Advertisement 

ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಶುಕ್ರವಾರ ಬಳ್ಳಾರಿ ನಗರದ ಬಂಡಿಮೋಟ್‌ನಲ್ಲಿರುವ ದರ್ಗಾಕ್ಕೆ ಭೇಟಿ ನೀಡಿ, ಉರುಸು ಹಬ್ಬದ ಪ್ರಯುಕ್ತ ಮುಸ್ಲಿಂ ಸಹೋದರರಿಗೆ ಶುಭ ಹಾರೈಸಿದರು.
ಸೂಫಿ ಸಂತರ ಸ್ಮರಣಾರ್ಥ ಆಚರಿಸಲಾಗುವ ಉರುಸು ಹಬ್ಬವು ಹಿಂದೂ-ಮುಸ್ಲಿಂ ಸಾಮರಸ್ಯ, ಸಹೋದರತ್ವ ಹಾಗೂ ಒಗ್ಗಟ್ಟುಗೆ ಪ್ರತೀಕವಾಗಿದೆ. ಈ ಸಂದರ್ಭದಲ್ಲಿ ಶ್ರೀರಾಮುಲು ಅವರು, “ಈ ಹಬ್ಬವು ಸಮಾಜದಲ್ಲಿ ಭರವಸೆ, ದಯೆ ಮತ್ತು ಸಾಮರಸ್ಯವನ್ನು ವೃದ್ಧಿಸಲಿ, ಮುಸ್ಲಿಂ ಸಮುದಾಯದ ಎಲ್ಲಾ ಪ್ರಯತ್ನಗಳಲ್ಲಿ ಸಂತೋಷ ಮತ್ತು ಯಶಸ್ಸು ದೊರಕಲಿ” ಎಂದು ಹಾರೈಸಿದರು.

ಮತ್ತಷ್ಟು ಓದಿ: ಬಳ್ಳಾರಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ 2025 ಆಚರಣೆ
ಈ ಉರುಸು ಹಬ್ಬವು ಬಳ್ಳಾರಿಯ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಒಗ್ಗಟ್ಟಿನ ಮನೋಭಾವವನ್ನು ಮತ್ತೊಮ್ಮೆ ತೋರಿಸಿಕೊಟ್ಟಿತು.
Advertisement 





