ಕೇರಳಕ್ಕೂ ಕಾಲಿಟ್ಟ ಗ್ಯಾರಂಟಿ ಯೋಜನೆ; ಪಂಚ ಗ್ಯಾರಂಟಿ ಭರವಸೆ ಘೋಷಿಸಿದ ಕಾಂಗ್ರೆಸ್!

0
2
Advertisement

ತಿರುವನಂತಪುರಂ, ಮಾ.09: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್‌ ಇದೀಗ ನೆರೆಯ ಕೇರಳದಲ್ಲೂ ಅದೇ ತಂತ್ರವನ್ನು ಪ್ರಯೋಗಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಮೈತ್ರಿ ಅಧಿಕಾರಕ್ಕೆ ಬಂದರೆ ಮಹಿಳೆಯರು, ವಿದ್ಯಾರ್ಥಿನಿಯರು, ವೃದ್ಧರು ಹಾಗೂ ಸಣ್ಣ ಉದ್ಯಮಿಗಳನ್ನು ಗುರಿಯಾಗಿಸಿಕೊಂಡು ಐದು ಪ್ರಮುಖ ಯೋಜನೆಗಳನ್ನು ಜಾರಿಗೆ ತರುವುದಾಗಿ ಪಕ್ಷ ಭರವಸೆ ನೀಡಿದೆ.

ಕೇರಳದಲ್ಲಿ ಯುಡಿಎಫ್‌ ಮೈತ್ರಿ ಕೂಟದ ಭಾಗವಾಗಿರುವ ಕಾಂಗ್ರೆಸ್‌ ಈ ಘೋಷಣೆಯನ್ನು ಶನಿವಾರ ತಿರುವನಂತಪುರಂನಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಮಾಡಿದೆ. ಈ ಸಂದರ್ಭದಲ್ಲಿ ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ ಪಂಚ ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ, ಗ್ಯಾರಂಟಿ ಯೋಜನೆಗಳ ಮೂಲಕ ಭರ್ಜರಿ ಮತಗಳನ್ನು ಪಡೆದು ಬಹುಮತದಿಂದ ಸರಕಾರ ನಡೆಸಿತ್ತು. ಇದೀಗ ಇದೇ ತಂತ್ರವನ್ನು‌ ಕೇರಳದಲ್ಲಿ ಹೂಡಲು ಚಿಂತನೆ ನಡೆಸಿದೆ.

ಏನೇನು ಗ್ಯಾರಂಟಿ?

  1. ಕರ್ನಾಟಕದ ಶಕ್ತಿ ಯೋಜನೆಯ ಮಾದರಿಯಲ್ಲಿ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ.
  2. ಕಾಲೇಜು ವಿದ್ಯಾರ್ಥಿನಿಯರಿಗೆ ಪ್ರತಿ ತಿಂಗಳು ₹1,000 ಸಹಾಯಧನ.
  3. ವೃದ್ಧರು, ಅಂಗವಿಕಲರು ಹಾಗೂ ವಿಧವೆಯರಿಗೆ ನೀಡುವ ಕಲ್ಯಾಣ ಪಿಂಚಣಿಯನ್ನು ₹1,600ರಿಂದ ₹3,000ಕ್ಕೆ ಹೆಚ್ಚಿಸುವುದು.
  4. ಮಾಜಿ ಮುಖ್ಯಮಂತ್ರಿ Oommen Chandy ಅವರ ಹೆಸರಿನಲ್ಲಿ ಅರ್ಹ ಕುಟುಂಬಗಳಿಗೆ ₹25 ಲಕ್ಷದವರೆಗೆ ಆರೋಗ್ಯ ವಿಮೆ ಯೋಜನೆ.
  5. ಸಣ್ಣ ಉದ್ಯಮಿಗಳಿಗೆ ₹5 ಲಕ್ಷದವರೆಗೆ ಬಡ್ಡಿರಹಿತ ಸಾಲ ನೀಡುವುದು.

ಈ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರಾಜ್ಯದ ವಿವಿಧ ವರ್ಗದ ಜನರಿಗೆ ನೆರವಾಗುವ ಉದ್ದೇಶ ಹೊಂದಿದ್ದೇವೆ ಎಂದು ಕಾಂಗ್ರೆಸ್‌ ನಾಯಕರು ತಿಳಿಸಿದ್ದಾರೆ.

Advertisement

LEAVE A REPLY

Please enter your comment!
Please enter your name here