ಮಾ.26–29: ಪುಂಜಂಗೋಡು ಶ್ರೀ ಮಾಞ್ಞಳಮ್ಮ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಪುನರ್‌ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

0
5
Advertisement

ಕಾಸರಗೋಡು,ಮಾ.22: ಕಾಸರಗೋಡು ಜಿಲ್ಲೆಯ ಮುಳಿಯಾರು ಗ್ರಾಮದ ಪುಂಜಂಗೋಡು, ಶ್ರೀ ಮಾಞ್ಞಳಮ್ಮ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಪುನರ್‌ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಮಾರ್ಚ್ 26ರಿಂದ 29ರವರೆಗೆ ಭಕ್ತಿಭಾವದೊಂದಿಗೆ ನಡೆಯಲಿದೆ.ಇದರ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲಾಗಿದೆ.

ಮಾರ್ಚ್ 26ರಂದು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. ಮಧ್ಯಾಹ್ನ 12.00ಕ್ಕೆ ಭಕ್ತಿಗಾನ ಸುಧಾ ಕಾರ್ಯಕ್ರಮವನ್ನು ಶ್ರೀ ವನದುರ್ಗ ಕರೋಕೆ ಗಾಯನಮೇಳ ಸಂಘ, ಮಲ್ಲ ತಂಡ ನಡೆಸಲಿದೆ. ಬಳಿಕ ಮಧ್ಯಾಹ್ನ 2.00ಕ್ಕೆ ಪ್ರಿಯಾಂಕ ಹರಿಪ್ರಸಾದ್ ಅವರಿಂದ ಭರತನಾಟ್ಯ ನಡೆಯಲಿದೆ. ಮಧ್ಯಾಹ್ನ 2.15ರಿಂದ 3.00ರವರೆಗೆ ಮುಂಡೋಲು ಕರಿಂಬುವಲಪ್ಪು ಭಜನಾ ಸಂಘದ ಭಜನೆ ಕಾರ್ಯಕ್ರಮ ಇರಲಿದೆ. ಮಧ್ಯಾಹ್ನ 3.00ರಿಂದ ಸಂಜೆ 5.00ರವರೆಗೆ ಸ್ಥಳೀಯ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 6.00ರಿಂದ 7.00ರವರೆಗೆ ಶ್ರೀ ದುರ್ಗಾಂಬ ಭಜನಾ ಸಂಘ, ಮಲ್ಲ ತಂಡದವರಿಂದ ಭಜನೆ ನಡೆಯಲಿದೆ.

ಮಾರ್ಚ್ 27ರಂದು ಮಧ್ಯಾಹ್ನ 1.00ರಿಂದ 3.30ರವರೆಗೆ ‘ಜಾಂಬವತಿ ಕಲ್ಯಾಣʼ ವಿಷಯದ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಯಲಿದೆ. ಬಳಿಕ ಮಧ್ಯಾಹ್ನ 3.30ರಿಂದ ಸಂಜೆ 5.30ರವರೆಗೆ ಧಾರ್ಮಿಕ ಸಭೆ ಏರ್ಪಡಿಸಲಾಗಿದೆ. ಸಂಜೆ 5.30ರಿಂದ 7.00ರವರೆಗೆ ಹರಿದಾಸ್ ರಾಮಚಂದ್ರ ಮಣಿಯಾಣಿ, ಕಾಟುಕುಕ್ಕೆ ಅವರಿಂದ ಹರಿಕಥಾ ಕಾಲಕ್ಷೇಪ ನಡೆಯಲಿದೆ. ಸಂಜೆ 7.00ರಿಂದ 8.00ರವರೆಗೆ ತಿರುವಾದಿರ, ಕೈಕೊಟ್ಟಿಕಳಿ ಹಾಗೂ ಯಕ್ಷಗಾನ ಹಾಡುಗಳ ಕಾರ್ಯಕ್ರಮಗಳು ಜರುಗಲಿವೆ.

ಕಾರ್ಯಕ್ರಮಗಳು ಪರಿಸ್ಥಿತಿಗೆ ಅನುಗುಣವಾಗಿ ನಡೆಯಲಿರುವುದರಿಂದ, ಮಾರ್ಚ್ 26ರಂದು ಕಾರ್ಯಕ್ರಮ ನೀಡುವ ಮಕ್ಕಳು ಹಾಗೂ ಸದಸ್ಯರು ಮಧ್ಯಾಹ್ನ 2 ಗಂಟೆಗೆ ಸರಿಯಾಗಿ ಸಿದ್ಧರಾಗಿರಬೇಕೆಂದು ಸಮಿತಿ ಮನವಿ ಮಾಡಿದೆ. ಯಾವುದೇ ಮಾಹಿತಿಗಾಗಿ ಅಚ್ಯುತ ಅಟ್ಲೂರು (90081 60289) ಮತ್ತು ಧನ್ಯಶ್ರೀ (9986854526) ಅವರನ್ನು ಸಂಪರ್ಕಿಸಬಹುದು.

ಈ ಮಹೋತ್ಸವವು ಭಕ್ತಿ, ಸಂಸ್ಕೃತಿ ಹಾಗೂ ಜನಪದ ಪರಂಪರೆಯ ಸಮ್ಮಿಲನವಾಗಿ ರೂಪುಗೊಳ್ಳಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದೈವಸ್ಥಾನ ಸಮಿತಿ ಕೋರಿದೆ.

Advertisement

LEAVE A REPLY

Please enter your comment!
Please enter your name here