ವಾಲ್ಮೀಕಿ ನಿಗಮದ ಹಣ ಲೂಟಿಕೋರರಿಗೆ ಪಾಠ ಕಲಿಸಿ; ರಘು ಕೌಟಿಲ್ಯ

0
179
Advertisement

ಸಂಡೂರು ವಿಧಾನಸಭಾ ಉಪಚುನಾವಣೆ ಇಡೀ ದೇಶದ ಗಮನವನ್ನು ಸೆಳೆದಿದೆ. ಕಾರಣ ಅತ್ಯಂತ ಪ್ರತಿಷ್ಠೆಯ ಕಣವಾಗಿದ್ದು ಗೆಲ್ಲುವ ವಿಶ್ವಾಸ ಹೊಂದಿದ್ದೇವೆ, ಮತದಾರ ಪ್ರಭುಗಳು ಸ್ವಾಭಿಮಾನದ ಮತ ಹಾಕಬೇಕು, ಕಾರಣ ವಾಲ್ಮೀಕಿ ನಿಗಮದ ಹಣ ಲೂಟಿಕಾರರಿಗೆ ಜನತಾ ನ್ಯಾಯಾಲಯದಲ್ಲಿ ಶಿಕ್ಷೆ ನಿಡಬೇಕು
ಎಂದು ಕರ್ನಾಟಕ ರಾಜ್ಯ ಬಿ.ಜೆ.ಪಿ ಕಾರ್ಯದರ್ಶಿ ರಘುಕೌಟಿಲ್ಯ ತಿಳಿಸಿದರು.

ಅವರು ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ರಾಜ್ಯ ಕಾಂಗ್ರೇಸ್ ಹಗರಣಗಳ ಸುಳಿಯಲ್ಲಿ ಸಿಲುಕಿದೆ, ಒಂದಾದ ನಂತರ ಒಂದರಂತೆ ಹಗರಣಗಳಲ್ಲಿ ಮುಳುಗಿದೆ. ಪ.ಪಂ. ಮೀಸಲು ಕ್ಷೇತ್ರವಾದ ಸಂಡೂರು ಪ.ಪಂ. ವಾಲ್ಮೀಕಿ ನಿಗಮದ ಹಣವನ್ನು ಲೋಕಸಭಾ ಚುನಾವಣೆಯಲ್ಲಿ ಬಳಕೆ ಮಾಡಿ ವಾಲ್ಮೀಕಿ ಸಮಾಜದ ಜನತೆ ಅಗಿರುವ ಮೋಸವನ್ನು ಜನತಾ ನ್ಯಾಯಾಲಯದಲ್ಲಿ ಸ್ವಾಭಿಮಾನದ ಮತ ಹಾಕುವ ಮೂಲಕ ನ್ಯಾಯ ನೀಡಬೇಕು.

ಬಿಜೆಪಿ ಪಕ್ಷದ ಅಭ್ಯರ್ಥಿ ಬಂಗಾರು ಹನುಮಂತು ವಾಲ್ಮೀಕಿ ಸಮಾಜದ ಯುವ ನಾಯಕನಾಗಿದ್ದು. ಅತನನ್ನು ಗೆಲ್ಲಿಸುವ ಮೂಲಕ ಪ್ರಗತಿಗೆ ನಾಂದಿಹಾಡಬೇಕು. ಕಾಂಗ್ರೇಸ್ ಪಕ್ಷ ಐದು ಗ್ಯಾರಂಟಿಗೆ ಹಣವಿಲ್ಲದೆ ಚುನಾವಣೆ ಬಂದಾಗ ಮಾತ್ರ ಹಣವನ್ನು ಹಾಕುತ್ತಿದ್ದಾರೆ, ಅದರೆ ಏಕೆ ಪ್ರತಿ ತಿಂಗಳು ಹಾಕುತ್ತಿಲ್ಲ, ಕಾರಣ ಅಧಿಕಾರಿಗಳ ತಪ್ಪೋ, ಅಥವಾ ಖಜಾನೆಯಲ್ಲಿ ಹಣವಿಲ್ಲವೋ, ಇಂದು ಕರ್ನಾಟಕ ಪ್ರಗತಿಯ ರಾಜ್ಯವಾಗಿತ್ತು ಈಗ ಹಿಂದಕ್ಕೆ ಹೋಗುತ್ತಿದೆ ಕಾರಣ ಎಲ್ಲಿಯೂ ಸಹ ಅಭಿವೃದ್ದಿ ಕಾರ್ಯಗಳು ನಡೆಯುತ್ತಿಲ್ಲ ಬರೀ ಗ್ಯಾರಂಟಿಗಳಿಗೆ ಹಣ ಜೋಡಿಸುವುದೇ ಅಗಿದೆ, ಈ ಹಿಂದೆ ನಾವು ಕಪ್ಪು ಹಣೆ, ಹವಾಲ ಇಂತಹ ಹಣ ಕೇಳಿದ್ದೇವು, ಅದರೆ ಸಿದ್ದರಾಮಯ್ಯನವರ ಸರ್ಕಾರ ಸರ್ಕಾರದ ಖಜಾನೆಗೆ ಖನ್ನಾ ಹಾಕಿ ನೇರವಾಗಿ ವಾಲ್ಮೀಕಿ ಹಗರಣದ ಹಣವನ್ನು ಲೂಟಿ ಮಾಡಿದೆ ಎಂದು ಅರೋಪಿಸಿದರು. ಸಿದ್ದರಾಮಯ್ಯನವರು ಟೆಂಪಲ್ ರನ್ ಪ್ರಾರಂಭಿಸಿದ್ದಾರೆ, ಅಭಿವೃದ್ದಿ ಶೂನ್ಯವಾಗಿದೆ ಎಂದು ಅರೋಪಿಸಿ ಬಿಜೆಪಿ ಗೆಲ್ಲಿಸಿ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಸೋಮಶೇಖರ, ರಾಜ್ಯ ಕಾರ್ಯದರ್ಶಿಗಳಾದ ಅಯ್ಯಳಿ ತಿಮ್ಮಪ್ಪ, ರಾಜ್ಯ ಕಾರ್ಯಕಾರಿಣಿ ಸದಸ್ಯ ಸಿಂಧನೂರು ವೆಂಕಟೇಶ್, ತಾಲೂಕು ಅಧ್ಯಕ್ಷ ನಾನಾ ಸಾಹೇಬ್ ನಿಕ್ಕಂ, ಮಹಿಳಾ ಪ್ರತಿನಿಧಿ ಆಶ್ವಿನಿ, ಹೊಸಪೇಟೆ ಅಧ್ಯಕ್ಷ ಲಿಂಗಪ್ಪ, ಅರ್.ಟಿ. ರಘು, ದರೋಜಿ ರಮೇಶ್, ರಾಜೇಂದ್ರ ಯಾದವ ಇತರರು ಉಪಸ್ಥಿತರಿದ್ದರು.

Advertisement

LEAVE A REPLY

Please enter your comment!
Please enter your name here