ಸಿನಿಮಾ ಜಗತ್ತಲ್ಲಿ ಕಾಂತಾರ ಮೋಡಿ; ಮೊದಲ ದಿನವೇ 80 ಕೋಟಿ ಕಲೆಕ್ಷನ್

0
70
Advertisement

ಸ್ಟಾರ್ ನಟರಿಂದ ಬಂತು ಪಾಸಟಿವ್ ರಿವ್ಯೂಬೆಂಗಳೂರು ಜಗತ್ತಿನಾದ್ಯಂತ ಕಾಂತಾರ ಸದ್ದು ಬಹಳ ಜೋರಾಗಿದೆ. ನೋಡಿದವರೆಲ್ಲ ಕಾಂತಾರದ ಮ್ಯಾಜಿಕ್ಕಿಗೆ ಮಾರು ಹೋಗಿದ್ದಾರೆ. ವೀಕ್ಷಕರು ಒಂದು ಕಡೆ ಪ್ರತಿಕ್ರಿಯಿಸುತ್ತಿರುವಾಗಲೇ, ಸ್ಟಾರ್ ನಟರು ಆಖಾಡಕ್ಕೆ ಇಳಿದಿದ್ದಾರೆ.

ಈಗಾಗಲೇ ಸಿನಿಮಾ ನೋಡಿದ ಪ್ರಭಾಸ್ , ಯಶ್, ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಯಶ್ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿ, “ಕಾಂತಾರ ಚಾಪ್ಟರ್- 1 ಕನ್ನಡ ಮತ್ತು ಭಾರತೀಯ ಚಿತ್ರರಂಗಕ್ಕೆ ಹೊಸ ಬೆಂಚ್ಮಾರ್ಕ್. ರಿಷಬ್ ಶೆಟ್ಟಿ ನಂಬಿಕೆ, ನಿಮ್ಮ ದೃಢ ನಿಶ್ಚಯ ಮತ್ತು ಭಕ್ತಿ ಪ್ರತಿ ಫ್ರೇಮ್ನಲ್ಲೂ ಎದ್ದು ಕಾಣುತ್ತದೆ. ಬರಹಗಾರ, ನಿರ್ದೇಶಕ ಮತ್ತು ನಟನಾಗಿ, ನಿಮ್ಮ ದೃಷ್ಟಿಕೋನವು ಪರದೆಯ ಮೇಲೆ ನಿಜವಾಗಿಯೂ ತಲ್ಲೀನಗೊಳಿಸುವ ಅನುಭವವಾಗಿ ಬದಲಾಗುತ್ತದೆ. ವಿಜಯ್ ಕಿರಗಂದೂರ್ ಸರ್ ಮತ್ತು ಹೊಂಬಾಲೆ ಫಿಲ್ಮ್ಸ್ಗೆ ಹೃತ್ಪೂರ್ವಕ ಅಭಿನಂದನೆಗಳು. ಮಹತ್ವಾಕಾಂಕ್ಷೆಯ ಯೋಜನೆಗಳಿಗೆ ನಿಮ್ಮ ದೃಷ್ಟಿಕೋನ ಮತ್ತು ಬೇಷರತ್ತಾದ ಬೆಂಬಲವು ನಿರಂತರವಾಗಿ ಉದ್ಯಮದ ಮಟ್ಟವನ್ನು ಹೆಚ್ಚಿಸುತ್ತಿದೆ” ಎಂದು ಬರೆದುಕೊಂಡಿದ್ದಾರೆ.

