
ಚಿತ್ರದುರ್ಗ, ಆಗಸ್ಟ್ 22: ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಮನೆ ಹಾಗೂ ಸಂಬಂಧಿಕರ ಮನೆಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಇಂದು ಬೆಳಿಗ್ಗೆ ದಾಳಿ ನಡೆಸಿದ್ದಾರೆ. ಚಳ್ಳಕೆರೆ ಪಟ್ಟಣದಲ್ಲಿರುವ ವೀರೇಂದ್ರ, ಸಹೋದರರಾದ ಕೆ.ಸಿ. ನಾಗರಾಜ ಮತ್ತು ಕೆ.ಸಿ. ತಿಪ್ಪೇಸ್ವಾಮಿ ಮನೆಗಳಲ್ಲಿ ಶೋಧ ನಡೆಯುತ್ತಿದೆ.
40ಕ್ಕೂ ಹೆಚ್ಚು ಅಧಿಕಾರಿಗಳು 20 ವಾಹನಗಳಲ್ಲಿ ಆಗಮಿಸಿ ದಾಳಿ ನಡೆಸಿದ್ದು, ದಾಖಲೆಗಳು ಮತ್ತು ಆರ್ಥಿಕ ವ್ಯವಹಾರಗಳ ಪರಿಶೀಲನೆ ಮುಂದುವರಿದಿದೆ. 2016ರಲ್ಲಿ ನಡೆದ ಐಟಿ ದಾಳಿಯಲ್ಲಿಯೂ ವೀರೇಂದ್ರ ಮನೆ ಬಾತ್‌ರೂಂನಿಂದ ₹5 ಕೋಟಿ ನಗದು ಹಾಗೂ 30 ಕೆ.ಜಿ ಚಿನ್ನ ಪತ್ತೆಯಾಗಿತ್ತು.
ಈ ಬಾರಿ ವೀರೇಂದ್ರ ಒಡೆತನದ ರತ್ನ ಗೋಲ್ಡ್, ರತ್ನ ಮಲ್ಟಿ ಸೋರ್ಸ್, ಪಪ್ಪಿ ಟೆಕ್ನಾಲಜಿ, ರತ್ನ ಗೇಮಿಂಗ್ ಸೊಲ್ಯೂಷನ್ಸ್ ಸೇರಿದಂತೆ ಹಲವು ಕಂಪನಿಗಳಿಂದ ಗೇಮಿಂಗ್ ಆಪ್‌ಗಳಿಗೆ ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ.
ಮತ್ತಷ್ಟು ಓದಿ: ದುಲೀಪ್ ಟ್ರೋಫಿಯಿಂದ ಇಶಾನ್ ಕಿಶನ್ ಹೊರಬಿದ್ದರು – ಕ್ರಿಕೆಟ್ ಸುದ್ದಿ 2025
ಚಿತ್ರದುರ್ಗ, ಚಳ್ಳಕೆರೆ, ಬೆಂಗಳೂರು ಮತ್ತು ಗೋವಾ ಸೇರಿ ಒಟ್ಟು 17 ಕಡೆ ಶೋಧ ಕಾರ್ಯ ನಡೆದಿದೆ. ಸದ್ಯ ವೀರೇಂದ್ರ ಹೊರರಾಜ್ಯದಲ್ಲಿದ್ದು, ಇಡಿ ದಾಳಿಯಿಂದ ಮತ್ತೊಂದು ಅಕ್ರಮ ಬಯಲಾಗುತ್ತದೆಯೇ ಎಂಬ ಕುತೂಹಲ ಮೂಡಿದೆ.



