Welcome to BP News Karnataka   Click to listen highlighted text! Welcome to BP News Karnataka
Friday, February 21, 2025
HomeSandurರಾಜ್ಯ ಮಟ್ಟದ ವಾಲ್ಮೀಕಿ ಸೇವಾರತ್ನ ಪ್ರಶಸ್ತಿಗೆ ರವಿಕುಮಾರ್ ಕಡ್ಲಬಾಳ್ ಆಯ್ಕೆ

ರಾಜ್ಯ ಮಟ್ಟದ ವಾಲ್ಮೀಕಿ ಸೇವಾರತ್ನ ಪ್ರಶಸ್ತಿಗೆ ರವಿಕುಮಾರ್ ಕಡ್ಲಬಾಳ್ ಆಯ್ಕೆ

ದಿನಾಂಕ : 09-11-2024 ಶನಿವಾರ ರಂದು ಬೆಳಿಗ್ಗೆ 10-30 ಕ್ಕೆ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ, ದೊಡ್ಡಬಳ್ಳಾಪುರ ಹಾಗೂ ಕರ್ನಾಟಕ ವಾಲ್ಮೀಕಿ ನೌಕರರ ಒಕ್ಕೂಟ (ರಿ). ರಾಜ್ಯ ಸಮಿತಿ ವತಿಯಿಂದ ರಾಜ್ಯಮಟ್ಟದ ವಾಲ್ಮೀಕಿ ಸೇವಾ ರತ್ನ ಪ್ರಶಸ್ತಿ – 2024. ಸಮಾರಂಭವನ್ನು ಬೆಂಗಳೂರಿನ ಮೆಜಸ್ಟಿಕ್ ಹತ್ತಿರವಿರುವ ಗಾಂಧಿಭವನದಲ್ಲಿರುವ ಬಾಪು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದು

ಕರ್ನಾಟಕ ವಾಲ್ಮೀಕಿ ನೌಕರರ ಒಕ್ಕೂಟ (ರಿ)ರಾಜ್ಯ ಸಮಿತಿಯಿಂದ ನೀಡಲಾಗುವ ಪ್ರಶಸ್ತಿಗೆ ಸಂಡೂರು ತಾಲೂಕು ಪರಿಶಿಷ್ಟ ವರ್ಗಗಳ ಇಲಾಖೆಯ ಕಲ್ಯಾಣಾಧಿಕಾರಿಗಳಾದ ರವಿಕುಮಾರ್ ಕೆ ಇವರು ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಗೆ ರಾಜ್ಯ ಮಟ್ಟದ ವಾಲ್ಮೀಕಿ ಸೇವಾರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ

ಈ ಸಮಾರಂಭದಲ್ಲಿ ನಾಗಶಕ್ತಿ ಶ್ರೀಶ್ರೀಶ್ರೀ ವಾಲ್ಮೀಕಿ ಬ್ರಹ್ಮನಾಂದ ಗುರೂಜಿ, ಶ್ರೀ ಮಹರ್ಷಿ ವಾಲ್ಮೀಕಿ ದೊಡ್ಡಬಳ್ಳಾಪುರ ಇವರ ದಿವ್ಯ ಸಾನಿಧ್ಯದಲ್ಲಿ ಪ್ರಶಸ್ತಿಯನ್ನು ನೀಡಲಾಗುವುದೆಂದು “ಮಹರ್ಷಿ ಗುರುಕುಲ ಪೀಠ” ಬೆಂಗಳೂರು ಗ್ರಾಮಾಂತರ ಜಿಲ್ಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ರಾಜ್ಯಮಟ್ಟದ ವಾಲ್ಮೀಕಿ ಸೇವಾರತ್ನ ಪ್ರಶಸ್ತಿಗೆ ಆಯ್ಕೆಯಾಗಿರುವ ರವಿಕುಮಾರ್ ಅವರಿಗೆ ವಾಲ್ಮೀಕಿ ನೌಕರರು, ಸಮಾಜದ ಬಾಂಧವರು, ಸ್ನೇಹಿತರು, ಹಿತೈಷಿಗಳು,ಅಧಿಕಾರಿ ವರ್ಗದವರು ಶುಭವನ್ನು ಕೋರಿ ಸಂತಸವನ್ನು ವ್ಯಕ್ತಪಡಿಸಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news
Click to listen highlighted text!