ಕೇರಳ ರಾಜಧಾನಿಯಲ್ಲಿ ಬಿಜೆಪಿ ಜಯಭೇರಿ; ಎನ್.ಡಿ.ಎ ಮೈತ್ರಿ ಕೂಟಕ್ಕೆ ಬರೊಬ್ಬರಿ 50 ಸೀಟು!

0
59

ತಿರುವನಂತಪುರಂ, ಡಿ.13: ಕೇರಳ ರಾಜಕೀಯದಲ್ಲಿ ಹೊಸ ಅಲೆ ಎದ್ದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಕಳೆದ 45 ವರ್ಷಗಳಿಂದ ಕಮ್ಯೂನಿಸ್ಟ್ ಆಧಿಪತ್ಯವಿದ್ದ ತಿರುವನಂತಪುರಂ ಕಾರ್ಪೋರೇಷನ್ ಚುನಾವಣೆಯಲ್ಲಿ ಎನ್.ಡಿ.ಎ ಮೈತ್ರಿಕೂಟ ಬರೊಬ್ಬರಿ 50 ಸ್ಥಾನಗಳನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದೆ.

ತಿರುವಂತಪುರಂ ಕಾರ್ಪೋರೇಶನ್‌ನ 101 ಸ್ಥಾನಗಳ ಪೈಕಿ 100 ಸ್ಥಾನಗಳಿಗೆ ಚನಾವಣೆ ನಡೆದಿತ್ತು. ಒಂದು ಸ್ಥಾನದ ಅಭ್ಯರ್ಥಿ ನಿಧನರಾದ ಹಿನ್ನಲೆಯಲ್ಲಿ ಚುನಾವಣೆಯನ್ನು ಮುಂದೂಡಲಾಗಿದೆ. 100ರಲ್ಲಿ ಬಿಜೆಪಿ ನೇತೃತ್ವದ ಎನ್‌.ಡಿ.ಎ 50 ಸ್ಥಾನ ಗೆಲ್ಲುವ ಮೂಲಕ ತಿರುವಂತನಪುರಂ ಕಾರ್ಪೋರೇಶನ್ ಗೆದ್ದುಕೊಂಡಿದೆ. ಕಳೆದ 45 ವರ್ಷಗಳಿಂದ ಎಲ್‌.ಡಿ.ಎಫ್ ಈ ತಿರುವನಂತಪುರಂ ಕಾರ್ಪೋರೇಶನ್‌ನಲ್ಲಿ ಅಧಿಕಾರ ನಡೆಸಿದೆ. ಸುದೀರ್ಘ ಅಧಿಕಾರ ಅನುಭವಿಸಿದ ಎಲ್‌.ಡಿ.ಎಫ್‌ಗೆ ಬಿಜೆಪಿ ದೊಡ್ಡ ಶಾಕ್ ನೀಡಿದೆ. ಎಲ್‌.ಡಿ.ಎಫ್ (ಕಮ್ಯೂನಿಸ್ಟ್) 29 ಸ್ಥಾನಕ್ಕೆ ಕುಸಿದರೆ, ಇತ್ತ ಯು.ಡಿ.ಎಫ್ (ಕಾಂಗ್ರೆಸ್) 19 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಇನ್ನು ಇತರರು 2 ಸ್ಥಾನ ಗೆದ್ದುಕೊಂಡಿದ್ದಾರೆ. ತಿರುವನಂತಪುರಂನಲ್ಲಿ 50 ಸ್ಥಾನ ಗೆದ್ದು ಅತೀ ದೊಡ್ಡ ಪಕ್ಷವಾಗಿರುವ ಎನ್‌.ಡಿ.ಎ ಇದೇ ಮೊದಲ ಬಾರಿಗೆ ಕೇರಳದಲ್ಲಿ ಅಧಿಕಾರಕ್ಕೇರುತ್ತಿದೆ.

ಎಲ್‌.ಡಿ.ಎಫ್ ಹಾಗೂ ಯು.ಡಿ.ಎಫ್ ಭದ್ರಕೋಟೆಯಲ್ಲಿ ಬಿಜೆಪಿ ನೇತೃತ್ವದ ಎನ್‌.ಡಿ.ಎ ಭಾರಿ ಗೆಲುವು ಕಂಡಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇಲ್ಲಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಶಶಿ ತರೂರ್ ಸ್ಪರ್ಧಿಸಿ ಗೆದ್ದಿದ್ದರು.

LEAVE A REPLY

Please enter your comment!
Please enter your name here