ಎಲ್ಲವೂ ಸರಿಯಾಗಿದ್ದರೆ ನಟ ದರ್ಶನ್ ಇಂದು ಗೌರಿ ಗಣೇಶ ಹಬ್ಬವನ್ನು ಮನೆಯಲ್ಲಿ ಕುಟುಂಬದ ಜೊತೆ ಆಚರಿಸುತ್ತಿದ್ದರು. ಆದರೆ, ಈ ಬಾರಿ ಸಹ ಹಬ್ಬವನ್ನು ಜೈಲಿನಲ್ಲೇ ಕಳೆಯಬೇಕಾಗಿದೆ. ಸಾಮಾನ್ಯವಾಗಿ ದರ್ಶನ್ ಹಬ್ಬದಂದು ಶುಭಾಶಯ ಸಂದೇಶವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಪದ್ಧತಿ ಹೊಂದಿದ್ದರು. ಕಳೆದ ವರ್ಷವೂ ಹಬ್ಬವನ್ನು ಜೈಲಿನಲ್ಲೇ ಆಚರಿಸಿದ್ದರು, ಈ ವರ್ಷವೂ ಅದೇ ಪರಿಸ್ಥಿತಿ ಮುಂದುವರಿದಿದೆ.
ಈ ನಡುವೆ, ಪತ್ನಿ ವಿಜಯಲಕ್ಷ್ಮಿ ಪತಿ ಜೊತೆಗಿನ ಫಾರ್ಮ್‌ಹೌಸ್‌ನಲ್ಲಿ ಪೂಜಾ ಸಂದರ್ಭದಲ್ಲಿ ತೆಗೆದ ಫೋಟೋವನ್ನು ಹಂಚಿಕೊಂಡು ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯ ಕೋರಿದ್ದಾರೆ. ದರ್ಶನ್ ಹೊರಗಡೆ ಇದ್ದಿದ್ದರೆ ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಿದ್ದರು ಎಂಬ ನಿರೀಕ್ಷೆ ಇದ್ದರೂ, ಈ ಬಾರಿಯೂ ಪರಪ್ಪನ ಅಗ್ರಹಾರ ಜೈಲಿನಲ್ಲೇ ಗಣೇಶ ಪ್ರಸಾದ ಸವಿಯಬೇಕಾದ ಸ್ಥಿತಿ ಬಂದಿದೆ.
ಮತ್ತಷ್ಟು ಓದಿ: ಆರ್‌ಎಸ್‌ಎಸ್ ಗೀತೆ ವಿವಾದ ಪಕ್ಷ ನಿಷ್ಠೆ ಪ್ರಶ್ನೆ ಮಾಡಿದವರಿಗೆ ಡಿಕೆ ಶಿವಕುಮಾರ್ ಖಡಕ್ ಉತ್ತರ
Advertisement 
