ವೀರಲೋಕ ಪುಸ್ತಕ ಸಂತೆ; ಪುಸ್ತಕ ಮಳಿಗೆ ನೊಂದಣಿಗೆ ಆಹ್ವಾನ

0
42

ಬೆಂಗಳೂರು, ಡಿ.23: ವೀರಲೋಕ ಸಂಸ್ಥೆ ವತಿಯಿಂದ ʼವೀರಲೋಕ ಪುಸ್ತಕ ಸಂತೆʼ ಮುಂದಿನ ತಿಂಗಳು ಬೀದರ್‌ ನಲ್ಲಿ ನಡೆಯಲಿದ್ದು, ಪುಸ್ತಕ ಮಳಿಗೆ ನೊಂದಣಿಗೆ ಕರೆ ನೀಡಲಾಗಿದೆ.

ಇತ್ತೀಚೆಗೆ ವೀರಲೋಕ ಪುಸ್ತಕ ಸಂತೆ ಬೆಂಗಳೂರಿನಲ್ಲಿ ಯಶಸ್ವಿಯಾಗಿ ನಡೆಸಲಾಗಿದ್ದು, ಇದೀಗ ಬೀದರ್‌ ಜಿಲ್ಲೆಯಲ್ಲಿ ಆಯೋಜಿಸಲಾಗಿದೆ. ಮೂರು ದಿನಗಳ ಸಂತೆ ಇದಾಗಿದ್ದು, ಪುಸ್ತಕ ಮಳಿಗೆ ನೊಂದಣಿ ಮಾಡುವ ಪ್ರಕಾಶರಿಗೆ ಊಟೋಪಚಾರ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ವೀರಲೋಕ ಸಂಸ್ಥೆಯ ಮಾಲೀಕರಾದ ವೀರಕಪುತ್ರ ಶ್ರೀನಿವಾಸ್‌ ಅವರು ಹೇಳಿದ್ದಾರೆ.

ಬೀದರ್‌ನಲ್ಲಿ ಜ. 24ರಿಂದ ಜ. 26ರ ವರೆಗೆ ಬೆಳಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆ ತನಕ ವೀರಲೋಕ ಪುಸ್ತಕ ಸಂತೆ ನಡೆಯಲಿದೆ. ಬೆಂಗಳೂರಿನಲ್ಲಿ ನಡೆದ ಪುಸ್ತಕ ಸಂತೆಗೆ ಎರಡುವರೆ ಲಕ್ಷಕ್ಕೂ ಹೆಚ್ಚು ಓದುಗರು ಭೇಟಿಕೊಟ್ಟಿದ್ದರು.

LEAVE A REPLY

Please enter your comment!
Please enter your name here