ಆರ್.ಟಿ.ಐ ಕಾರ್ಯಕರ್ತರಿಗೆ ರಕ್ಷಣೆ ಮರೀಚಿಕೆ; ಲಾಯರ್ ಜಗದೀಶ್ ತೀವ್ರ ಆಕ್ರೋಶ!

0
18
Advertisement

ಬೆಂಗಳೂರು, ಜ.24: ಪ್ರಜಾಪ್ರಭುತ್ವದಲ್ಲಿ ನಾಗರಿಕರು ಪ್ರಶ್ನೆ ಮಾಡುವ ಹಕ್ಕು ಹೊಂದಿದ್ದಾರೆ. ಅದಕ್ಕಾಗಿಯೇ ಮಾಹಿತಿ ಹಕ್ಕು ಕಾಯ್ದೆ (RTI) ಅಸ್ತಿತ್ವಕ್ಕೆ ಬಂದಿದೆ. ಆದರೆ, ಈ ಹಕ್ಕನ್ನು ಬಳಸುವುದೇ ಇಂದು ಅನೇಕ ಸಂದರ್ಭಗಳಲ್ಲಿ ಜೀವಭಯಕ್ಕೆ ಕಾರಣವಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಜಗದೀಶ್ ಲಾಯರ್ ಆತಂಕ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಧ್ವನಿ ಎತ್ತಿರುವ ಅವರು, ಆರ್.ಟಿ.ಐ ಕಾರ್ಯಕರ್ತರಿಗೆ ರಕ್ಷಣೆ ಮರೀಚಿಕೆ; ಲಾಯರ್ ಜಗದೀಶ್ ತೀವ್ರ ಆಕ್ರೋಶ! ಮೂಲಕ ಪ್ರಶ್ನೆ ಮಾಡುವುದರಿಂದ ದೇಶದಲ್ಲಿ ಅನೇಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸತ್ಯನಿಷ್ಠ ಅಧಿಕಾರಿಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೆಲವರು ಆತ್ಮಹತ್ಯೆಗೆ ಶರಣಾಗುತ್ತಿದ್ದರೆ, ಇನ್ನೂ ಕೆಲವರು ಕೊಲೆಯಾಗುತ್ತಿದ್ದಾರೆ. ಭಾರತದಲ್ಲಿಯೂ, ಕರ್ನಾಟಕದಲ್ಲಿಯೂ ಇಂತಹ ಪ್ರಕರಣಗಳು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿವೆ ಎಂದು ಹೇಳಿದರು.

ಸಾರ್ವಜನಿಕ ವಲಯದಲ್ಲಿ ಕಾರ್ಯಪ್ರವೃತರಾಗಿರುವವರು, ಭ್ರಷ್ಟಾಚಾರವನ್ನು ಪ್ರಶ್ನಿಸುವವರು ಹಾಗೂ ಆರ್.ಟಿ.ಐ ಬಳಸುವ ವಿಸ್ಲ್‌ಬ್ಲೋವರ್‌ಗಳಿಗೆ ಸರಕಾರ ಸಮರ್ಪಕ ರಕ್ಷಣೆ ನೀಡುತ್ತಿದೆಯೇ ಎಂಬುದೇ ಇಂದು ದೊಡ್ಡ ಪ್ರಶ್ನೆಯಾಗಿದೆ. ತಪ್ಪು, ಅಕ್ರಮ ಹಾಗೂ ಹಗರಣಗಳನ್ನು ಸರ್ಕಾರದ ಗಮನಕ್ಕೆ ತರುವ ವಿಸ್ಲ್‌ಬ್ಲೋವರ್‌ಗಳಿಗೆ ರಕ್ಷಣೆ ನೀಡಬೇಕಾದ ಕಾಯ್ದೆಯನ್ನು 2015ರಲ್ಲಿ ಮೂಲೆಗೆ ತಳ್ಳಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

RTI ಮೂಲಕ ಮಾಹಿತಿ ಕೇಳುವವರ ಮೇಲೆ ಬೆದರಿಕೆ, ಜೀವ ಬೆದರಿಕೆ ಹಾಗೂ ಕೊಲೆ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ. 2005ರಿಂದ ಇದುವರೆಗೆ 500ಕ್ಕೂ ಹೆಚ್ಚು ವಿಸ್ಲ್‌ಬ್ಲೋವರ್‌ಗಳು ಕೊಲೆಯಾಗಿದ್ದಾರೆ, ಕಾಣೆಯಾಗಿದ್ದಾರೆ ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಅಂಕಿ-ಅಂಶಗಳು ಸ್ಥಿತಿಯ ಗಂಭೀರತೆಯನ್ನು ತೋರಿಸುತ್ತವೆ ಎಂದು ಜಗದೀಶ್ ಲಾಯರ್ ಹೇಳಿದ್ದಾರೆ.

ಉನ್ನತ ಸ್ಥಾನದಲ್ಲಿರುವ ಪೊಲೀಸ್ ಅಧಿಕಾರಿಗಳೇ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಜವಾಬ್ದಾರಿಯಿಂದ ದೂರ ಉಳಿಯುತ್ತಿರುವ ಸಂದರ್ಭದಲ್ಲಿ ಸರಕಾರ ಏನು ಕ್ರಮ ಕೈಗೊಳ್ಳುತ್ತಿದೆ ಎಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮಾಜದ ಹಿತಕ್ಕಾಗಿ ಧ್ವನಿ ಎತ್ತುವ ವಿಸ್ಲ್‌ಬ್ಲೋವರ್‌ಗಳ ರಕ್ಷಣೆಗಾಗಿ ತಕ್ಷಣ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

Advertisement

LEAVE A REPLY

Please enter your comment!
Please enter your name here