ರುಕ್ಮಿಣಿ ವಸಂತ್ ಮತ್ತು ಗುಲ್ಶನ್ ದೇವಯ್ಯ, ನೀವು ಅದ್ಭುತ ಪ್ರದರ್ಶನ ನೀಡಿದ್ದೀರಾ. ಅಜನೀಶ್ ನಿಮ್ಮ ಸಂಗೀತವು ಆ ಫ್ರೇಮ್ಗಳಿಗೆ ಜೀವ ತುಂಬುತ್ತದೆ. ಅರವಿಂದ್ ಕಶ್ಯಪ್, ನಿಮ್ಮ ಅದ್ಭುತ ಕ್ಯಾಮೆರಾ ಕೆಲಸವು ಆ ಜಗತ್ತಿಗೆ ಜೀವ ತುಂಬಿದೆ. ಜಯರಾಮ್, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮಿನಾಡ್ ಮತ್ತು ಇಡೀ ಪಾತ್ರವರ್ಗ ಮತ್ತು ಸಿಬ್ಬಂದಿಯ ಅತ್ಯುತ್ತಮ ಕೆಲಸ. ಈ ಚಿತ್ರಕ್ಕೆ ರಾಕೇಶ್ ಪೂಜಾರಿ ನೀಡಿದ ಬೆಳಕಿನ ಕ್ಷಣಗಳು ಈಗ ಅವರ ಪ್ರತಿಭೆಗೆ ಸೂಕ್ತವಾದ ಗೌರವವಾಗಿದೆ. ನೀವೆಲ್ಲರೂ ಒಟ್ಟಾಗಿ ಸಂಪೂರ್ಣವಾಗಿ ಅದ್ಭುತ ಸಿನಿಮಾವನ್ನು ರಚಿಸಿದ್ದೀರಿ” ಎಂದು ಯಶ್ ನೆನೆದುಕೊಂಡಿದ್ದಾರೆ.

ತೆಲುಗು ಸ್ಟಾರ್ ನಟರಾದ ಪ್ರಭಾಸ್ ಕೂಡ ಸಿನಿಮಾ ನೋಡಿ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ” ʼಕಾಂತಾರ: ಚಾಪ್ಟರ್- 1′ ಒಂದು ಅದ್ಭುತ ಸಿನಿಮಾ. ಅದ್ಭುತ ನಟನೆ ಇರುವ ಸಿನಿಮಾ, ಈ ವರ್ಷದ ನಂ.1 ಬ್ಲಾಕ್ ಬಸ್ಟರ್ ಸಿನಿಮಾ ಆಗಲಿದೆ. ರಿಷಬ್ ಶೆಟ್ಟಿ, ವಿಜಯ್ ಕಿರಗಂದೂರು ಹಾಗೂ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಗೆ ಅಭಿನಂದನೆಗಳು” ಎಂದು ಬರೆದುಕೊಂಡಿದ್ದಾರೆ. ಮೂರು ವರ್ಷಗಳ ಹಿಂದೆ ಬಂದಿದ್ದ ‘ಕಾಂತಾರ’ ಚಿತ್ರದ ಪ್ರೀಕ್ವೆಲ್ ಇದಾಗಿದ್ದು, ಕನ್ನಡ ಸಿನಿ ಪ್ರೇಮಿಗಳು ಮಾತ್ರವಲ್ಲದೆ, ಪರಭಾಷಾ ಪ್ರೇಕ್ಷಕರು ಹಾಗೂ ಫಿಲ್ಮ್ ಮೇಕರ್ಸ್ ಕೂಡ ಸಿನಿಮಾ ನೋಡಲು ಕಾಯುತ್ತಿದ್ದರು. ಹೃತಿಕ್ ರೋಷನ್, ಪ್ರಭಾಸ್, ಶಿವಕಾರ್ತಿಕೇಯನ್ ಹಾಗೂ ಪೃಥ್ವಿರಾಜ್ ಸುಕುಮಾರನ್ ಟ್ರೈಲರ್ ರಿಲೀಸ್ ಮಾಡಿ ಶುಭ ಕೋರಿದ್ದರು. ಜ್ಯೂ. ಎನ್.ಟಿ.ಆರ್. ಚಿತ್ರದ ತೆಲುಗು ಪ್ರೀ ರಿಲೀಸ್ ಈ ವೆಂಟ್ಗೆ ಹಾಜರಾಗಿದ್ದರು.

Advertisement

LEAVE A REPLY

Please enter your comment!
Please enter your name here