ಧರ್ಮಸ್ಥಳ ಪ್ರಕರಣ ಅನನ್ಯಾ ಭಟ್ ನಾಪತ್ತ ಎಸ್‌ಐಟಿ ತನಿಖೆ

0
89
Dharmasthala case
Advertisement

ಧರ್ಮಸ್ಥಳ ಪ್ರಕರಣ ಅನನ್ಯಾ ಭಟ್ ನಾಪತ್ತೆ ಆರೋಪದ ನಿಜಾಸ್ತಿ ಹುಡುಕುತ್ತಿರುವ ಎಸ್‌ಐಟಿ

ಬೆಂಗಳೂರು, ಆಗಸ್ಟ್ 18: ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅನನ್ಯಾ ಭಟ್ ನಾಪತ್ತೆ ಆರೋಪದ ತನಿಖೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಮತ್ತಷ್ಟು ಚುರುಕುಗೊಳಿಸಿದೆ. ಇತ್ತ, ಅನಾಮಿಕ ವ್ಯಕ್ತಿಯ ದೂರಿನ ಆಧಾರದ ಮೇಲೆ ನಡೆದಿದ್ದ ಉತ್ಖನನವನ್ನು ತಾತ್ಕಾಲಿಕವಾಗಿ ನಿಲ್ಲಿಸಿ, ಆತನನ್ನೇ ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ.

ರಿಪ್ಪನ್ ಪೇಟೆಯಲ್ಲಿ ಎಸ್‌ಐಟಿ ಮಾಹಿತಿ ಸಂಗ್ರಹ

ಧರ್ಮಸ್ಥಳದಲ್ಲಿ ಅನನ್ಯಾ ಭಟ್ ಎಂಬ ಯುವತಿ ನಾಪತ್ತೆಯಾಗಿರುವ ಆರೋಪದ ಬಗ್ಗೆ ಬೆಳಕು ಚೆಲ್ಲಲು, ಸಿಪಿಐ ಮಂಜುನಾಥ್ ಗೌಡ ನೇತೃತ್ವದ ಎಸ್‌ಐಟಿ ತಂಡ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಗೆ ತೆರಳಿದೆ. ಅಲ್ಲಿ, ಅನನ್ಯಾ ತಾಯಿ ಎನ್ನಲಾದ ಸುಜಾತಾ ಭಟ್ ಅವರ ಬಗ್ಗೆ ಹಾಗೂ ಅವರ ಹಿನ್ನೆಲೆ ಕುರಿತು ಮಾಹಿತಿ ಕಲೆ ಹಾಕಿದೆ.

  • ಸುಜಾತಾ ಭಟ್ ಅವರು 1999ರಿಂದ 2007ರವರೆಗೆ ರಿಪ್ಪನ್ ಪೇಟೆಯಲ್ಲಿ ವಾಸವಾಗಿದ್ದರು.
  • ಮಣಿಪಾಲದಲ್ಲಿ ವೈದ್ಯಕೀಯ ಶಿಕ್ಷಣ ಓದುತ್ತಿದ್ದ ಅನನ್ಯಾ, ಧರ್ಮಸ್ಥಳಕ್ಕೆ ತೆರಳಿದ ಬಳಿಕ ನಾಪತ್ತೆಯಾಗಿದ್ದಾಳೆ ಎಂಬ ಆರೋಪ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ.
  • ಆದರೆ, ಕೆಲ ಗುಂಪುಗಳು “ಅನನ್ಯಾ ಭಟ್ ಎಂಬ ವ್ಯಕ್ತಿಯೇ ಇರಲಿಲ್ಲ, ಮಣಿಪಾಲದಲ್ಲಿ ಅವರ ಶಿಕ್ಷಣದ ದಾಖಲೆಗಳೇ ಲಭ್ಯವಿಲ್ಲ” ಎಂದು ವಾದಿಸುತ್ತಿವೆ.

ಉತ್ಖನನ ತಾತ್ಕಾಲಿಕ ನಿಲುಗಡೆ

ಅನಾಮಿಕ ದೂರುದಾರ ಸೂಚಿಸಿದ ಸ್ಥಳಗಳಲ್ಲಿ ಎಸ್‌ಐಟಿ ಹಲವು ದಿನಗಳ ಕಾಲ ಉತ್ಖನನ ನಡೆಸಿತು. ಕೆಲವೆಡೆ ಮೂಳೆ ಹಾಗೂ ಅಸ್ಥಿಪಂಜರ ಸಿಕ್ಕಿದ್ದರೂ, ಹೆಚ್ಚಿನ ಸುಳಿವುಗಳು ದೊರೆತಿಲ್ಲ. ಇದರ ನಡುವೆ ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿಗಳು ಜೋರಾಗುತ್ತಿವೆ.

ಮತ್ತಷ್ಟು ಓದಿ: ಜೂನಿಯರ್ ಎನ್‌ಟಿಆರ್ ‘ವಾರ್ 2’ ನಿಷೇಧಿಸಬೇಕು ಎಂದ ಶಾಸಕನಿಗೆ ಈಗ ಭಯ ಸಾರ್ವಜನಿಕ ಕ್ಷಮೆಯಾಚನೆ

ಅನಾಮಿಕ ದೂರುದಾರನ ವಿಚಾರಣೆ

ಉತ್ಖನನದ ನಂತರ, ಇದೀಗ ಎಸ್‌ಐಟಿ ಅನಾಮಿಕ ದೂರುದಾರನನ್ನೇ ತೀವ್ರ ವಿಚಾರಣೆಗೆ ಒಳಪಡಿಸಲು ತೀರ್ಮಾನಿಸಿದೆ. ಸೋಮವಾರದಿಂದಲೇ ವಿಚಾರಣೆ ಪ್ರಕ್ರಿಯೆ ಆರಂಭವಾಗಿದೆ.

ಸಾಮಾಜಿಕ ಮಾಧ್ಯಮ ವದಂತಿಗಳ ಮೇಲೆ ನೋಟಿಸ್

ಪ್ರಕರಣದ ಕುರಿತು ಆಧಾರವಿಲ್ಲದ ವೀಡಿಯೋಗಳು ಮತ್ತು ಪೋಸ್ಟ್‌ಗಳನ್ನು ಹರಿಬಿಟ್ಟವರಿಗೆ ಎಸ್‌ಐಟಿ ನೋಟಿಸ್ ನೀಡಲು ಆರಂಭಿಸಿದೆ. ಕಳೆದ ಒಂದೂವರೆ ತಿಂಗಳಲ್ಲಿ ಹರಿದಿರುವ ಎಲ್ಲಾ ವೀಡಿಯೋಗಳನ್ನು ತಂಡ ಸಂಗ್ರಹಿಸಿದ್ದು, ಸಾಮಾಜಿಕ ಮಾಧ್ಯಮದ ಮೇಲೆ ಸಂಪೂರ್ಣ ನಿಗಾ ವಹಿಸಲಾಗಿದೆ.

Advertisement

LEAVE A REPLY

Please enter your comment!
Please enter your name here