ನೈಜ ಪ್ರೇಮಕಥೆಯ ‘ಲವ್ ಯೂ ಮುದ್ದುʼ ಓಟಿಟಿಗೆ ಎಂಟ್ರಿ; ಅಮೇಜಾನ್ ಪ್ರೈಮ್ ನಲ್ಲಿ ಸ್ಟ್ರೀಮಿಂಗ್!

0
62

ಬೆಂಗಳೂರು, ಡಿ.27: ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಂಡ, ನೈಜ ಪ್ರೇಮಕಥೆ ಆಧಾರಿತ  ‘ಲವ್ ಯೂ ಮುದ್ದು’ಸಿನಿಮಾ ಇದೀಗ ಓಟಿಟಿ ಗೆ ಕಾಲಿಟ್ಟಿದೆ. ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಖ್ಯಾತಿಯ ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರ, ಅಮೇಜಾನ್ ಪ್ರೈಮ್ ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದ್ದು, ಹೊಸ ಪ್ರೇಕ್ಷಕರನ್ನು ಸೆಳೆಯಲು ಸಜ್ಜಾಗಿದೆ.

ಮಹಾರಾಷ್ಟ್ರದ ನೈಜ ಪ್ರೇಮಕಥೆಯನ್ನು ಆಧರಿಸಿದ ಈ ಸಿನಿಮಾ, ಭಾವುಕತೆಯ ಚೌಕಟ್ಟಲ್ಲಿ ಪ್ರೀತಿ, ತ್ಯಾಗ ಹಾಗೂ ಬದುಕಿನ ಕಠಿಣ ವಾಸ್ತವಗಳನ್ನು ಮೀರಿ ಸಾಗುತ್ತದೆ. ಸರಳ ಕಥನ, ಹೃದಯಸ್ಪರ್ಶಿ ನಿರೂಪಣೆ ಈ ಚಿತ್ರದ ಪ್ಲಸ್‌ ಪಾಯಿಂಟ್!

ನಾಯಕ ಸಿದ್ದು ಮತ್ತು ನವನಟಿ ರೇಷ್ಮಾ ಅವರ ಸಹಜ ಅಭಿನಯ ಪ್ರೇಕ್ಷಕರ ಮನ ಮುಟ್ಟಿದ್ದು, ಇವರ ಜೋಡಿ ಚಿತ್ರಕ್ಕೆ ಹೊಸ ಮೆರಗು ತಂದಿದೆ. ಜೊತೆಗೆ ರಾಜೇಶ್ ನಟರಂಗ, ಗಿರೀಶ್ ಶಿವಣ್ಣ, ತಬಲಾ ನಾಣಿ, ಶ್ರೀವತ್ಸ, ಅಪೂರ್ವ ಹಾಗೂ ಉಷಾ ಸೇರಿದಂತೆ ಅನುಭವೀ ಕಲಾವಿದರ ತಾರಾಬಳಗವೇ ಈ ಚಿತ್ರಕ್ಕಿದೆ.

ಕಾರ್ಕಳ, ಕುಮಟಾ ಹಾಗೂ ಬೆಂಗಳೂರು ಸುತ್ತಮುತ್ತಲಿನ ನೈಸರ್ಗಿಕ ತಾಣಗಳಲ್ಲಿ ನಡೆದ ಚಿತ್ರೀಕರಣ ನಡೆದಿದ್ದು, ಕಿಶನ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಕಿಶನ್ ಟಿ.ಎನ್ ಅವರು ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ಲಕ್ಷ್ಮಿಕಾಂತ್ ಟಿ.ಎಸ್ ಕಾರ್ಯಕಾರಿ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ.

ಕೃಷ್ಣ ದೀಪಕ್ ಅವರ ಛಾಯಾಗ್ರಹಣ, ಅನಿರುದ್ಧ್ ಶಾಸ್ತ್ರಿ ಅವರ ಸಂಗೀತ ಸಂಯೋಜನೆ ಹಾಗೂ ಸಿ.ಎಸ್. ದೀಪು ಅವರ ಸಂಕಲನ ದಲ್ಲಿ ಮೂಡಿಬಂದಿರುವ ʼಲವ್‌ ಯೂ ಮುದ್ದುʼ  ಓಟಿಟಿಯಲ್ಲಿ ಮೋಡಿ ಮಾಡಲು ಸಿದ್ದವಾಗಿದೆ.

LEAVE A REPLY

Please enter your comment!
Please enter your name here