Advertisement 

ಬಳ್ಳಾರಿ: ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಗಣೇಶ ಮೆರವಣಿಗೆಯ ವೇಳೆ ಯುವಕನೊಬ್ಬ ಅಪಾಯಕಾರಿ ಹುಚ್ಚಾಟ ಮೆರೆದಿದ್ದಾನೆ.
ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಸಾವಿರಾರು ಜನರ ನಡುವೆ, ಯುವಕನು ಪಟಾಕಿ ಬಾಕ್ಸ್‌ನ್ನು ತಲೆಯ ಮೇಲೆ ಇಟ್ಟು ಸಿಡಿಸಿದ ಪರಿಣಾಮ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಜನರು ಬಾಕ್ಸ್‌ನ್ನು ಕಸಿಯಲು ಯತ್ನಿಸಿದರೂ ಆತ ತನ್ನ ಹುಚ್ಚಾಟವನ್ನು ಮುಂದುವರೆಸಿದ್ದ.
ಸ್ಥಿತಿಗತಿಯನ್ನು ಗಮನಿಸಿದ ಪೊಲೀಸರು ತಕ್ಷಣ ಹಸ್ತಕ್ಷೇಪ ಮಾಡಿ, ಪಟಾಕಿ ಬಾಕ್ಸ್‌ನ್ನು ಕಸಿದುಕೊಂಡು ಯುವಕನನ್ನು ಗದರಿಸಿ ಅಲ್ಲಿಂದ ದೂರ ಕಳಿಸಿದರು.
Advertisement 
