‘ಧುರಂಧರ್-2’ಗೆ ಜನಮೆಚ್ಚುಗೆ; ರಮ್ಯಾ ಹೇಳಿಕೆ ಚರ್ಚೆಗೆ ಗ್ರಾಸ, ಪ್ರಕಾಶ್ ರಾಜ್ ಪ್ರತಿಕ್ರಿಯೆಗೆ ಕಾತರ!

0
5
Advertisement

ಬೆಂಗಳೂರು, ಮಾ.20: ಬಿಡುಗಡೆಯಾದ ‘ಧುರಂಧರ್-2’ ಸಿನಿಮಾಗೆ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹೆಚ್ಚಿನ ಪ್ರೇಕ್ಷಕರು ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಆದರೆ, ನಟಿ ರಮ್ಯಾ ನೀಡಿದ ನೇರ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಸಿನಿಮಾ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ರಮ್ಯಾ, “ಚಿತ್ರವು ನಿರೀಕ್ಷೆ ತಲುಪಲಿಲ್ಲ, ಕೆಲ ಅಂಶಗಳು ನಿರಾಶೆ ಉಂಟುಮಾಡಿದವು” ಎಂದು ತಿಳಿಸಿದ್ದಾರೆ. ಅವರ ಈ ಹೇಳಿಕೆ ಅಭಿಮಾನಿಗಳಲ್ಲಿ ವಿಭಿನ್ನ ಪ್ರತಿಕ್ರಿಯೆಗಳಿಗೆ ಕಾರಣವಾಗಿದ್ದು, ಕೆಲವರು ಒಪ್ಪಿಗೆ ಸೂಚಿಸಿದರೆ, ಬಹುತೇಕರು ಸಿನಿಮಾವನ್ನು ಮೆಚ್ಚಿಕೊಂಡು ಸಕಾರಾತ್ಮಕ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೆ ಆಧರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಜೋರಾಗಿದ್ದು, ಕೆಲ ನೆಟಿಜನ್‌ಗಳು, ಇಂತಹ ಹೇಳಿಕೆಗಳಿಂದ ಥಿಯೇಟರ್‌ಗಳಲ್ಲಿ ಕಾಲ್ತುಳಿತದಂತಹ ಪರಿಸ್ಥಿತಿಯನ್ನು ತಡೆಯಲು ಪೊಲೀಸ್ ಬಂದೋಬಸ್ತ್ ಬೇಕಾಗಬಹುದು, ಸಿನಿಮಾಕ್ಕೆ ಮತ್ತಷ್ಟು ಪ್ರಚಾರ ಸಿಗುತ್ತಿವೆ ಎಂದು ಪ್ರತಿಕ್ರಿಯಿಸಿದ್ದಾರೆ.

ಇದೇ ವೇಳೆ, ಎಡಪಂಥೀಯ ಧೋರಣೆಗೆ ಹೆಸರಾಗಿರುವ ನಟ ಪ್ರಕಾಶ್ ರಾಜ್ ಅವರು ಈ ವಿಷಯದ ಕುರಿತು ಯಾವ ರೀತಿಯ ಪ್ರತಿಕ್ರಿಯೆ ನೀಡಬಹುದು ಎಂಬ ಕುತೂಹಲವೂ ಹೆಚ್ಚಾಗಿದೆ. ರಮ್ಯಾ ಹೇಳಿಕೆಯ ಬೆನ್ನಲ್ಲೇ ಅವರ ಪ್ರತಿಕ್ರಿಯೆ ಹೊರಬಂದರೆ, ಚರ್ಚೆ ಮತ್ತಷ್ಟು ವೇಗ ಪಡೆಯುವ ಸಾಧ್ಯತೆಯಿದೆ ಎಂದು ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಒಟ್ಟಿನಲ್ಲಿ, ‘ಧುರಂಧರ್-2’ ಸಿನಿಮಾಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿರುವ ನಡುವೆಯೇ, ರಮ್ಯಾ ನೀಡಿದ ಹೇಳಿಕೆ ಮತ್ತು ಅದರ ಸುತ್ತಲಿನ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿವೆ.

Advertisement

LEAVE A REPLY

Please enter your comment!
Please enter your name here