ಅಂಚೆ ಇಲಾಖೆಯ ಮಹತ್ವದ ಹೆಜ್ಜೆ; 24 ಗಂಟೆ ಸ್ಪೀಡ್ ಪೋಸ್ಟ್ ಸೇವೆಗೆ ಚಾಲನೆ!

0
22

ನವದೆಹಲಿ, ಮಾ.23: ಸಾರ್ವಜನಿಕ ಕ್ಷೇತ್ರಕ್ಕೆ ಖಾಸಗಿ ವಲಯದ ವೇಗವನ್ನು ತರಲು ಮೋದಿ ಸರ್ಕಾರ ಮುಂದಾಗಿದ್ದು, ಇದರ ಭಾಗವಾಗಿ ಭಾರತ ಅಂಚೆ ಇಲಾಖೆ 24 ಗಂಟೆ ಮತ್ತು 48 ಗಂಟೆಯ ಸಮಯಬದ್ಧ ಸ್ಪೀಡ್ ಪೋಸ್ಟ್ ಸೇವೆಗಳನ್ನು ಆರಂಭಿಸಿದೆ. ಕೇಂದ್ರ ಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮಂಗಳವಾರ ಈ ಹೊಸ ಸೇವೆಗಳಿಗೆ ಚಾಲನೆ ನೀಡಿದರು.

ಈ ಸೇವೆಗಳ ಮೂಲಕ ತುರ್ತು ಮತ್ತು ಸಮಯಸಂವೇದನಾಶೀಲ ಸಾಗಣೆಗಳನ್ನು ಮುಂದಿನ ದಿನವೇ (D+1) ಅಥವಾ ಎರಡನೇ ದಿನ (D+2) ವಿತರಿಸುವ ಭರವಸೆ ನೀಡಲಾಗಿದೆ. ನವದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು ಮತ್ತು ಹೈದರಾಬಾದ್ ಸೇರಿದಂತೆ ಆರು ಮಹಾನಗರಗಳಲ್ಲಿ ಪ್ರಾರಂಭವಾಗಿರುವ ಈ ಸೇವೆಗಳು ವಿಶೇಷ ಪ್ರಕ್ರಿಯೆ ಮತ್ತು ವಿಮಾನ ಸಾರಿಗೆ ಮೂಲಕ ಕಾರ್ಯನಿರ್ವಹಿಸಲಿವೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಸಿಂಧಿಯಾ, “ಇದು ಭಾರತ ಅಂಚೆಯ ಪುನರುಜ್ಜೀವನದ ಸಂಕೇತ. ಇ-ಕಾಮರ್ಸ್ ಮಾರುಕಟ್ಟೆ 2030ರ ವೇಳೆಗೆ ₹30 ಲಕ್ಷ ಕೋಟಿ ತಲುಪಲಿದೆ” ಎಂದು ಹೇಳಿದರು.

ಈ ಹೊಸ ಸೇವೆಗಳಲ್ಲಿ OTP ಆಧಾರಿತ ಸುರಕ್ಷಿತ ವಿತರಣೆ, SMS ಟ್ರ್ಯಾಕಿಂಗ್, BNPL ಸೌಲಭ್ಯ, ಉಚಿತ ಪಿಕಪ್ ಹಾಗೂ ವಿಳಂಬವಾದರೆ ಹಣ ಹಿಂದಿರುಗಿಸುವ ಗ್ಯಾರಂಟಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿವೆ.

ಗ್ರಾಹಕರು ಆಯ್ದ ಪೋಸ್ಟ್‌ಆಫೀಸ್‌ಗಳು, ಬಲ್ಕ್ ಬುಕ್ಕಿಂಗ್ ಸೆಂಟರ್‌ಗಳು ಅಥವಾ ‘Click and Book’ ಮತ್ತು ಮೊಬೈಲ್ ಆಪ್ ಮೂಲಕ ಸೇವೆಗಳನ್ನು ಪಡೆಯಬಹುದು. 24 ಗಂಟೆ ಸೇವೆಗೆ ಸ್ಥಳೀಯವಾಗಿ ₹38 ರಿಂದ ಶುಲ್ಕ ಪ್ರಾರಂಭವಾಗುತ್ತದೆ.

ಈ ಕ್ರಮದ ಮೂಲಕ ಸಾರ್ವಜನಿಕ ಕ್ಷೇತ್ರದಲ್ಲಿಯೂ ಖಾಸಗಿ ವಲಯದ ವೇಗ ಮತ್ತು ಕಾರ್ಯಕ್ಷಮತೆಯನ್ನು ತರಲು ಮೋದಿ ಸರ್ಕಾರ ಮುಂದಾಗಿದೆ.

LEAVE A REPLY

Please enter your comment!
Please enter your name here