ಬಳ್ಳಾರಿಯ ಕ್ರೆಡಿಟ್ ಆಕ್ಸೆಸ್ ಗ್ರಾಮೀಣ್ ವತಿಯಿಂದ ಸಾಮಾಜಿಕ ಆರ್ಥಿಕ ಅಭಿವೃದ್ಧಿ ಕಾರ್ಯಗಾರ

0
78
Advertisement

ಬಳ್ಳಾರಿಯ ಕ್ರೆಡಿಟ್ ಆಕ್ಸೆಸ್ ಗ್ರಾಮೀಣ್ ವತಿಯಿಂದ ಸಾಮಾಜಿಕ ಆರ್ಥಿಕ ಅಭಿವೃದ್ಧಿ ಕಾರ್ಯಗಾರ

BP News Karnataka
ಬಳ್ಳಾರಿ, ಜುಲೈ 19:
ಕ್ರೆಡಿಟ್ ಆಕ್ಸೆಸ್ ಗ್ರಾಮೀಣ ಲಿಮಿಟೆಡ್, ಬಳ್ಳಾರಿ ಶಾಖೆಯು ‘ಸಾಮಾಜಿಕ ಆರ್ಥಿಕ ಅಭಿವೃದ್ದಿ ಅಭಿವೃದ್ಧಿ ಕಾರ್ಯಗಾರ” ಕುರಿತ ಜನಜಾಗೃತಿ ಕಾರ್ಯಕ್ರಮವನ್ನು ಜುಲೈ 19ರಂದು ಸೂರ್ಯಭವನ ಫಂಕ್ಷನ್ ಹಾಲ್, ತಾರಾನಾಥ್ ಕಾಲೇಜು ಹತ್ತಿರ ಡಾ|| ರಾಜ್ ಕುಮಾರ್ ರಸ್ತೆ, (ಅನಂತಪುರ ರಸ್ತೆ), ಯಶಸ್ವಿಯಾಗಿ ಆಯೋಜಿಸಿತು.

“ಜ್ಞಾನದಿಂದ ಉತ್ತಮ ಜೀವನ ನಿರ್ಮಾಣ’ ಎಂಬ ಪ್ರಸ್ತುತ ಮತ್ತು ಪ್ರಬಲ ಘೋಷಣೆಯೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ, ಮಹಿಳೆಯರು ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಂಡು ತಮ್ಮ ಜೀವನದ ಅಭಿವೃದ್ಧಿಗಾಗಿ ಅಗತ್ಯ ಮಾಹಿತಿಗಳನ್ನು ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಮಹಿಳೆಯರ ಸಾಲ ನಿರ್ವಹಣೆ, ಸ್ವಾವಲಂಬನೆ, ಆರೋಗ್ಯ ಜಾಗೃತಿ ಮತ್ತು ಹಕ್ಕುಗಳ ಅರಿವು ಕುರಿತ ಉಪನ್ಯಾಸಗಳು ಜರುಗಿದ್ದು, ವಿವರವಾದ ಪ್ರಾತ್ಯಕ್ಷಿಕೆಗಳ ಮೂಲಕ ಮಾಹಿತಿ ನೀಡಲಾಯಿತು. ಭಾಗವಹಿಸಿದ ಮಹಿಳೆಯರು ಸಾಕಷ್ಟು ಹಿತವಚನಗಳನ್ನು ಪಡೆದರು. ಸ್ಥಳೀಯ ಮಹಿಳೆಯರು ಮತ್ತು ಯುವತೆಯರು ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಂಡು ಸ್ಪಂದಿಸಿದರು ಹಾಗೂ ಶಿವಲಿಂಗಯ್ಯ ಹೆಚ್.ಕೆ ವಲಯ ವ್ಯವಸ್ಥಾಪಕರು, ಗುಲಬರ್ಗ ಮತ್ತು ಮಂಜುನಾಥ ಐ.ಎಂ. ಪ್ರಾದೇಶಿಕ ವ್ಯವಸ್ಥಾಪಕರು, ಹೊಸಪೇಟೆ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಿದರು.

