಿಕೆಯ ಪದ್ದತಿಯ ಬಳಸಿ ನಿಮ್ಮದೆ ಹೊಸ ಬ್ರಾಂಡ್ ಜೇನನನ್ನು ಮಾರಾಟ ಮಾಡಲು ಸಾಧ್ಯ, ಎಂದರು.

ಈ ಸಂದರ್ಭದಲ್ಲಿ ವೈದ್ಯರಾದ ಮೋಹನ್ ನಾಯಕ, ವಿಜಯಕುಮಾರ್. ಹೆಚ್. ಜಗದೀಶ್, ಡಿ.ಜೆಇ.ಎಂ. ಭಗವಾನ್, ಡಿಜಿ.ಎಂ. ಬಸವರಾಜ ಹಾಗೂ ಸಂಡೂರಿನಿ ಹಲವಾರು ಸ್ವ ಸಹಾಯ ಮಹಿಳಾ ಸಂಘಗಳು ವಿವಿಧ ಇಲಾಖೆಯ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಭಾಗಿಯಾಗಿದ್ದ 50 ಸ್ವಾವಲಂಬಿ ಮಹಿಳೆಯರಿಗೆ ಪ್ರಮಾಣ ಪತ್ರ ಹಾಗೂ ಕೃಷಿ ಪರಿಕರಗಳನ್ನು ವಿತರಿಸಲಾಯಿತು.

LEAVE A REPLY

Please enter your comment!
Please enter your name here