ಕೇಂದ್ರ‌ ಬಜೆಟ್ ಗೆ ಕ್ಷಣಗಣನೆ; 9ನೇ ಬಾರಿ ಬಜೆಟ್ ಮಂಡಿಸಲಿರುವ ನಿರ್ಮಲಾ ಸೀತಾರಾಮನ್!

0
72

ನವದೆಹಲಿ, ಜ.31: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ಕೇಂದ್ರ ಬಜೆಟ್‌ ಮಂಡನೆ ಮಾಡಲಿದ್ದಾರೆ. ಇದು ಅವರ ಸತತ ಒಂಬತ್ತನೇ ಬಜೆಟ್‌ ಆಗಿದ್ದು, ಈ ಮೂಲಕ ಅವರು ಇತಿಹಾಸ ಬೆರೆಯಲಿದ್ದಾರೆ.

2019ರ ಮೇ 31ರಂದು ಕೇಂದ್ರ ಹಣಕಾಸು ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಿರ್ಮಲಾ ಸೀತಾರಾಮನ್, ನಿರಂತರವಾಗಿ ಅತ್ಯಧಿಕ ಅವಧಿಗೆ ಈ ಹುದ್ದೆಯನ್ನು ನಿರ್ವಹಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೋವಿಡ್‌ ಸಾಂಕ್ರಾಮಿಕ, ಜಾಗತಿಕ ಆರ್ಥಿಕ ಬಿಕ್ಕಟ್ಟುಗಳು ಸೇರಿದಂತೆ ಹಲವು ಸವಾಲಿನ ಸಂದರ್ಭಗಳಲ್ಲಿ ದೇಶದ ಹಣಕಾಸು ಹೊಣೆಯನ್ನು ಸಮರ್ಥವಾಗಿ ನಿಭಾಯಿಸಿದವರು ಎಂಬ ಶ್ಲಾಘನೆ ನಿರ್ಮಲಾ ಸೀತಾರಾಮನ್ ಅವರಿಗೆ ಸಲ್ಲುತ್ತದೆ.

ಅವರ ಅಧಿಕಾರಾವಧಿಯಲ್ಲಿ ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕ ವ್ಯವಸ್ಥೆಗಳ ಪೈಕಿ ಒಂದಾಗಿ ಹೊರಹೊಮ್ಮಿದೆ. ಜನವರಿ 31ರ ವೇಳೆಗೆ ಹಣಕಾಸು ಸಚಿವೆ ಆಗಿ ಅವರ ಸೇವೆಗೆ ಆರು ವರ್ಷ ಎಂಟು ತಿಂಗಳು ಪೂರ್ಣಗೊಂಡಿದ್ದು, ಭಾನುವಾರ ಬಜೆಟ್‌ ಮಂಡನೆಯೊಂದಿಗೆ ಸತತ ಒಂಬತ್ತನೇ ಬಾರಿ ಬಜೆಟ್‌ ಪ್ರಸ್ತುತಪಡಿಸಿ ಹೊಸ ದಾಖಲೆಯನ್ನು ನಿರ್ಮಿಸಲಿದ್ದಾರೆ.

LEAVE A REPLY

Please enter your comment!
Please enter your name here