ಮುಖ್ಯ ಅಥಿತಿಗಳಾಗಿ
ಶ್ರೀಯುತ ಯಲ್ಲಾ ರಮೇಶ್ ಬಾಬು (ಜಿಲ್ಲಾ ಆರೋಗ್ಯ ಅಧಿಕಾರಿಗಳು ಬಳ್ಳಾರಿ), ಶ್ರೀ ಎನ್. ಸತೀಷ್ (ಪಿ. ಐ. ಗ್ರಾಮಾಂತರ ಪೊಲೀಸ್ ಠಾಣೆ, ಬಳ್ಳಾರಿ), ಶ್ರೀ ಗಿರೀಶ್ ಕುಲಕರ್ಣಿ ( ಎಲ್.ಡಿ.ಎಂ ಬಳ್ಳಾರಿ), ಶ್ರೀ ಯುವರಾಜ್ ಕುಮಾರ್ ಆರ್.ಎಸ್. ( ಡಿ.ಡಿ.ಎಂ. ಬಳ್ಳಾರಿ)‌‌ ಭಾಗಿಯಾಗಿದ್ದರು.

‌ಈ ಕಾರ್ಯಕ್ರಮದಲ್ಲಿ ಇತ್ತೀಚೆಗಿನ ವರದಿಗಳ ಪ್ರಕಾರ, OTP (ಒನ್ ಟೈಮ್ ಪಾಸ್‌ವರ್ಡ್) ಮೂಲಕ ನಡೆಯುತ್ತಿರುವ ಆನ್‌ಲೈನ್ ಹಣಕಾಸು ಮೋಸಗಳ ಸಂಖ್ಯೆ ಕರ್ನಾಟಕದಲ್ಲಿ ಆತಂಕಕಾರಿ ಮಟ್ಟಕ್ಕೆ ಏರಿದೆ. ಜನರು ಡಿಜಿಟಲ್ ಟ್ರಾನ್ಸಾಕ್ಷನ್‌ಗಳಿಗೆ ಹೆಚ್ಚು ನಿರ್ಭರರಾಗುತ್ತಿರುವ ಹಿನ್ನೆಲೆಯಲ್ಲಿ, ಸೈಬರ್ ಅಪರಾಧಿಗಳು ನಕಲಿ ಲಿಂಕ್‌ಗಳು, ಫೋನ್ ಕರೆಗಳು ಮತ್ತು ಟ್ರೇಡಿಂಗ್ ಆಫರ್‌ಗಳ ಮುಖಾಂತರ OTP ಪತ್ತೆಹಚ್ಚಿ ಬ್ಯಾಂಕ್ ಖಾತೆಗಳನ್ನು ಖಾಲಿ ಮಾಡುತ್ತಿದ್ದಾರೆ ಎಂದು ಶ್ರೀ ಎನ್. ಸತೀಷ್ (ಪಿ. ಐ. ಗ್ರಾಮಾಂತರ ಪೊಲೀಸ್ ಠಾಣೆ, ಬಳ್ಳಾರಿ) ಹೇಳಿದರು.

‌‌‌‌ ಕಾರ್ಯಕ್ರಮದ ಕೊನೆಯಲ್ಲಿ, ಎಲ್ಲಾ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಯಶಸ್ಸಿಗೆ ಕ್ರೆಡಿಟ್ ಆಕ್ಸೆಸ್ ಸಿಬ್ಬಂದಿ ಹಾಗೂ ಮಹಿಳೆಯರು ಉತ್ತಮ ಸಹಕಾರ ನೀಡಿದ್ದು, ಇದರ ಮುಂದಿನ ಹಂತಗಳಲ್ಲಿ ಇನ್ನಷ್ಟು ನಡೆಸುವ ಯೋಜನೆ ಇದೆ ಎಂದು ಆಯೋಜಕರ ಮಾಹಿತಿ.

ವರದಿ : ಶ್ರೀಕಾಂತ್

Advertisement

LEAVE A REPLY

Please enter your comment!
Please enter your name here