ಜಾಲ್ಸೂರು–ಚೆರ್ಕಳ ರಸ್ತೆ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ

0
28

ಜಾಲ್ಸೂರು, ಮಾ.20: ಜಾಲ್ಸೂರು–ಚೆರ್ಕಳ ರಸ್ತೆಯ ಮಧ್ಯೆ ಡಾಮರೀಕರಣ ಕಾಮಗಾರಿ ಆರಂಭವಾಗಿರುವ ಹಿನ್ನೆಲೆಯಲ್ಲಿ, ಈ ಮಾರ್ಗದ ನಿರ್ದಿಷ್ಟ ಭಾಗದಲ್ಲಿ ಮಾರ್ಚ್ 23ರಿಂದ ಏಪ್ರಿಲ್ 5ರವರೆಗೆ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಎಂದು ಪಿಡಬ್ಲ್ಯೂಡಿ ರಸ್ತೆಗಳ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.

ಚೆರ್ಕಳದಿಂದ ಜಾಲ್ಸೂರಿನತ್ತ ಬರುವ ವಾಹನಗಳು ಪಡಿಯತ್ತಡ್ಕ ಬಳಿ ಬಲಭಾಗಕ್ಕೆ ತಿರುಗಿ ಅಡೂರು ಹಾಗೂ ಕೊಟ್ಯಾಡಿ ಮೂಲಕ ಪರ್ಯಾಯ ಮಾರ್ಗವನ್ನು ಬಳಸಬೇಕು ಎಂದು ಸೂಚಿಸಲಾಗಿದೆ.

ಅದೇ ರೀತಿ, ಜಾಲ್ಸೂರಿನಿಂದ ಚೆರ್ಕಳದತ್ತ ತೆರಳುವ ವಾಹನಗಳು ಕೊಟ್ಯಾಡಿ ಬಳಿ ಎಡಭಾಗಕ್ಕೆ ತಿರುಗಿ ಅಡೂರು ಮಾರ್ಗವಾಗಿ ಪಡಿಯತ್ತಡ್ಕ ತಲುಪಿ ನಂತರ ಚೆರ್ಕಳಕ್ಕೆ ಸಾಗಬೇಕು ಎಂದು ತಿಳಿಸಿದ್ದಾರೆ.

ಪ್ರಯಾಣಿಕರು ಹಾಗೂ ವಾಹನ ಚಾಲಕರು ಪರ್ಯಾಯ ಮಾರ್ಗಗಳನ್ನು ಅನುಸರಿಸಿ ಸಹಕರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here