ಸಂಡೂರು ವಿಧಾನಸಭೆ ಉಪಚುನಾವಣೆ:ಸೂಕ್ತ ದಾಖಲೆ ಇಲ್ಲದ 27.50 ಲಕ್ಷ ನಗದು ಹಣ ಜಪ್ತಿ

0
159
Advertisement

ಸಂಡೂರು ವಿಧಾನಸಭೆ ಉಪಚುನಾವಣೆ ಹಿನ್ನಲೆಯಲ್ಲಿ ಸಂಡೂರು ವ್ಯಾಪ್ತಿಯ ಡಿ.ಬಸಾಪುರ ಗ್ರಾಮದ ಚೆಕ್‌ಪೋಸ್ಟ್ನಲ್ಲಿ ಭಾನುವಾರ ಸೂಕ್ತ ದಾಖಲೆ ಇಲ್ಲದ 27,50,000 ರೂ. ನಗದು ಹಣವನ್ನು ಜಪ್ತಿ ಮಾಡಲಾಗಿದೆ ಎಂದು ಸಂಡೂರು ವಿಧಾನಸಭೆ ಉಪಚುನಾವಣೆಯ ಚುನಾವಣಾಧಿಕಾರಿ ರಾಜೇಶ್.ಹೆಚ್.ಡಿ ಅವರು ತಿಳಿಸಿದ್ದಾರೆ.

ಎಸ್‌ಎಸ್‌ಟಿ ತಂಡದ ಮುಖ್ಯಸ್ಥ ಅಲಗೇರಿ ಲಿಂಗಪ್ಪ ಅವರ ತಂಡವು ಜಪ್ತಿ ಮಾಡಿದ್ದು, 10 ಲಕ್ಷಕ್ಕಿಂತ ಹೆಚ್ಚು ಹಣ ಕಂಡುಬಂದಿದ್ದರಿಂದ ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

LEAVE A REPLY

Please enter your comment!
Please enter your name here