ಖ್ಯಾತ ಗಾಯಕಿ ಎಸ್. ಜಾನಕಿ ಪುತ್ರ ಮುರಳಿ ಕೃಷ್ಣ ವಿಧಿವಶ!

0
18
Advertisement

ಹೈದರಾಬಾದ್​​,ಜ.22: ದಂತಕಥೆಯಂತಿರುವ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರ ಏಕೈಕ ಪುತ್ರ ಮುರಳಿ ಕೃಷ್ಣ ಅವರು ಗುರುವಾರ ಜನವರಿ 22ರ ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು.

ಎಸ್ ಜಾನಕಿ ಅವರು ಖ್ಯಾತ ಗಾಯಕಿ ಆಗಿದ್ದರೆ ಮುರಳಿ ಕೃಷ್ಣ ಅವರು ಅದ್ಭುತ ಭರತನಾಟ್ಯ ಕಲಾವಿದರಾಗಿದ್ದರು.ಭರತನಾಟ್ಯ ಪ್ರವೀಣರಾಗಿದ್ದ ಅವರು ಹಲವು ಸ್ಟೇಜ್ ಶೋಗಳು ಮೂಲಕ ತನ್ನದೇ ಛಾಪು ಮೂಡಿಸಿದ್ದರು. ಕೆಲ ಸಿನಿಮಾಗಳಿಗೆ ಭರತನಾಟ್ಯ ಕೊರಿಯೋಗ್ರಫಿಯನ್ನೂ ಸಹ ಅವರು ಮಾಡಿದ್ದರು.

ಆಂಧ್ರಪ್ರದೇಶದ ಗುಂಟೂರಿನಲ್ಲಿ ಜನಿಸಿದ ಎಸ್. ಜಾನಕಿ ಅವರು 1950ರ ದಶಕದ ಆರಂಭದಲ್ಲೇ ಹಿನ್ನೆಲೆ ಗಾಯನ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ನಂತರ ಚೆನ್ನೈಯಲ್ಲಿ ನೆಲೆಸಿದ ಅವರು ತಮ್ಮ ವೃತ್ತಿಜೀವನದ ಅತ್ಯಂತ ಅಮೂಲ್ಯ ದಿನಗಳನ್ನು ಕಂಡರು. ಜಾನಕಿ ಅವರು ರಾಮ ಪ್ರಸಾದ್ ಅವರನ್ನು ವಿವಾಹವಾಗಿದ್ದು, ಈ ದಂಪತಿಗೆ ಮುರಳಿ ಕೃಷ್ಣಏಕೈಕ ಪುತ್ರನಾಗಿದ್ದರು. ಸಂಗೀತ ಹಾಗೂ ಕಲೆಯ ವಾತಾವರಣದಲ್ಲಿ ಬೆಳೆದ ಮುರಳಿ ಕೃಷ್ಣ ಅವರಿಗೆ ಬಾಲ್ಯದಿಂದಲೇ ಸೃಜನಶೀಲ ಆಸಕ್ತಿ ಬೆಳೆದಿತ್ತು. ಜೊತೆಗೆ ಭರತನಾಟ್ಯದಲ್ಲಿಯೂ ತರಬೇತಿ ಪಡೆದಿದ್ದರು. ಚೆನ್ನೈ ಮೂಲದ ನೃತ್ಯಗಾರ್ತಿ ಉಮಾ ಅವರನ್ನು ವಿವಾಹವಾದ ಮುರಳಿ ಕೃಷ್ಣ ಅವರಿಗೆ ಇಬ್ಬರು ಪುತ್ರಿಯರು. ಬಳಿಕ ದಾಂಪತ್ಯ ವಿಚ್ಛೇದನವಾದರೂ, ಪುತ್ರಿಯರ ಭವಿಷ್ಯ ಸುಸ್ಥಿರವಾಗುವಂತೆ ನೋಡಿಕೊಂಡು, ಶಾಂತ ಜೀವನವನ್ನು ಆಯ್ದುಕೊಂಡಿದ್ದರು. ಇತ್ತೀಚಿನ ವರ್ಷಗಳಲ್ಲಿ ತಾಯಿಯೊಂದಿಗೆ ವಾಸವಾಗಿದ್ದರು.

Advertisement

LEAVE A REPLY

Please enter your comment!
Please enter your name here