ಜನವರಿ–ಮಾರ್ಚ್‌ನಲ್ಲಿ ‘ಸೀಸನಲ್ ಫ್ಲೂ’ ಉಲ್ಬಣ ಸಾಧ್ಯತೆ: ಆರೋಗ್ಯ ಇಲಾಖೆಯಿಂದ ಎಚ್ಚರಿಕೆ!

0
46

ಬೆಂಗಳೂರು, ಡಿ.21: ಮುಂದಿನ ಚಳಿಗಾಲದ ಅವಧಿಯಲ್ಲಿ ಋತುಮಾನ ಫ್ಲೂ (Seasonal Influenza) ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚನೆ ನೀಡಿದೆ.

ಜನವರಿ–ಮಾರ್ಚ್ 2026ರ ಅವಧಿಯಲ್ಲಿ ಫ್ಲೂ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇರುವುದಾಗಿ ತಿಳಿಸಿರುವ ಇಲಾಖೆ, ಫ್ಲೂ ಲಕ್ಷಣಗಳು ಕಂಡುಬಂದರೆ ತಕ್ಷಣ ಪರೀಕ್ಷೆ ಹಾಗೂ ಚಿಕಿತ್ಸೆ ನೀಡುವಂತೆ ಸೂಚಿಸಿದೆ. ವಿಶೇಷವಾಗಿ ಮಕ್ಕಳು, ವೃದ್ಧರು, ಗರ್ಭಿಣಿಯರು ಹಾಗೂ ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಹೆಚ್ಚಿನ ಅಪಾಯದಲ್ಲಿರುವುದರಿಂದ ಅವರಿಗೆ ಹೆಚ್ಚಿನ ಗಮನ ನೀಡಬೇಕೆಂದು ತಿಳಿಸಲಾಗಿದೆ.

ಇನ್‌ಫ್ಲುಯೆನ್ಜಾ ಹೋಲುವ ಕಾಯಿಲೆ (ILI) ಪ್ರಕರಣಗಳ ಕನಿಷ್ಠ 5% ಮತ್ತು ತೀವ್ರ ಉಸಿರಾಟ ಸೋಂಕು (SARI) ಪ್ರಕರಣಗಳ ಶೇ.100ರಷ್ಟು ಮಾದರಿಗಳನ್ನು ಪ್ರಯೋಗಾಲಯಗಳಿಗೆ ಕಳುಹಿಸಿ ಪರೀಕ್ಷೆ ನಡೆಸುವಂತೆ ಆದೇಶಿಸಲಾಗಿದೆ. ಜೊತೆಗೆ ಪಿಪಿಇ ಕಿಟ್‌ಗಳು, ಎನ್ 95 ಮಾಸ್ಕ್‌ಗಳು ಹಾಗೂ ಅಗತ್ಯ ಔಷಧಗಳ ಸಮರ್ಪಕ ಸಂಗ್ರಹ ಇಟ್ಟುಕೊಳ್ಳುವಂತೆ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ.

ಮಕ್ಕಳು, ಹಿರಿಯರು, ಗರ್ಭಿಣಿಯರು, ಕೋಮಾರ್ಬಿಟೀಸ್ ಪೇಶೆಂಟ್ ಗಳಿಗೆ ಹೆಚ್ಚಿನ ಅಪಾಯ ಉಂಟಾಗುವ ಸಾಧ್ಯತೆಯಿದ್ದು, ಜ್ವರ, ಕೆಮ್ಮು, ಕೆಂಪು ಗುಳ್ಳೆ, ಹಸಿವು ಆಗದಿರುವುದು, ಮೈಕೈ ನೋವು, ಶೀತ, ಒಣ ಕೆಮ್ಮು ಇದರ ಪ್ರಮುಖ ಗುಣ ಲಕ್ಷಣಗಳಾಗಿವೆ.

ಸೀಸನಲ್ ಫ್ಲೂ ಸಾಮಾನ್ಯವಾಗಿ ಒಂದು ವಾರಗಳು ಕಾಲ ಇದ್ದು, ಕೆಲವೊಂದು ಸಲ 3 ವಾರಗಳ ಕಾಲ ಇರಲಿದೆ. ಹೀಗಾಗಿ ಎಲ್ಲಾ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಕ್ರಮ ವಹಿಸಲು ಸೂಚನೆ ನೀಡಲಾಗಿದೆ.

ಸಮಯಕ್ಕೆ ಸರಿಯಾದ ಮುನ್ನೆಚ್ಚರಿಕೆ ಹಾಗೂ ಚಿಕಿತ್ಸೆ ಮೂಲಕ ಫ್ಲೂ ಹರಡುವಿಕೆಯನ್ನು ತಡೆಯಬಹುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

LEAVE A REPLY

Please enter your comment!
Please enter your name here