ತಿಮರೋಡಿ ಮನೆ ಮೇಲೆ ಎಸ್‌ಐಟಿ ದಾಳಿ ಪೊಲೀಸರು ನಡೆಸಿದ ತೀವ್ರ ಶೋಧ ಕಾರ್ಯಾಚರಣೆ

0
67
Mahesh-Shetty-Thimarody
Advertisement

ಮಂಗಳೂರು: ಧರ್ಮಸ್ಥಳ (Dharmasthala) ಬುರುಡೆ ಪ್ರಕರಣದ ಪ್ರಮುಖ ಕೇಂದ್ರವಾಗಿರುವ ಮಹೇಶ್ ಶೆಟ್ಟಿ ತಿಮರೋಡಿ (Mahesh Shetty Thimarody) ಅವರ ನಿವಾಸದ ಮೇಲೆ ವಿಶೇಷ ತನಿಖಾ ತಂಡ (SIT) ಇಂದು ದಾಳಿ ನಡೆಸಿದೆ.

ಸಾಕ್ಷಿಧಾರನಾಗಿ ಹಾಜರಾದ ಬಳಿಕ ಇದೀಗ ಆರೋಪಿಯಾಗಿರುವ ಚಿನ್ನಯ್ಯ (Chinnayya) ನೀಡಿದ ಹೇಳಿಕೆಯ ಆಧಾರದ ಮೇಲೆ, ಪೊಲೀಸರು ಕೋರ್ಟ್‌ನಿಂದ ಶೋಧ ವಾರಂಟ್ ಪಡೆದು ತಿಮರೋಡಿ ಮನೆಗೆ ಆಗಮಿಸಿದ್ದಾರೆ.

ಎಸ್‌ಐಟಿ ಉತ್ಕನನ ಕಾರ್ಯ ಮುಗಿದ ನಂತರ ನಾನು ತಿಮರೋಡಿ ನಿವಾಸಕ್ಕೆ ತೆರಳುತ್ತಿದ್ದೆ. ಅಲ್ಲಿ ನನಗೆ ಒಂದು ಕೊಠಡಿ ನೀಡಲಾಗಿತ್ತು. ಆ ಕೊಠಡಿಯಲ್ಲಿ ನಾನು ಬಟ್ಟೆ ಹಾಗೂ ಬ್ಯಾಗ್ ಇಟ್ಟಿದ್ದೆ. ನಾನು ಮೊಬೈಲ್ ಬಳಸುತ್ತಿರಲಿಲ್ಲ, ಅದು ತಿಮರೋಡಿ ಪರದವರ ಬಳಿ ಇತ್ತು ಎಂದು ಹೇಳಿಕೆ ನೀಡಿದ್ದ.

ಈ ಹಿನ್ನೆಲೆಯಲ್ಲಿ ಚಿನ್ನಯ್ಯ ತಂಗಿದ್ದ ಕೊಠಡಿಯ ಮಹಜರು ನಡೆಸಿ, ಮೊಬೈಲ್‌ ವಶಪಡಿಸಿಕೊಳ್ಳಲು ಪೊಲೀಸರು ತಿಮರೋಡಿ ನಿವಾಸಕ್ಕೆ ಆಗಮಿಸಿದ್ದಾರೆ.

ಪೊಲೀಸ್ ವಾಹನಗಳೊಂದಿಗೆ ಮಾಧ್ಯಮ ಪ್ರತಿನಿಧಿಗಳ ವಾಹನಗಳೂ ತಿಮರೋಡಿ ಕಡೆಗೆ ತೆರಳಿದವು. ಆದರೆ ತಿಮರೋಡಿಗೆ ಹೋಗುವ ಮಾರ್ಗದ ಮಧ್ಯದಲ್ಲಿ, ಸುಮಾರು ಒಂದು ಕಿಲೋಮೀಟರ್ ದೂರದಲ್ಲೇ ಪೊಲೀಸರು ಮಾಧ್ಯಮ ವಾಹನಗಳನ್ನು ತಡೆದರು.

ಮತ್ತಷ್ಟು ಓದಿ: ರಾಷ್ಟ್ರೀಯ ಹಿತಾಸಕ್ತಿ ಮೊದಲ ಆದ್ಯತೆ – ಉತ್ತಮ ಒಪ್ಪಂದ ಸಿಕ್ಕರೆ ಎಲ್ಲಿ ಬೇಕಾದರೂ ತೈಲ ಖರೀದಿ: ಭಾರತ

ಧರ್ಮಸ್ಥಳದಲ್ಲಿ ಉತ್ಕನನ ನಡೆಯುತ್ತಿದ್ದ ಸಮಯದಲ್ಲಿ ಬುರುಡೆ ಗ್ಯಾಂಗ್‌ನ ಎಲ್ಲಾ ಸದಸ್ಯರು ತಿಮರೋಡಿ ಮನೆಯಲ್ಲಿ ವಾಸಿಸುತ್ತಿದ್ದರು. ಎಲ್ಲಾ ಯೋಜನೆಗಳೂ ಅಲ್ಲಿ ರೂಪುಗೊಂಡಿದ್ದವು.

Advertisement

LEAVE A REPLY

Please enter your comment!
Please enter your name here