ಬಳ್ಳಾರಿಯ ಬಂಡಿಮೋಟ್ ದರ್ಗಾ ಭೇಟಿ ಬಿ.ಶ್ರೀರಾಮುಲು ಅವರಿಂದ ಉರುಸು ಹಬ್ಬದ ಶುಭಾಶಯ

0
103
Sriramulu wishes Urs festival
Advertisement

ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಶುಕ್ರವಾರ ಬಳ್ಳಾರಿ ನಗರದ ಬಂಡಿಮೋಟ್‌ನಲ್ಲಿರುವ ದರ್ಗಾಕ್ಕೆ ಭೇಟಿ ನೀಡಿ, ಉರುಸು ಹಬ್ಬದ ಪ್ರಯುಕ್ತ ಮುಸ್ಲಿಂ ಸಹೋದರರಿಗೆ ಶುಭ ಹಾರೈಸಿದರು.

ಸೂಫಿ ಸಂತರ ಸ್ಮರಣಾರ್ಥ ಆಚರಿಸಲಾಗುವ ಉರುಸು ಹಬ್ಬವು ಹಿಂದೂ-ಮುಸ್ಲಿಂ ಸಾಮರಸ್ಯ, ಸಹೋದರತ್ವ ಹಾಗೂ ಒಗ್ಗಟ್ಟುಗೆ ಪ್ರತೀಕವಾಗಿದೆ. ಈ ಸಂದರ್ಭದಲ್ಲಿ ಶ್ರೀರಾಮುಲು ಅವರು, “ಈ ಹಬ್ಬವು ಸಮಾಜದಲ್ಲಿ ಭರವಸೆ, ದಯೆ ಮತ್ತು ಸಾಮರಸ್ಯವನ್ನು ವೃದ್ಧಿಸಲಿ, ಮುಸ್ಲಿಂ ಸಮುದಾಯದ ಎಲ್ಲಾ ಪ್ರಯತ್ನಗಳಲ್ಲಿ ಸಂತೋಷ ಮತ್ತು ಯಶಸ್ಸು ದೊರಕಲಿ” ಎಂದು ಹಾರೈಸಿದರು.

ಮತ್ತಷ್ಟು ಓದಿ: ಬಳ್ಳಾರಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ 2025 ಆಚರಣೆ

ಈ ಉರುಸು ಹಬ್ಬವು ಬಳ್ಳಾರಿಯ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಒಗ್ಗಟ್ಟಿನ ಮನೋಭಾವವನ್ನು ಮತ್ತೊಮ್ಮೆ ತೋರಿಸಿಕೊಟ್ಟಿತು.

Advertisement

LEAVE A REPLY

Please enter your comment!
Please enter your name here