ತರಕಾರಿ ಬೆಲೆ ಗಗನಕ್ಕೆ; ಚಳಿಯಲ್ಲೂ ಬೆವರಿದ ಗ್ರಾಹಕರು! ಟೊಮೆಟೊ ಕೆಜಿಗೆ 80 ನುಗ್ಗೆಕಾಯಿ 600!

0
20
Advertisement

ಬೆಂಗಳೂರು, ಡಿ.1: ಅಕಾಲಿಕ ಮಳೆ ಹಾಗೂ ಚೆಂಡಮಾರುತದ ಹಾವಳಿಯಿಂದ ತರಕಾರಿಗಳ ದರ ದಿಢೀರ್‌ ಏರಿಕೆಯಾಗಿದ್ದು, ಗ್ರಾಹಕರಿಗೆ ಚಳಿಯಲ್ಲೂ ಬಿಸಿ ಮುಟ್ಟಿಸಿದೆ. ಟೊಮೆಟೊ ಕೇಜಿಗೆ ರೂ 60ರಿಂದ 80ರಷ್ಟಿದ್ದರೆ, ನುಗ್ಗೆಕಾಯಿಗೆ ಬರೊಬ್ಬರಿ 600 ರೂ ಆಗಿದೆ. ರಾಜ್ಯದಲ್ಲಿ ಇಳುವರಿ ಸರಿಯಾದ ರೀತಿಯಲ್ಲಿ ಆಗಿಲ್ಲವಾದ್ದರಿಂದ ಅನ್ಯ ರಾಜ್ಯಗಳಿಂದ ಬರುವ ತರಕಾರಿಗಳಿಗೆ ಬೇಡಿಕೆ ಹೆಚ್ಚಾಗಿದ್ದು ದರಗಳು ಗಗನಕ್ಕೇರಿವೆ.

ಅವರೆಕಾಯಿ, ಗ್ರೀನ್‌ ಬಟಾಣಿ, ಬೀನ್ಸ್‌, ತೊಂಡೆಕಾಯಿ, ತೊಗರಿಕಾಯಿ, ಬೆಂಡೆಕಾಯಿ, ಕ್ಯಾರೆಟ್‌, ಹಸಿಮೆಣಸಿನಕಾಯಿ ಸೇರಿದಂತೆ ಬಹುತೇಕ ತರಕಾರಿಗಳ ಬೆಲೆಗಳು ನೂರರ ಗಡಿಯಲ್ಲೇ ಇವೆ. ಹವಮಾನ ವೈಪರಿತ್ಯದಿಂದ ತರಕಾರಿಗಳು ಸರಿಯಾದ ಪ್ರಮಾಣದಲ್ಲಿ ಬೆಳೆಯದೆ, ಬೇಡಿಕೆಗೆ ತಕ್ಕಂತೆ ಪೂರೈಕೆಯಾಗುತ್ತಿಲ್ಲ. ಹೀಗಾಗಿ ತರಕಾರಿಗಳ ಬೆಲೆ ಹೆಚ್ಚಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ. ತರಕಾರಿಗಳ ಈಗಿನ ಮಾರುಕಟ್ಟೆಯ ಬೆಲೆಗಳನ್ನು ಕೆಳಗೆ ಕೊಡಲಾಗಿದೆ.

ನುಗ್ಗೆಕಾಯಿ – 500 ರಿಂದ 600 ರುಪಾಯಿ.

ಅವರೆಕಾಯಿ – 80 ರಿಂದ 100 ರುಪಾಯಿ.

ಗ್ರೀನ್ ಬಟಾಣಿ – 80 ರಿಂದ 100 ರುಪಾಯಿ.

ಬೀನ್ಸ್ – 60 ರಿಂದ 80 ರುಪಾಯಿ.

ತೊಂಡೆಕಾಯಿ – 80 ರಿಂದ 100 ರುಪಾಯಿ.

ತೊಗರಿಕಾಯಿ – 70 ರಿಂದ 80 ರುಪಾಯಿ.

ಕ್ಯಾರೆಟ್ – 60 ರಿಂದ 80 ರುಪಾಯಿ.

ಬೀಟ್​​​ ರೂಟ್ – 60 ರಿಂದ 60 ರುಪಾಯಿ.

ಹಣ್ಣು ಹುರಳಿಕಾಯಿ – 100 ರಿಂದ 120 ರುಪಾಯಿ.

ಹಸಿ ಮೆಣಸಿನಕಾಯಿ – 80 ರಿಂದ 100 ರುಪಾಯಿ.

ಬೆಂಡೇಕಾಯಿ – 60 ರಿಂದ 80 ರುಪಾಯಿ.

ಟೊಮೆಟೊ – 60 ರಿಂದ 80 ರುಪಾಯಿ.

Advertisement

LEAVE A REPLY

Please enter your comment!
Please enter your name here