ಸಿರುಗುಪ್ಪ ಕೃಷಿ ಇಲಾಖೆ ಕಚೇರಿಯಲ್ಲಿ ಸೋರುವ ಕೊಠಡಿಗಳು ಸಿಬ್ಬಂದಿ ಆತಂಕ

0
98
Siruguppa agriculture office
Advertisement

ಸಿರುಗುಪ್ಪ ನಗರದಲ್ಲಿರುವ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸತತ ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದೆ. ಕಚೇರಿಯ ಒಟ್ಟು 8 ಕೊಠಡಿಗಳ ಪೈಕಿ ಮೂರು ಕೊಠಡಿಗಳು ಹಾಗೂ ಒಂದು ಸಭಾಂಗಣದ ಕೊಠಡಿ ಚಾವಣಿಯಿಂದ ನೀರು ಸೋರುತ್ತಿರುವುದರಿಂದ, ಇಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಆತಂಕದಲ್ಲಿ ಕೆಲಸ ಮಾಡುತ್ತಿದ್ದಾರೆ.

ಮಹತ್ವದ ಕಂಪ್ಯೂಟರ್ ಸೆಕ್ಷನ್ ಇರುವ ಕೊಠಡಿಗಳಲ್ಲೂ ಸೋರು ಸಂಭವಿಸಿದ್ದು, ಸಿಬ್ಬಂದಿ ಸುರಕ್ಷಿತ ಸ್ಥಳದಲ್ಲಿ ಕಂಪ್ಯೂಟರ್‌ಗಳನ್ನು ಇಟ್ಟುಕೊಂಡು ಕೆಲಸ ನಿರ್ವಹಿಸುವಂತಾಗಿದೆ.

ಈ ಪರಿಸ್ಥಿತಿಯಿಂದ ಬೇಸತ್ತ ರೈತರು ಕರೂರು ಗ್ರಾಮದ ಕೃಷ್ಣಾರೆಡ್ಡಿ ಮತ್ತು ತೆಕ್ಕಲಕೋಟೆ ಗ್ರಾಮದ ಕಾಡು ಸಿದ್ದಪ್ಪ, ತಕ್ಷಣವೇ ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಮತ್ತಷ್ಟು ಓದಿ: ರಾಜ್ಯ ಮಟ್ಟದ ಸಮಾವೇಶ ಗಣಿ ಬಾಧಿತ ಪರಿಸರ ಮತ್ತು ಜನ ಬದುಕಿನ ಪುನಶ್ವೇತನಕ್ಕೆ ಒತ್ತಾಯ

ಈ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳದಿದ್ದರೆ, ಕೃಷಿ ಇಲಾಖೆಯ ದಿನನಿತ್ಯದ ಕಾರ್ಯಗಳು ತೀವ್ರ ಅಡಚಣೆಗೆ ಒಳಗಾಗುವ ಸಾಧ್ಯತೆ ಇದೆ.

Advertisement

LEAVE A REPLY

Please enter your comment!
Please enter your name here