ಬಳ್ಳಾರಿಯಲ್ಲಿ ಹಾಲುಮತ ಪರಿವರ್ತನೆ ಯಾತ್ರೆ ಸ್ವಾತಂತ್ರ್ಯೋತ್ಸವ ಹಾಗೂ ಸಂಗೊಳ್ಳಿ ರಾಯಣ್ಣ ಜಯಂತಿ ವಿಶೇಷ

0
84
ಸಂಗೊಳ್ಳಿ ರಾಯಣ್ಣ
Advertisement

ಬಳ್ಳಾರಿ, ಆಗಸ್ಟ್ 15, 2025
ಸ್ವಾತಂತ್ರ್ಯೋತ್ಸವ ದಿನದಂದು ಬಳ್ಳಾರಿ ಜಿಲ್ಲೆಯಲ್ಲಿ ವಿಶೇಷವಾದ ಕಾರ್ಯಕ್ರಮಗಳು ನಡೆಯುತ್ತಿವೆ. ಈ ಬಾರಿ ದಿನ ಇನ್ನಷ್ಟು ಮಹತ್ವ ಪಡೆದಿದೆ, ಏಕೆಂದರೆ ಇದೇ ದಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಜಯಂತಿಯೂ ಕೂಡವಾಗಿದೆ.

ಬಳ್ಳಾರಿ ಜಿಲ್ಲೆಯ ಕ್ರಾಂತಿವೀರ ಸಂಗೊಳ್ಳಿ ರಾಯಣ ರಕ್ಷಣಾ ಸಮಿತಿಯ ಅಧ್ಯಕ್ಷರಾದ ಬಟ್ಟಿರ ಸ್ವಾಮಿ ಹಾಗೂ ಅವರೊಂದಿಗೆ ಹಲವಾರು ಪದಾಧಿಕಾರಿಗಳು ಸೇರಿ, ಒಂದು “ಹಾಲುಮತ ಪರಿವರ್ತನೆ ಯಾತ್ರೆ” ಆಯೋಜಿಸಿದ್ದಾರೆ.

ಯಾತ್ರೆಯ ಪ್ರಾರಂಭ ಮತ್ತು ಮಾರ್ಗ

ಈ ವಿಶೇಷ ಯಾತ್ರೆ ಬಳ್ಳಾರಿ ನಗರದ ಹೃದಯಭಾಗದಲ್ಲಿರುವ ಆದಿದೇವತೆ ಶ್ರೀ ಕನಕದುರ್ಗ ತಾಯಿ ದೇವಾಲಯದ ಆವರಣದಿಂದ ಆರಂಭವಾಗಲಿದೆ. ರಾಯಲ್ ಸರ್ಕಲ್ ವೃತ್ತ ಮಾರ್ಗವಾಗಿ, ಗಾಂಧಿ ಭವನ ವರೆಗೆ ಸಾಗಲಿದೆ. ಗಾಂಧಿ ಭವನದಲ್ಲಿ ಬೃಹತ್ ಸಮಾವೇಶ ನಡೆಯಲಿದೆ.

ಸಮಾವೇಶದಲ್ಲಿ ಪಾಲ್ಗೊಳ್ಳುವ ಸಂಘಟನೆಗಳು

ಈ ಸಮಾವೇಶದಲ್ಲಿ ಬಳ್ಳಾರಿ ಜಿಲ್ಲಾ ಕುರುಬರ ಸಂಘ, ಆಲುಮತ ಮಹಾಸಭ, ಅನೇಕ ಯುವ ಸಂಘಟನೆಗಳು ಮತ್ತು ಬಳ್ಳಾರಿ ನಗರ ಹಾಗೂ ಗ್ರಾಮಾಂತರದಿಂದ ಬಂದಿರುವ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳು ಭಾಗವಹಿಸಲಿದ್ದಾರೆ.

ಮತ್ತಷ್ಟು ಓದಿ: ದರ್ಶನ್ ಜಾಮೀನು ರದ್ದು: ಸುಪ್ರೀಂಕೋರ್ಟ್ ತೀರ್ಪು ಮತ್ತು ವೃತ್ತಿ ಜೀವನದ ಮೇಲೆ ಪರಿಣಾಮ

ಸಂಗೊಳ್ಳಿ ರಾಯಣ್ಣ – ಹೋರಾಟಗಾರನ ಜೀವನದ ವಿಶೇಷತೆ

ಸಂಗೊಳ್ಳಿ ರಾಯಣ್ಣ ಅವರು ಆಗಸ್ಟ್ 15ರಂದು ಹುಟ್ಟಿ, ಜನವರಿ 26ರಂದು ಶಹೀದರಾದರು. ಇವರ ಜೀವನವೇ ಸ್ವಾತಂತ್ರ್ಯ ಹೋರಾಟದ ಪ್ರೇರಣೆ. ಹೀಗಾಗಿ, ಇದೇ ದಿನ ಜಯಂತಿಯನ್ನು ಆಚರಿಸುವುದರಿಂದ ದೇಶಭಕ್ತಿ ಮತ್ತು ಹೋರಾಟದ ಮನೋಭಾವವನ್ನು ಮತ್ತಷ್ಟು ಉಜ್ಜೀವನಗೊಳಿಸುವ ಉದ್ದೇಶವಿದೆ.

ಅಭಿಮಾನಿಗಳಿಗೆ ಕರೆ

ಅಧ್ಯಕ್ಷ ಬಟ್ಟಿರ ಸ್ವಾಮಿ ಅವರು ಬಳ್ಳಾರಿ ಜಿಲ್ಲೆಯ ಜನತೆಗೆ, ವಿಶೇಷವಾಗಿ ಯುವಕರಿಗೆ, ಈ ಹಾಲುಮತ ಪರಿವರ್ತನೆ ಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದ್ದಾರೆ.

“ಜೈ ಹಿಂದ್ ಜೈ ಸಂಗೊಳ್ಳಿ” ಎಂಬ ಘೋಷಣೆಯೊಂದಿಗೆ, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ” ಎಂದು ಅವರು ಹೇಳಿದ್ದಾರೆ.

Advertisement

LEAVE A REPLY

Please enter your comment!
Please enter your name here