ದೆಹಲಿಯಲ್ಲಿ ತಂದೂರ್‌ ಗೆ ಬ್ರೇಕ್! ವಾಯು ಮಾಲಿನ್ಯ ತಡೆಯಲು ಮಾಲಿನ್ಯ ನಿಯಂತ್ರಣ ಸಮಿತಿಯಿಂದ ಕ್ರಮ

0
22
Advertisement

ನವದೆಹಲಿ, ಡಿ.16: ದಿಲ್ಲಿಯಲ್ಲಿ ವಾಯುಮಾಲಿನ್ಯ ಹೆಚ್ಚಳದ ಹಿನ್ನೆಲೆ ರೊಟ್ಟಿ ಮತ್ತು ಹುರಿದ ತಿಂಡಿಗಳನ್ನು ತಯಾರಿಸಲು ಬಳಸುತ್ತಿದ್ದ ʼತಂದೂರ್ʼ ನಿಷೇಧಿಸುವಂತೆ ದಿಲ್ಲಿ ಮಾಲಿನ್ಯ ನಿಯಂತ್ರಣ ಸಮಿತಿ (ಡಿ.ಪಿ.ಸಿ.ಸಿ) ನಗರದ ಎಲ್ಲಾ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳಿಗೆ ನಿರ್ದೇಶಿಸಿದೆ.

ದಿಲ್ಲಿಯ ವಾಯು ಗುಣಮಟ್ಟ ಸೂಚ್ಯಂಕ ಇಂದು ಬೆಳಿಗ್ಗೆ ದಿಲ್ಲಿಯ ಆನಂದ್ ವಿಹಾರ್  ಸೇರಿದಂತೆ ಹಲವು ಕಡೆ ಸುಮಾರು 400 ರಷ್ಟು ದಾಖಲಾಗಿದೆ. ಹೀಗಾಗಿ ವಾಯುಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾಯ್ದೆಯ ಸೆಕ್ಷನ್ 31 (ಎ) ಅಡಿಯಲ್ಲಿ ಈ ಆದೇಶವನ್ನು ಹೊರಡಿಸಲಾಗಿದೆ.

ಎಲ್ಲಾ ರೆಸ್ಟೋರೆಂಟ್‌ಗಳು ವಿದ್ಯುತ್, ಅನಿಲ ಆಧಾರಿತ ಅಥವಾ ಇತರ ಶುದ್ಧ ಇಂಧನ ಉಪಕರಣಗಳ ಮೂಲಕ ಆಹಾರವನ್ನು ತಯಾರಿಸಬೇಕು. ವಾಯು ಮಾಲಿನ್ಯ ತಡೆಗಟ್ಟುವ ದೃಷ್ಟಿಯಿಂದ ಕಲ್ಲಿದ್ದಲು ಬಳಸದಂತೆ ನಿರ್ದೇಶಿಸಲಾಗಿದೆ.

Advertisement

LEAVE A REPLY

Please enter your comment!
Please enter your name here