ಹತ್ತು ಸಾವಿರ ರನ್ ಗಡಿ ದಾಟಿದ ಸ್ಮೃತಿ ಮಂಧಾನ;ವಿಶ್ವ ದಾಖಲೆ ಸೃಷ್ಟಿಸಿದ ಸ್ಟಾರ್ ಬ್ಯಾಟರ್!

0
30
Advertisement

ತಿರುವನಂತಪುರಂ, ಡಿ.29: ಭಾರತ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂಧಾನ, ಶ್ರೀಲಂಕಾ ವಿರುದ್ಧದ ಟಿ೨೦ ಪಂದ್ಯದಲ್ಲಿ ಹೊಸ ವಿಶ್ವ ದಾಖಲೆ ಮಾಡಿದ್ದಾರೆ. ಅತೀ ವೇಗವಾಗಿ 10000 ರನ್ ಪೂರೈಸಿದ ಮಹಿಳಾ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ತಿರುವನಂತಪುರದ ಗ್ರೀನ್ ಫೀಲ್ಡ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುಧ್ದ ನಡೆದ ಟಿ20 ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ಸ್ಮೃತಿ ಮಂಧಾನ ಅವರು ಬರೀ 281 ಇನ್ನಿಂಗ್ಸ್‌ ನಲ್ಲಿ ಈ ಸಾಧನೆ ಮಾಡಿದ್ದು, ಮಹಿಳಾ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 10000 ರನ್ ಗಡಿದಾಟಿದ ವಿಶ್ವದ ನಾಲ್ಕನೇ ಮಹಿಳಾ ಆಟಗಾರ್ತಿ ಹಾಗೂ ಎರಡನೇ ಭಾರತೀಯ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಭಾರತ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಈ ಸಾಧನೆ ಮಾಡಿದ್ದರು.

Advertisement

LEAVE A REPLY

Please enter your comment!
Please enter your name here