ಬೆಂಗಳೂರು; ಜನತಾ ಹೆಲ್ತ್ ಸೊಸೈಟಿ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

0
26
Advertisement

ಬೆಂಗಳೂರು, ಜ.17: ಯುವ ವಯಸ್ಸಿನವರಲ್ಲಿ ಹೆಚ್ಚುತ್ತಿರುವ ಹೃದಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಜನತಾ ಹೆಲ್ತ್ ಸೊಸೈಟಿ ವತಿಯಿಂದ ಉಚಿತ ಆರೋಗ್ಯ ಹಾಗೂ ಹೃದಯ ತಪಾಸಣಾ ಶಿಬಿರವನ್ನು ಯಶವಂತಪುರದ ಮಹಾಲಕ್ಷ್ಮೀ ಲೇಔಟ್‌ನ ರಾಮಕೃಷ್ಣ ಆಸ್ಪತ್ರೆಯಲ್ಲಿ ಆಯೋಜಿಸಲಾಗಿತ್ತು.

ಶಿಬಿರವನ್ನು ಉದ್ಘಾಟಿಸಿ ಮಾತಾಡಿದ ಶಾಸಕ ಗೋಪಾಲಯ್ಯ ಅವರು, ’25 ವರ್ಷದಿಂದ‌ ನಲವತ್ತು ವರ್ಷದವರಿಗೆ ಹೃದಯ ಸಂಬಂಧಿ ಸಮಸ್ಯೆಗಳು ಜಾಸ್ತಿಯಾಗುತ್ತಿದ್ದು, ಸಾವು- ನೋವುಗಳು ಹೆಚ್ಚುತ್ತಿವೆ. ಆದ್ದರಿಂದ ತಿಂಗಳಲ್ಲಿ ಒಂದೆರಡು ಇಂತಹ ಶಿಬಿರಗಳು ಮಾಡ್ಬೇಕು. ಹೆಚ್ಚಿನ ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂಬ ನಿಟ್ಟಿನಲ್ಲಿ ಶಿಬಿರವನ್ನು ನಡೆಸಲಾಗುತ್ತಿದೆ. ಪ್ರತಿಯೊಬ್ಬರೂ ನನ್ನನು ಸೇರಿದಂತೆ, ಆರು ತಿಂಗಳಿಗೊಮ್ಮೆ ಹೆಲ್ತ್ ಚೆಕ್ ಅಪ್ ಮಾಡಿಸಿಕೊಳ್ಳಲೇ‌ಬೇಕು’ ಎಂದು ಮನವಿ ಮಾಡಿದರು.

24 ರಿಂದ 45 ವರ್ಷ ವಯಸ್ಸಿನವರಿಗೆ ವಿಶೇಷವಾಗಿ ಆಯೋಜಿಸಿದ್ದ ಈ ಹಾರ್ಟ್ ಚೆಕ್‌ಅಪ್ ಶಿಬಿರಕ್ಕೆ ಉತ್ತಮ ಸ್ಪಂದನೆ ದೊರೆತಿದ್ದು, 300ಕ್ಕೂ ಹೆಚ್ಚು ಮಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಶಿಬಿರದಲ್ಲಿ ಇಸಿಜಿ, ರಕ್ತದೊತ್ತಡ, ಸಕ್ಕರೆ ಸೇರಿದಂತೆ ಹೃದಯ ಸಂಬಂಧಿತ ವಿವಿಧ ಪರೀಕ್ಷೆಗಳನ್ನು ನಡೆಸಲಾಯಿತು.

ಪರೀಕ್ಷೆಯ ವೇಳೆ ಇಬ್ಬರಲ್ಲಿ ಗಂಭೀರ ಹೃದಯ ಸಮಸ್ಯೆಗಳು ಪತ್ತೆಯಾಗಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಅಗತ್ಯವಿದ್ದ ಸ್ಟಂಟ್ ಚಿಕಿತ್ಸೆಯನ್ನು ಉಚಿತವಾಗಿ ಮಾಡಲಾಗಿದ್ದು, ಸಮಯೋಚಿತ ಚಿಕಿತ್ಸೆ ಮೂಲಕ ಅವರ ಆರೋಗ್ಯವನ್ನು ಸ್ಥಿರಗೊಳಿಸಲಾಗಿದೆ.

ಅನುಭವಸಂಪನ್ನ ವೈದ್ಯರ ತಂಡ ಶಿಬಿರದಲ್ಲಿ ಭಾಗವಹಿಸಿ ಯುವ ವಯಸ್ಸಿನಲ್ಲೇ ಹೃದಯ ಆರೋಗ್ಯದ ಮಹತ್ವದ ಕುರಿತು ಸಲಹೆ ಹಾಗೂ ಮಾರ್ಗದರ್ಶನ ನೀಡಿದರು. ಜನತಾ ಹೆಲ್ತ್ ಸೊಸೈಟಿ ಸಮಾಜಮುಖಿ ಸೇವೆಯ ಭಾಗವಾಗಿ ಇಂತಹ ಆರೋಗ್ಯ ಶಿಬಿರಗಳನ್ನು ಮುಂದುವರಿಸುವುದಾಗಿ ತಿಳಿಸಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದೆ.

Advertisement

LEAVE A REPLY

Please enter your comment!
Please enter your name here