ರಾಜ್ಯ ಮಟ್ಟದ ಸಮಾವೇಶ ಗಣಿ ಬಾಧಿತ ಪರಿಸರ ಮತ್ತು ಜನ ಬದುಕಿನ ಪುನಶ್ವೇತನಕ್ಕೆ ಒತ್ತಾಯ

0
78
Gandhi Bhavan state conference
Advertisement

ಗಣಿ ಬಾಧಿತ ಪರಿಸರ ಮತ್ತು ಜನ ಬದುಕಿನ ಪುನಶ್ವೇತನ ಹೋರಾಟ ಸಮಿತಿ ವತಿಯಿಂದ ರಾಜ್ಯ ಮಟ್ಟದ ಸಮಾವೇಶವು ಗಾಂಧಿ ಭವನದಲ್ಲಿ ನಡೆಯಿತು. ಚಾಗನೂರು-ಸಿರವಾರ ಭೂ ಹೋರಾಟದ ನಾಯಕ ಖಾಜಾ ಬಾನಿ ಸಮಾವೇಶವನ್ನು ಉದ್ಘಾಟಿಸಿದರು.

ಸಮಾಜ ಪರಿವರ್ತನಾ ಮುಖಂಡ ಆರ್. ಹಿರೇಮಠ ಮಾತನಾಡುತ್ತಾ, ಗಣಿಬಾಧಿತ ಪ್ರದೇಶಗಳಲ್ಲಿ ಪರಿಸರ ಪುನಶ್ವೇತನಕ್ಕೆ ಕೆ.ಎಂ.ಇ.ಆರ್.ಸಿ.ಯಲ್ಲಿ ಮೀಸಲಾದ 30 ಸಾವಿರ ಕೋಟಿ ಹಣವನ್ನು ಪರಿಣಾಮಕಾರಿಯಾಗಿ ಬಳಸಬೇಕು ಎಂದು ಒತ್ತಾಯಿಸಿದರು.

ಮತ್ತಷ್ಟು ಓದಿ: ಬಳ್ಳಾರಿಯ ಬಂಡಿಮೋಟ್ ದರ್ಗಾ ಭೇಟಿ ಬಿ.ಶ್ರೀರಾಮುಲು ಅವರಿಂದ ಉರುಸು ಹಬ್ಬದ ಶುಭಾಶಯ

ಅವರು, ಖನಿಜ ಮತ್ತು ಅರಣ್ಯ ಸಂಪನ್ಮೂಲಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸುವುದು ಅತ್ಯಂತ ಅಗತ್ಯ ಎಂದು ತಿಳಿಸಿದರು. ಸಮಾವೇಶದಲ್ಲಿ ಹಲವಾರು ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಯಿತು.

Advertisement

LEAVE A REPLY

Please enter your comment!
Please enter your name here