ಬೆಂಗಳೂರು- ಮಂಗಳೂರು- ಕಾರವಾರ ರೈಲು ಓಡಾಟ ಮತ್ತೆ ಶುರು; ಆರು ತಿಂಗಳ ನಂತರ ಪ್ರಯಾಣಿಕರಿಗೆ ತೆರೆದ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್‌!

0
53

ಬೆಂಗಳೂರು, ಡಿ.18: ಬೆಂಗಳೂರು- ಮಂಗಳೂರು- ಕಾರವಾರ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಆರು ತಿಂಗಳ ನಂತರ ಮತ್ತೆ ತನ್ನ ಸೇವೆಯನ್ನು ಆರಂಭಿಸಿದೆ. ರೈಲು ಮಾರ್ಗದ ಕಾಮಾಗಾರಿ ಸೇರಿದಂತೆ ಹಲವು ಕೆಲಸಗಳು ನಡೆಯುತ್ತಿದ್ದರಿಂದ ಈ ರೈಲು ಸಂಚಾರವನ್ನು ರದ್ದು ಮಾಡಲಾಗಿತ್ತು. ಇದೀಗ ಮತ್ತೆ ತನ್ನ ಸಂಚಾರವನ್ನು ಪ್ರಾರಂಭಿಸಿದೆ.

ಕಳೆದ ಆರು ತಿಂಗಳುಗಳಿಂದ ನಿಂತು ಹೋಗಿದ್ದ ರೈಲು ಪುನಃ ಆರಂಬಿಸಿದ್ದು, ರೈಲುಗಳನ್ನೆ ಅವಲಂಬಿಸಿದ್ದ ಸಾವಿರಾರು ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ. ಮೊದಲಿಗೆ ಅಕ್ಟೋಬರ್ ವರೆಗೆ ನಿರ್ಬಂಧ ಹೇರಲಾಗಿತ್ತಾದರೂ, ಕಾಮಗಾರಿಯಲ್ಲಿ ಮತ್ತಷ್ಟು ವಿಳಂಬವಾದ ಕಾರಣ ಡಿಸೆಂಬರ್ ಮಧ್ಯ ತಿಂಗಳವರೆಗೆ ರೈಲು ಓಡಾಟ ನಿಲ್ಲಿಸಲಾಗಿತ್ತು.

LEAVE A REPLY

Please enter your comment!
Please enter your name here