ಉತ್ತರ ಭಾರತದಲ್ಲಿ ದಟ್ಟವಾಗಿ ಆವರಿಸಿದ ಮಂಜು; ದೆಹಲಿಯಲ್ಲಿ ರೆಡ್ ಅಲರ್ಟ್ ಘೋಷಣೆ!

0
24
Advertisement

ನವದೆಹಲಿ, ಡಿ.19: ಚಳಿಗಾಲಕ್ಕೆ ತತ್ತರಿಸಿರುವ ಉತ್ತರ ಭಾರತದ ಬಹುತೇಕ ಕಡೆ ದಟ್ಟವಾದ ಮಂಜು ಆವರಿಸಿದೆ. ಭಾರತೀಯ ಹವಾಮಾನ ಇಲಾಖೆ ದೆಹಲಿಯಲ್ಲಿ ರೆಡ್ ಅಲರ್ಟ್ ಘೋಷಿಸಿದ್ದು, ರಸ್ತೆ, ರೈಲು, ವಾಯು ಸಂಚಾರಕ್ಕೆ ಅಡಚಣೆಯಾಗುವ ಬಗ್ಗೆ ಎಚ್ಚರಿಕೆ‌ ನೀಡಿದೆ.

ಪಂಜಾಬ್, ಹರಿಯಾಣ, ದೆಹಲಿ, ಉತ್ತರ ಪ್ರದೇಶ, ಈಶಾನ್ಯ ಮಧ್ಯಪ್ರದೇಶ ಮತ್ತು ಬಿಹಾರದಲ್ಲಿ ವ್ಯಾಪಕವಾದ ಮಂಜು ಆವರಿಸಿದೆ.

ಉತ್ತರ ಭಾರಯತದ ಹೆಚ್ಚಿನ ಕಡೆಗಳಲ್ಲಿ ಶೂನ್ಯ ಗೋಚರತೆ ಕಂಡುಬಂದಿದ್ದು, ಅತ್ಯಂತ ಕಳಪೆ ಗೋಚರತೆಯು ವಿಮಾನ ನಿಲ್ದಾಣ ಕಾರ್ಯಾಚರಣೆಗಳ ಮೇಲೆ ತೀವ್ರ ಪರಿಣಾಮ ಬೀರಬಹುದು ಮತ್ತು ಹೆದ್ದಾರಿಗಳು ಹಾಗೂ ರೈಲು ಮಾರ್ಗಗಳಲ್ಲಿ ವಿಳಂಬಕ್ಕೆ ಕಾರಣವಾಗಬಹುದು ಎಂದು ಐ.ಎಂ.ಡಿ (ಭಾರತೀಯ ಹವಾಮಾನ ಇಲಾಖೆ) ಎಚ್ಚರಿಸಿದೆ.

Advertisement

LEAVE A REPLY

Please enter your comment!
Please enter your name here