ತುರ್ತು ಸಂದರ್ಭಕ್ಕೆ ಸರಳ ಮಾರ್ಗದರ್ಶನ
ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ತುರ್ತು ಪರಿಸ್ಥಿತಿಯಲ್ಲಿ ತಕ್ಷಣ ಕೈಗೊಳ್ಳುವ ಪ್ರಾಥಮಿಕ ಕ್ರಮಗಳು ಜೀವ ಉಳಿಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ ಎಂದು ವೈದ್ಯರು ತಿಳಿಸಿದ್ದಾರೆ. ವಿಶೇಷವಾಗಿ ವಯೋವೃದ್ಧರು, ರಕ್ತದೊತ್ತಡ (ಬಿ.ಪಿ), ಸಕ್ಕರೆ ಕಾಯಿಲೆ ಅಥವಾ ಕೊಲೆಸ್ಟರಾಲ್ ಸಮಸ್ಯೆ ಹೊಂದಿರುವವರು ಎದೆನೋವು ಅನುಭವಿಸಿದಾಗ, ಆಸ್ಪತ್ರೆಗೆ ತಲುಪುವವರೆಗೂ ಸಮಯ ಗಳಿಸುವುದು ಅತ್ಯಂತ ಮುಖ್ಯ ಎಂದು ವೈದ್ಯ ತಜ್ಞರಾದ ಡಾ. ಮಹೇಂದ್ರಕುಮಾರ್ ಸಲಹೆ ನೀಡಿದ್ದಾರೆ.
ತುರ್ತು ಸಂದರ್ಭದಲ್ಲಿ ವೈದ್ಯರು ತಕ್ಷಣ ಲಭ್ಯವಿಲ್ಲದಿದ್ದರೆ, ಕೆಲ ಸಾಮಾನ್ಯ ಔಷಧಿಗಳನ್ನು ಬಳಸುವುದರಿಂದ ಹೃದಯಕ್ಕೆ ಆಗುವ ಹಾನಿಯನ್ನು ಕಡಿಮೆ ಮಾಡಬಹುದಾಗಿದೆ. ಇದು ಹೃದಯಾಘಾತ (Myocardial Infarction) ತೀವ್ರತೆಯನ್ನು ನಿಯಂತ್ರಿಸಲು ಸಹಾಯಕವಾಗುತ್ತದೆ ಹಾಗೂ ಮುಂದಿನ ಚಿಕಿತ್ಸೆಗಾಗಿ ವೈದ್ಯರಿಗೆ ಅಗತ್ಯ ಸಮಯವನ್ನು ಒದಗಿಸುತ್ತದೆ.
ತುರ್ತು ಸಂದರ್ಭದಲ್ಲಿ jotಬೇಕಾದ ಮಾತ್ರೆಗಳು:
- Ecosprin 150 mg – 2 ಮಾತ್ರೆಗಳು
- Clopidogrel 150 mg – 1 ಮಾತ್ರೆ
- Atorvastatin 40 mg – 1 ಮಾತ್ರೆ
- Pantoprazole 40 mg – 1 ಮಾತ್ರೆ
ಮಾತ್ರೆಗಳನ್ನು ತೆಗೆದುಕೊಳ್ಳುವ ವಿಧಾನ:
- Ecosprin (Aspirin 300 mg): ಎರಡು ಮಾತ್ರೆಗಳನ್ನು ಜಗಿದು ತೆಗೆದುಕೊಳ್ಳಬೇಕು. ಇದರಿಂದ ಔಷಧವು ಶೀಘ್ರವಾಗಿ ರಕ್ತದಲ್ಲಿ ಬೆರೆತು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
- ಉಳಿದ ಮೂರು ಮಾತ್ರೆಗಳು (Clopidogrel, Atorvastatin, Pantoprazole): ಸ್ವಲ್ಪ ನೀರಿನೊಂದಿಗೆ ಕೂಡಲೇ ನುಂಗಬೇಕು.
ಮುಖ್ಯ ಸೂಚನೆಗಳು:
- ಯಾವುದೇ ವಿರಾಮವಿಲ್ಲದೆ ಎಲ್ಲಾ ಮಾತ್ರೆಗಳನ್ನೂ ಒಂದೇ ವೇಳೆ ತೆಗೆದುಕೊಳ್ಳಬೇಕು.
- ರೋಗಿಯನ್ನು ಆರಾಮದಾಯಕ ಸ್ಥಿತಿಯಲ್ಲಿ ಕುಳ್ಳಿರಿಸಬೇಕು ಅಥವಾ ಮಲಗಿಸಬೇಕು (ಮಂಡಿ ಮಡಚಿಕೊಂಡು ಕುಳಿತಿರುವ ಸ್ಥಿತಿ ಉತ್ತಮ).
- ತಕ್ಷಣವೇ ಆಂಬುಲೆನ್ಸ್‌ಗೆ (102 ಅಥವಾ 108) ಕರೆ ಮಾಡಬೇಕು. ಈ ಕ್ರಮವು ಆಸ್ಪತ್ರೆಗೆ ತಲುಪುವವರೆಗೂ ಸಮಯ ಗಳಿಸಲು ಮಾತ್ರ ಸಹಾಯಕ.
ಈ ಸಂದರ್ಭಗಳಲ್ಲಿ ಮಾತ್ರೆಗಳನ್ನು ತೆಗೆದುಕೊಳ್ಳಬಾರದು:
- Aspirin ಅಥವಾ ರಕ್ತ ಹದಗೆಡುವ ಔಷಧಿಗಳಿಗೆ ಅಲರ್ಜಿ ಇದ್ದರೆ
- ಹೊಟ್ಟೆಗಾಯ ಅಥವಾ ಒಳರಕ್ತಸ್ರಾವ ಇರುವವರು
- ವ್ಯಕ್ತಿ ಅಚೇತನ ಸ್ಥಿತಿಯಲ್ಲಿದ್ದರೆ ಅಥವಾ ನುಂಗಲು ಅಸಾಧ್ಯವಾದರೆ
ವೈದ್ಯಕೀಯ ಸಲಹೆ ಅವಶ್ಯ:
ಈ ವಿಧಾನವನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸಿ ದೃಢೀಕರಿಸಿಕೊಳ್ಳುವುದು ಅತ್ಯಂತ ಮುಖ್ಯ. ತುರ್ತು ಪರಿಸ್ಥಿತಿಯಲ್ಲಿ ಇದು ಕೇವಲ ಪ್ರಾಥಮಿಕ ನೆರವು ಮಾತ್ರವಾಗಿದ್ದು, ಸಂಪೂರ್ಣ ಚಿಕಿತ್ಸೆಗೆ ಆಸ್ಪತ್ರೆಗೆ ತೆರಳುವುದು ಅನಿವಾರ್ಯ ಎಂದು ತಜ್ಞರು ಎಚ್ಚರಿಸಿದ್ದಾರೆ.




